ಕರ್ನಾಟಕ

karnataka

ETV Bharat / health

8 ಗಂಟೆ ಕೆಲಸ, 8 ಗಂಟೆ ವೈಯಕ್ತಿಕ ಕ್ಷಣ, 8 ಗಂಟೆ ನಿದ್ರೆ ; 888 ಜೀವನಶೈಲಿ ಅನುಸರಿಸುತ್ತಿದ್ದೀರಾ? : ಏನಿದು 8-8-8ರ ನಿಯಮ? - 8 8 8 rule for life

ದಿನದಲ್ಲಿ ಸಿಗುವ ಅತ್ಯಮೂಲ್ಯ 24 ಗಂಟೆಗಳನ್ನು ಪರಿಣಾಮಕಾರಿಯಾಗಿ ಬಳಕೆ ಮಾಡುವ ಮೂಲಕ ಸಮಯದ ನಿರ್ವಹಣೆ ಮಾಡುವ ಮಾದರಿ ಇದಾಗಿದೆ.

how-to-maintain-8-8-8-rules-for-work-and-personal-life-balance
888 ಜೀವನಶೈಲಿ (ಸಂಗ್ರಹ ಚಿತ್ರ)

By ETV Bharat Karnataka Team

Published : Jun 19, 2024, 1:28 PM IST

ಹೈದರಾಬಾದ್​: ದಿನಗಳು ಗಂಟೆಗಳಲ್ಲಿ ಕಳೆದು ಹೋಗುತ್ತದೆ. ಈ ಅಮೂಲ್ಯ ಸಮಯವನ್ನು ಹಾಳು ಮಾಡುವ ಬದಲು, ಅದರ ನಿರ್ವಹಣೆ ನಡೆಸುವುದು ಅತ್ಯಗತ್ಯ. ಅದರಲ್ಲೂ ಇಂದಿನ ತಂತ್ರಜ್ಫಾನ ಕಾಲದಲ್ಲಿ ಬದಲಾಗುತ್ತಿರುವ ಕೆಲಸದ ಸಂಸ್ಕೃತಿಯಲ್ಲಿ ವೃತ್ತಿ ಮತ್ತು ವೈಯಕ್ತಿಕ ಜೀವನದ ಸಮತೋಲನ ಮಾಡುವುದು ದೊಡ್ಡ ಸವಾಲಿನ ಕೆಲಸ. ಒಂದೇ ಸಮಯದಲ್ಲಿ ಹಲವು ಕೆಲಸ ಮಾಡುವುದರಿಂದ ಆಗುತ್ತಿರುವ ದೈಹಿಕ ಮತ್ತು ಮಾನಸಿಕ ಆರೋಗ್ಯದ ಒತ್ತಡಗಳ ನಿವಾರಣೆಗೆ ಇರುವ ಮಾರ್ಗ ಎಂದರೆ 8-8-8 ನಿಯಮ.

