ಹೈದರಾಬಾದ್:ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಮಂದಿಗೆ ಕಾಡುತ್ತಿರುವ ಸಮಸ್ಯೆ ಎಂದರೆ ಅದು ಅಧಿಕ ತೂಕ. ತೂಕ ಇಳಿಸಿಕೊಳ್ಳಲು ಹಲವು ಮಾರ್ಗಗಳಿವೆ. ಆದರೆ, ಹೆಚ್ಚಿನವರು ವಾಕಿಂಗ್ನಲ್ಲಿ ಆಸಕ್ತಿ ಹೊಂದಿರುತ್ತಾರೆ. ವಾಕಿಂಗ್ ನಿಮ್ಮ ತೂಕವನ್ನು ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂಬುದು ಹಲವರ ಸಲಹೆ. ಆದರೆ, ಒಂದು ಕೆಜಿ ತೂಕ ಇಳಿಸಿಕೊಳ್ಳಲು ಎಷ್ಟು ದೂರ ನಡೆಯಬೇಕು ಎಂಬುದು ಮಾತ್ರ ಸ್ಪಷ್ಟವಾಗಿಲ್ಲ. ಈ ಬಗ್ಗೆ ಅನೇಕ ಜನರು ಗೊಂದಲದಲ್ಲಿದ್ದಾರೆ.
ತೂಕ ಕಡಿಮೆ ಮಾಡಿಕೊಳ್ಳಲು ಈ ಮೂರು ಅಂಶಗಳೇ ಆಧಾರ:ಮೊದಲನೆಯದು ದೇಹದ ತೂಕದ ಮೇಲೆ ಎಷ್ಟು ಕಿಲೋಮೀಟರ್ ನಡೆಯಬೇಕು ಎಂಬುದು ನಿರ್ಧಾರವಾಗಿರುತ್ತದೆ. ದೇಹದ ತೂಕದ ಜೊತೆಗೆ ವಾಕಿಂಗ್ ವೇಗವೂ ತೂಕ ನಷ್ಟದ ಮೇಲೆ ಪ್ರಮುಖ ಪರಿಣಾಮ ಬೀರುವ ಮತ್ತೊಂದು ಅಂಶವಾಗಿದೆ. ನೀವು ಸಾಮಾನ್ಯವಾಗಿ ವಾಕಿಂಗ್ ಮಾಡುತ್ತಿದ್ದೀರಾ ಅಥವಾ ಶರೀರಕ್ಕೆ ಶ್ರಮ ಆಗುವ ರೀತಿಯಲ್ಲಿ ವಾಕಿಂಗ್ ಮಾಡುತ್ತಿದ್ದೀರಾ ಎಂಬುದು ಸಹ ತೂಕ ಕಡಿಮೆ ಮಾಡಿಕೊಳ್ಳುವ ಪ್ರಕ್ರಿಯೆ ಮೇಲೆ ಪರಿಣಾಮ ಬೀರುತ್ತದೆ.
ಇನ್ನು ಮೂರನೆಯದು ಜೀವಕ್ರಿಯೆ ಸಾಮರ್ಥ್ಯ. ಇದು ವಿವಿಧ ವ್ಯಕ್ತಿಗಳಲ್ಲಿ ಒಂದೊಂದು ರೀತಿಯಲ್ಲಿ ಇರುತ್ತದೆ. ಒಬ್ಬ ವ್ಯಕ್ತಿಯು ಒಂದು ಕಿಲೋಗ್ರಾಂ ತೂಕ ಕಳೆದುಕೊಳ್ಳಲು ಸುಮಾರು 7,000 ಕ್ಯಾಲೊರಿಗಳನ್ನು ಕರಗಿಸಬೇಕಾಗುತ್ತದೆ ಎನ್ನುತ್ತಾರೆ ತಜ್ಞರು.
ಒಂದು ಕಿಲೋ ಇಳಿಸುವ ಲೆಕ್ಕಾಚಾರ ಹೀಗಿದೆ:ಸರಾಸರಿ ಪ್ರತಿ ಕಿಲೋಮೀಟರ್‌ಗೆ 0.4 ರಿಂದ 0.5 ಕ್ಯಾಲೊರಿಗಳನ್ನು ಒಬ್ಬ ವ್ಯಕ್ತಿ ಬರ್ನ್ ಮಾಡಬಹುದಾಗಿದೆ. ಈ ಲೆಕ್ಕಾಚಾರದ ಪ್ರಕಾರ, 70 ಕೆಜಿ ತೂಕದ ವ್ಯಕ್ತಿಯು ಒಂದು ಕಿಲೋಮೀಟರ್ ನಡೆದರೆ 28 ರಿಂದ 35 ಕ್ಯಾಲೊರಿಗಳನ್ನು ಬರ್ನ್ ಮಾಡಬಹುದು. ಒಂದು ಕೆಜಿ ದೇಹದ ಕೊಬ್ಬು ಸುಮಾರು 7000 ಕ್ಯಾಲೊರಿಗಳಿಗೆ ಸಮನಾಗಿರುತ್ತದೆ. ಆದರೆ, 70 ಕೆಜಿ ತೂಕದ ವ್ಯಕ್ತಿಯು ಪ್ರತಿ ಕೆಜಿಗೆ 7000 ಕ್ಯಾಲೊರಿಗಳನ್ನು ಕಳೆದುಕೊಳ್ಳಲು 200 ರಿಂದ 250 ಕಿಮೀ ನಡೆಯಬೇಕು. ಇದು ಅಚ್ಚರಿಯಾದರೂ ಸತ್ಯ. ಒಬ್ಬ ವ್ಯಕ್ತಿಯು ತನ್ನ ಆಹಾರ ಮತ್ತು ಇತರ ಅಂಶಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡದೇ ನಡೆಯಬೇಕಾದ ದೂರವು 200 ರಿಂದ 250 ಕಿಮೀ ಎಂದು ಹೇಳಲಾಗುತ್ತಿದೆ. ನಾವು ಅಡಿಗಳಲ್ಲಿ ಲೆಕ್ಕ ಹಾಕಿದರೆ, ಅದು ಸುಮಾರು 2,50,000 ರಿಂದ 3,12,500 ಅಡಿಗಳಾಗುತ್ತದೆ. ನೀವು ಇದನ್ನು ಗಂಟೆಗಳಲ್ಲಿ ಲೆಕ್ಕ ಹಾಕಿದರೆ, ನೀವು 40 ರಿಂದ 50 ಗಂಟೆಗಳ ಕಾಲ ನಡೆದರೆ ಒಂದು ಕಿಲೋಗ್ರಾಂ ತೂಕ ಕಳೆದುಕೊಳ್ಳ ಬಹುದಾಗಿದೆಯಂತೆ.