ಹೈದರಾಬಾದ್:ವೈದ್ಯಕೀಯ ನೆರವಿನ ಸಾವು ಆತ್ಮಹತ್ಯೆ ಎಂಬ ಕುರಿತು ದಶಕಗಳಿಂದ ಜಗತ್ತು ಹಲವು ವಾದ ವಿವಾದಗಳನ್ನು ಮುಂದೆ ಇಡುತ್ತಿದೆ. ಈ ವೈದ್ಯಕೀಯ ನೆರವಿನ ಸಾವು, ದಯಾಮರಣ ಕುರಿತು ಅನೇಕ ವಿರೋಧಗಳಿವೆ. ನೆದರಾಲ್ಯಾಂಡ್ನಲ್ಲಿ 28 ವರ್ಷದ ಆರೋಗ್ಯಯುತ ಯುವತಿಯೊಬ್ಬಳು ದೈಹಿಕವಾಗಿ ಆರೋಗ್ಯವಾಗಿದ್ದರೂ ದಯಾಮಾರಣದ ಅವಕಾಶವನ್ನು ಪಡೆದಿದ್ದಳು. ಕಾರಣ ಆಕೆಯ ಮಾನಸಿಕ ಸ್ಥಿತಿ. ಯುವತಿ ಮೇ ತಿಂಗಳಲ್ಲಿ ವೈದ್ಯರ ಸಹಾಯದಿಂದ ಚಿರನಿದ್ರೆಗೆ ಜಾರಲಿದ್ದಾಳೆ.
ಈ ದೇಶದಲ್ಲಿದೆ ಅವಕಾಶ: ಡಚ್ನ ಮಾಜಿ ಪ್ರಧಾನಿ ಡ್ರೈಸ್ ವ್ಯಾನ್ ಆಗ್ಟ್ ಅವರಿಗೆ ಕೂಡ ಕಳೆದ ತಿಂಗಳು ದಯಾಮರಣದಿಂದ ಸಾಯಲು ಅವಕಾಶ ನೀಡಲಾಗಿದೆ. ಅವರ ಈ ಕಾರ್ಯಕ್ಕೆ ಪತ್ನಿ ಯುಜೆನಿ ಕೂಡ ಜೊತೆಯಾಗಿದ್ದರು. 93 ವರ್ಷದ ಈ ಜೋಡಿ ಮಾರಣಾಂತಿಕವಾಗಿ ಅಸ್ತಸ್ಥರಾಗಿದ್ದರು. ಪ್ರಧಾನಿಯ ಈ ಪ್ರಕರಣವೂ ಅಪರೂಪವಲ್ಲದಿದ್ದರೂ, ನೆದರ್ಲ್ಯಾಂಡ್ನಲ್ಲಿ ಮಾನಸಿಕ ಅಸ್ವಸ್ಥರು ಎಂಬ ಕಾರಣಕ್ಕೆ ದಯಾಮರಣಕ್ಕೆ ಒಳಗಾಗಬಹುದು. ಜಗತ್ತಿನಲ್ಲಿ ದಯಾಮಾರಣವನ್ನು ಕಾನೂನುಬದ್ದಗೊಳಿಸಿರುವ ಕೆಲವೇ ದೇಶದಲ್ಲಿ ನೆದರಲ್ಯಾಂಡ್ ಕೂಡ ಒಂದಾಗಿದೆ.
ನೆದರಾಲ್ಯಾಂಡ್ ಹೊರತಾಗಿ ಸ್ವಿಜರ್ಲೆಂಡ್ ನಲ್ಲೂ ಕೂಡ ದಯಾಮರಣಕ್ಕೆ ಅವಕಾಶ ನೀಡಲಾಗಿದೆ. ಇನ್ನು ಶೀಘ್ರದಲ್ಲೆ ಕೆನಡಾದಲ್ಲಿ ಕೂಡ ಈ ಕಾನೂನು ಜಾರಿಗೆ ಬರಲಿದೆ. ಅಮೆರಿಕದ ಕೆಲವು ರಾಜ್ಯಗಳಲ್ಲಿ ಮೈನೆ ಮತ್ತು ಒರೆಗಾನ್ನಲ್ಲಿ ಕೂಡ MAID ಅರ್ಹತೆ ಮೇಲೆ ಇದಕ್ಕೆ ಅವಕಾಶ ನೀಡಲಾಗಿದೆ. ಆದರೆ ಇದು ಬಹು ಚರ್ಚಿತ ವಿಚಾರವಾಗಿದೆ. ಮಾನಸಿಕ ಅಸ್ವಸ್ಥತೆ ಆಧಾರದ ಮೇಲೆ ದಯಾಮರಣ ಸರಿಯೇ ಎಂಬ ಪ್ರಶ್ನೆ ಉದ್ಬವಿಸಿದೆ.