ಏನಿದು 8-8-8 ನಿಯಮ?:ದಿನದಲ್ಲಿ ಸಿಗುವ ಅತ್ಯಮೂಲ್ಯ 24 ಗಂಟೆಗಳನ್ನು ಪರಿಣಾಮಕಾರಿಯಾಗಿ ಬಳಕೆ ಮಾಡುವ ಮೂಲಕ ಸಮಯದ ನಿರ್ವಹಣೆ ಮಾಡುವ ಮಾದರಿ ಇದಾಗಿದೆ. ಇದು ವೃತ್ತಿ ಮತ್ತು ವೈಯಕ್ತಿಕ ಜೀವನ ಸಮತೋಲನ ನಡೆಸಲು ಇರುವ ಉತ್ತಮ ಸಾಧನ ಕೂಡ ಹೌದಾಗಿದೆ. ಈ ನಿಯಮದ ಪ್ರಕಾರ, ದಿನದ 24 ಗಂಟೆಗಳನ್ನು 8 ಗಂಟೆಗಳಂತೆ ಮೂರು ಭಾಗವಾಗಿ ವಿಂಗಡಿಸಬೇಕು. ಅದರ ಅನುಸಾರ 8 ಗಂಟೆ ಕೆಲಸಕ್ಕೆ ಮೀಸಲಾದರೆ, ಇನ್ನ 8 ಗಂಟೆ ಕುಟುಂಬ, ಸ್ನೇಹಿತರೊಂದಿಗಿನ ಸಂತಸದ ಕ್ಷಣ ಕಳೆಯಲು ಅಥವಾ ಹವ್ಯಾಸಗಳಿಗಾಗಿ ಮುಡಿಪಾಗಿಡಬೇಕು. ಇನ್ನು ವ್ಯಕ್ತಿಯ ಸರ್ವತೋಮುಖ ಆರೋಗ್ಯ ಕಾಪಾಡುವಲ್ಲಿ ನಿದ್ರೆ ಪ್ರಮುಖವಾಗಿದ್ದು, ಉತ್ತಮ ಗುಣಮಟ್ಟದ ನಿದ್ರೆಗಾಗಿ 8 ಗಂಟೆ ಕಳೆಯುವುದರಿಂದ ಉತ್ತಮ ದೈಹಿಕ ಮಾನಸಿಕ ಆರೋಗ್ಯದ ಮೂಲಕ ನಿಮ್ಮ ಗುರಿ ಸಾಧನೆ ಮಾಡಬಹುದಾಗಿದೆ.

ಏನಿದರ ಪ್ರಯೋಜನ? :ಈ 8-8-8 ನಿಯಮ ಎಲ್ಲರಿಗೂ ಸೂಕ್ತವಾಗದೇ ಇರಬಹುದು. ವ್ಯಕ್ತಿಯೊಬ್ಬನ ಅಗತ್ಯತೆ ಅನುಗುಣವಾಗಿ ಸಮಯವನ್ನು ಸಣ್ಣ ಭಾಗವಾಗಿ ವಿಂಗಡಿಸಿ, ಉತ್ತಮ ಯೋಜನೆ ಮತ್ತು ಶಿಸ್ತಿನ ಅಭ್ಯಾಸದ ಮೂಲಕ ಉತ್ತಮ ಫಲಿತಾಂಶ ಪಡೆಯಬಹುದಾಗಿದೆ. ಆರೋಗ್ಯಯುತ ಮತ್ತು ತೃಪ್ತಿದಾಯಕ ಜೀವನಶೈಲಿಗೆ ಇದು ಅದ್ಬುತ ಸಾಧನವಾಗಿದೆ. ಈ ರೀತಿ ನಿಮ್ಮ ದೈನಂದಿನ ಟಾಸ್ಕ್​ ಅನ್ನು ಭಾಗ ಮಾಡುವುದರಿಂದ ನಿಮ್ಮ ಗುರಿ ಯನ್ನು ಹೆಚ್ಚಿಸಿ, ಅದರತ್ತ ಸುಲಭವಾಗಿ ಹೆಜ್ಜೆ ಹಾಕಬಹುದು. ಈ ನಿಯಮವನ್ನು ದೈನಂದಿನ ಜೀವನದಲ್ಲಿ ಅಭ್ಯಾಸ ಮಾಡಿದರೆ, ಪ್ರಮುಖ ಕಾರ್ಯಗಳನ್ನು ನಿರ್ಲಕ್ಷ್ಯಿಸುವುದಿಲ್ಲ. ಹಾಗೇ ದೀರ್ಘಕಾಲದಲ್ಲಿ ಉತ್ತಮ ಸಾಧನೆಯ ಫಲಿತಾಂಶ ಪಡೆಯಬಹುದು.

