ನವದೆಹಲಿ: ಶಾಲೆ ಅಥವಾ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣ ಮಟ್ಟವು ಜನರ ಜೀವಿತಾವಧಿಯನ್ನು ಸುಧಾರಿಸುತ್ತದೆ. ಅದೇ ರೀತಿ ವ್ಯಕ್ತಿಗಳು ಶಿಕ್ಷಣ ಸಂಸ್ಥೆಗಳಂತಹ ಕಲಿಕೆಯಲ್ಲಿ ಭಾಗಿಯಾಗದೇ ಹೋಗುವುದು ಧೂಮಪಾನ ಅಥವಾ ಹೆಚ್ಚಿನ ಮದ್ಯ ಸೇವನೆಯಷ್ಟೇ ಅಪಾಯಕಾರಿ ಎಂದು ದಿ ಲ್ಯಾನ್ಸೆಟ್ ಪಬ್ಲಿಕ್ ಹೆಲ್ತ್ ಜರ್ನಲ್ನಲ್ಲಿ ಪ್ರಕಟವಾದ ಅಧ್ಯಯನ ತಿಳಿಸಿದೆ.
ಶಿಕ್ಷಣ ಜೀವಿತಾವಧಿ ಸುಧಾರಿಸುವಲ್ಲಿ ಪ್ರಾಮುಖ್ಯತೆ ಕುರಿತು ತಿಳಿಯುವ ಉದ್ದೇಶದಿಂದ ಸಂಶೋಧಕರು ಈ ಅಧ್ಯಯನ ನಡೆಸಿದ್ದು, ಇದಕ್ಕಾಗಿ 59 ದೇಶಗಳ ದತ್ತಾಂಶ ಸೇರಿದಂತೆ 600 ಪ್ರಕಟವಾದ ಲೇಖನದಿಂದ 10 ಸಾವಿರ ದತ್ತಾಂಶದ ಪ್ರಮುಖಾಂಶವನ್ನು ಸಂಗ್ರಹಿಸಲಾಗಿದೆ.
ನಾರ್ವೇಜಿಯನ್ ಯೂನಿವರ್ಸಿಟಿ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿಯ ಸಂಶೋಧಕರ ತಂಡವು ವಯಸ್ಸು, ಲಿಂಗ, ಸ್ಥಳ ಮತ್ತು ಸಾಮಾಜಿಕ ಮತ್ತು ಭೌಗೋಳಿಕ ಹಿನ್ನೆಲೆ ಹೊರತಾಗಿ ಶಿಕ್ಷಣವು ಜೀವಿತಾವಧಿಯನ್ನು ಹೆಚ್ಚಿಸಲಿದೆ. ಅಲ್ಲದೇ, ಪ್ರತಿ ವರ್ಷದ ಹೆಚ್ಚುವರಿ ಅಧ್ಯಯನವು ಶೇ 2ರಷ್ಟು ಸಾವಿನ ದರದ ಅಪಾಯವನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ. ಅಂದರೆ, ಆರು ವರ್ಷಗಳ ಪ್ರಾಥಮಿಕ ಶಿಕ್ಷಣವನ್ನು ಸಂಪೂರ್ಣವಾಗಿ ಪೂರೈಸಿದ ವ್ಯಕ್ತಿಯ ಸಾವಿನ ಅಪಾಯವು ಶೇ 13ರಷ್ಟು ಕಡಿಮೆ ಎಂದಿದೆ. ಇನ್ನು ಮಾಧ್ಯಮಿಕ ಶಿಕ್ಷಣ ಕಲಿಕೆ ಕಲಿತ ವ್ಯಕ್ತಿ ಶೇ 25ರಷ್ಟು ಕಡಿಮೆ ಸಾವಿನ ದರವನ್ನು ಹೊಂದಿದರೆ, 18 ವರ್ಷಗಳ ಶಿಕ್ಷಣವೂ ಶೇ 34ರಷ್ಟು ಸಾವಿನ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಅಧ್ಯಯನ ತಿಳಿಸಿದೆ.
ಸಂಶೋಧಕರು ಆರೋಗ್ಯಯುತ ಆಹಾರ ಪದ್ಧತಿ, ಧೂಮಪಾನ ಮತ್ತು ಆಲ್ಕೋಹಾಲ್ ಸೇವನೆ ಸೇರಿದಂತೆ ಇತರೆ ಅಂಶಗಳ ಮೇಲೆ ಶಿಕ್ಷಣವು ಯಾವ ರೀತಿ ಪರಿಣಾಮ ಬೀರುತ್ತದೆ ಎಂದು ಹೋಲಿಕೆ ಮಾಡಿದ್ದಾರೆ. ಉದಾಹರಣೆಗೆ 18 ವರ್ಷಗಳ ಕಾಲ ಶಿಕ್ಷಣ ಪಡೆದ ವ್ಯಕ್ತಿಯು ತರಕಾರಿಯನ್ನು ಸಂಪೂರ್ಣವಾಗಿ ತಿನ್ನಲು ವಿರೋಧಿಸುವುದಕ್ಕಿಂತ ನಿಗದಿತ ಪ್ರಮಾಣದ ತರಕಾರಿ ಸೇವನೆ ಅಭ್ಯಾಸ ಹೊಂದಿರುತ್ತಾರೆ.
ಶಿಕ್ಷಣದ ಪ್ರಯೋಜನ: ಶಾಲೆಯ ಅಭ್ಯಾಸ ಮಾಡದೇ ಇರುವವರು 10 ವರ್ಷಗಳ ಕಾಲ ದಿನಕ್ಕೆ ಐದು ಅಥವಾ ಹೆಚ್ಚಿನ ಬಾರಿ ಆಲ್ಕೋಹಾಲ್ ಸೇವನೆ ಅಥವಾ 10 ಬಾರಿ ಧೂಮಪಾನ ಸೇವನೆ ಮಾಡುತ್ತಿರುವುದು ಅಧ್ಯಯನದಲ್ಲಿ ಕಂಡು ಬಂದಿದೆ.
ಶಿಕ್ಷಣವು ತನ್ನದೇ ಆದ ಮೌಲ್ಯವನ್ನು ಹೊಂದಿದೆ. ಇದು ಕೇವಲ ಆರೋಗ್ಯಕ್ಕೆ ಮಾತ್ರ ಪ್ರಯೋಜನಕಾರಿಯಲ್ಲ. ಬದಲಾಗಿ ಇದು ಗಮನಾರ್ಹ ಅಭಿವೃದ್ಧಿಯಲ್ಲಿ ಪ್ರಯೋಜನವನ್ನು ಹೊಂದಿದೆ ಎಂದು ಅಧ್ಯಯನದ ಸಹ ಲೇಖಕ ಟೆರ್ಜೆ ಆಂಡ್ರಿಯಾಸ್ ಐಕೆಮೊ ತಿಳಿಸಿದ್ದಾರೆ.