ಭಾರತದಲ್ಲಿ ದಯಾಮರಣ: ಭಾರತದಲ್ಲಿ ಕೂಡ ಸುಪ್ರೀಂ ಕೋರ್ಟ್ 2018ರಲ್ಲಿ ಈ ಕುರಿತು ಐತಿಹಾಸಿಕ ಆದೇಶ ನೀಡಿತು. ಮಾರಣಾಂತಿಕ ಅಸ್ವಸ್ಥ ರೋಗಿಗಳು, ಕೋಮಾಕ್ಕೆ ಜಾರಿ ಕೃತಕ ಜೀವನದ ಬೆಂಬಲ ಪಡೆಯುತ್ತಿದ್ದರೆ, ನಿಷ್ಕ್ರಿಯ ದಯಾಮರಣ ಪಡೆಯಬಹುದಾಗಿದೆ. ಆದರೆ, ಮಾನಸಿಕ ಅಸ್ವಸ್ಥತೆಯ ಕಾರಣದಿಂದಾಗಿ ಭಾರತದಲ್ಲಿ ದಯಾಮರಣ ಪಡೆಯಲು ನಮ್ಮ ನ್ಯಾಯಾಲಯ ಅವಕಾಶ ಕಲ್ಪಿಸಿಲ್ಲ.
ಕೆಲವು ವರ್ಷಗಳ ಹಿಂದೆ ಬೆಂಗಳೂರು ಮೂಲದ ಮಹಿಳೆಯೊಬ್ಬರು 48 ವರ್ಷದ ನೋಯ್ಡಾದ ಸ್ನೇಹಿತ ವೈದ್ಯರ ಸಹಾಯದಿಂದ ದಯಾಮರಣಕ್ಕಾಗಿ ಸ್ವಿಜರ್ಲೆಂಡ್ಗೆ ತೆರಳುತ್ತಿದ್ದು, ಆತನ ಪ್ರಯಾಣವನ್ನು ತಡೆಯುವಂತೆ ಕೋರಿ ದೆಹಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. 48 ವರ್ಷದ ವ್ಯಕ್ತಿ 2014 ರಿಂದ ಕ್ರಾನಿಕಲ್ ಫಾಟಿಗ್ಯೂ ಸಿಂಡ್ರೋಮ್ ಸಮಸ್ಯೆಯಿಂದ ಬಳಲುತ್ತಿದ್ದರು. ಈ ರೋಗದ ಪ್ರಮುಖ ಲಕ್ಷಣ ಎಂದರೆ ಬ್ರೈನ್ ಫಾಗ್, ತಲೆನೋವು, ನಿದ್ರೆ ತಡೆ, ಉಸಿರಾಟದ ಸಮಸ್ಯೆ, ಎದೆ ನೋವು. ಆದರೆ, ಈತನ ಸಮಸ್ಯೆಗಳು ಮೇಡ್ ಅರ್ಹತೆಗೆ ಅನುಗುಣವಾಗಿಲ್ಲ
ಈ ಪ್ರಕರಣ ಸಂಬಂಧ ಎರಡು ಕಡೆ ಅನೇಕ ವಾದ- ಪ್ರತಿವಾದಗಳು ನಡೆದವು. ಈ ಸಂಬಂಧ ಅನೇಕ ಅಂಶಗಳನ್ನು ಒಳಗೊಂಡ ಸವಿವರವಾದ ವರದಿಗಳು ಪ್ರಕಟವಾದವು. ದಯಾಮರಣವೂ ಮಾರಾಣಾಂತಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ವ್ಯಕ್ತಿಯ ಗೌರವಯುತ ಬದುಕಿನ ಅಂತ್ಯವನ್ನು ನೀಡುತ್ತದೆ. ದಯಾಮರಣದಲ್ಲಿ ತೀವ್ರ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಮಂದಿ ತಜ್ಞರು ಆರೈಕೆ ನಂತರವೂ ಸಾವಿನ ಸಂದರ್ಭದಲ್ಲಿ ತೀವ್ರವಾದ ಮತ್ತು ಅಸಹನೀಯ ದೈಹಿಕ ಮತ್ತು ಭಾವನಾತ್ಮಕ ಒತ್ತಡವನ್ನು ಅನುಭವಿಸುತ್ತಾರೆ ಎಂದು ಅವರು ವಾದಿಸುತ್ತಾರೆ.