ಕುಟುಂಬ ಮತ್ತು ಸಂಗೀತ, ಪುಸ್ತಕ ಓದುವಿಕೆಯಂತಹ ಹವ್ಯಾಸಕ್ಕಾಗಿ ಸಮಯವನ್ನು ಮೀಸಲಿಡುವುದರಿಂದ ನಿಮ್ಮ ಕಲ್ಪನೆಯ ಮಟ್ಟ ಹೆಚ್ಚುತ್ತದೆ. ಇದು ಹೊಸ ಆಲೋಚನೆಗೆ ಆಕಾರ ಮಾಡಿಕೊಡುತ್ತದೆ. ಸಮಯವನ್ನು ವಿಂಗಡಿಸುವುದರಿಂದ ಕಾಲ ಕಾಲಕ್ಕೆ ವಿಶ್ರಾಂತಿ ಕೂಡ ಸಿಗಲಿದೆ. ನಿಮ್ಮ ಉದ್ಯೋಗದಲ್ಲಿ ಕ್ರಿಯಾತ್ಮಕ ಪರಿಹಾರ ಪಡೆಯಬಹುದು. ಜೊತೆಗೆ ಅಗತ್ಯ ನಿದ್ರೆ ಆಗುವುದರಿಂದ ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಸುಧಾರಣೆ ಆಗುತ್ತದೆ. ಅನೇಕ ಅಧ್ಯಯನಗಳಲ್ಲಿ ಕೂಡ ಈ ನಿಯಮವೂ ಒತ್ತಡ, ಆತಂಕ ಮತ್ತು ಖಿನ್ನತೆ ಕಡಿಮೆ ಮಾಡಿ. ದೇಹದ ನೈಸರ್ಗಿಕ ಪ್ರಗತಿ ಸುಧಾರಣೆಗೆ ಸಹಾಯ ಮಾಡಲಿದೆ.

ಇಲ್ಲಿಯೂ ಇದೆ ಸವಾಲು: ಈ ನಿಯಮವನ್ನು ಅಳವಡಿಸಿಕೊಳ್ಳುವುದು ಸುಲಭವಲ್ಲ. ಇಲ್ಲಿ 8 ಗಂಟೆ ಸಮಯ ಮೀಸಲಿಗೆ ಅನೇಕ ಅಡೆತಡೆಗಳಿವೆ. ಬದಲಾಗುತ್ತಿರುವ ಹವಾಮಾನ ಮತ್ತು ಶಬ್ಧಗಳು ಅನೇಕ ವೇಳೆ ಉತ್ತಮ ನಿದ್ರೆಗೆ ಅಡ್ಡಿಯಾಗಲಿದೆ. ಇದರ ಜೊತೆಗೆ ಸಹೋದ್ಯೋಗಿಗಳು, ಕುಟುಂಬ ಸದಸ್ಯರು, ಕಚೇರಿಯಲ್ಲಿ ಬಾಸ್​ ಅಥವಾ ಇನ್ನಿತರ ಮಾದರಿಯಲ್ಲಿ ಉಂಟಾಗುವ ಒತ್ತಡದಲ್ಲಿ ಇದರ ನಿರ್ವಹಣೆ ಕಷ್ಟವಾಗುತ್ತದೆ. ಇದು ಸಾಧ್ಯವಾಗದೇ ಹೋದಲ್ಲಿ, ಸರಿಯಾದ ಯೋಜನೆ ಮತ್ತು ಕಠಿಣ ಪರಿಶ್ರಮದ ನಿಯಮ ಮತ್ತು ಸಮರ್ಪಣೆಯಿಂದ ಜೀವನದ ಹಲವು ಸ್ತರದಲ್ಲಿ ಉತ್ತಮ ಯಶಸ್ಸಿಗೆ ಸಹಾಯ ಮಾಡಲಿದೆ.

ಇದನ್ನೂ ಓದಿ: ದೇಶದಲ್ಲಿ ಹೆಚ್ಚುತ್ತಿದೆ ಜೀವನಶೈಲಿ ಆಧಾರಿತ ರೋಗ: ಭಾರತ ವಿಶ್ವದ ಕ್ಯಾನ್ಸರ್ ರಾಜಧಾನಿಯಾಗುವ ಅಪಾಯ

ABOUT THE AUTHOR

...view details