ಕರ್ನಾಟಕ

karnataka

ETV Bharat / health

ದಿಢೀರ್​​ ಹೃದಯಾಘಾತದಿಂದ ದೇಶದಲ್ಲಿ ಒಂದೇ ದಿನ ನಾಲ್ವರು ಸಾವು; ವೈದ್ಯರ ಎಚ್ಚರಿಕೆ ಗಮನಿಸಿ - Sudden Heart Attack Cases - SUDDEN HEART ATTACK CASES

ಭಾರತದಲ್ಲಿ ಕಳೆದ 24 ಗಂಟೆಯಲ್ಲಿ ದಿಢೀರ್​ ಹೃದಯಾಘಾತದಿಂದ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ.

ದಿಢೀರ್​​ ಹೃದಯಾಘಾತ
ದಿಢೀರ್​​ ಹೃದಯಾಘಾತ (IANS)

By ETV Bharat Karnataka Team

Published : May 3, 2024, 5:32 PM IST

ನವದೆಹಲಿ: ಆರೋಗ್ಯಯುತ ಜೀವನಕ್ಕೆ ದೈಹಿಕ ಚಟುವಟಿಕೆ ಅತ್ಯಗತ್ಯ. ಆದರೆ, ಅತಿಯಾದ ದೈಹಿಕ ಚಟುವಟಿಕೆಯೂ ಕೂಡ ಪ್ರಾಣಕ್ಕೆ ಮುಳುವಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ 30ರಿಂದ 40ರ ನಡುವಿನ ವಯೋಮಾನದವರು ಜಿಮ್​ ಅಥವಾ ಇನ್ನಿತರ ತರಹದ ಭಾರೀ ದೈಹಿಕ ಚಟುವಟಿಕೆ ಆರಂಭಿಸುವ ಮುನ್ನ ವೈದ್ಯರ ಸಲಹೆ ಪಡೆಯುವುದು ಸೂಕ್ತ.

ಭಾರತದಲ್ಲಿ ಕಳೆದೊಂದು ದಿನದಲ್ಲಿ ದಿಢೀರ್​ ಹೃದಯಾಘಾತದಿಂದ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ. ಕೋವಿಡ್​ 19 ಸಾಂಕ್ರಾಮಿಕದ ಬಳಿಕ ಈ ರೀತಿ ಪ್ರಕರಣ ಹೆಚ್ಚಳ ಹಿನ್ನಲೆ ಈ ಕುರಿತು ಆರೋಗ್ಯ ತಜ್ಞರು ಮತ್ತೊಮ್ಮೆ ಎಚ್ಚರಿಕೆ ನೀಡಿದ್ದಾರೆ.

ಎಲ್ಲೆಲ್ಲಿ ಸಾವು?: ವಾರಣಾಸಿಯಲ್ಲಿ 32 ವರ್ಷದ ವ್ಯಕ್ತಿ ಜಿಮ್​ನಲ್ಲಿ ಸಾವನ್ನಪ್ಪಿದರೆ, 13 ವರ್ಷದ ಬಾಲಕ ರಾಜ್​ಕೋಟ್‌ನಲ್ಲಿ, ಹನುಮಾನ್​ ಮಂದಿ ಚೌಕ್​ ಪ್ರದೇಶದಲ್ಲಿ 40 ವರ್ಷದ ವ್ಯಕ್ತಿ ಹಾಗು ಗುಜರಾತ್​ನಲ್ಲಿ 34 ವರ್ಷದ ವ್ಯಕ್ತಿ ಬೈಕ್​ ಓಡಿಸುವಾಗ ಹೃದಯಾಘಾತದಿಂದ ಅಸುನೀಗಿದ್ದಾರೆ.

ಈ ಸಲಹೆಗಳನ್ನು ಪಾಲಿಸಿ: ಜಿಮ್​ ಅಥವಾ ವ್ಯಾಯಾಮ ಶುರು ಮಾಡಿದಾಗ ನಿಧಾನವಾಗಿಯೇ ಆರಂಭಿಸಬೇಕು. ಆರಂಭದಲ್ಲಿ ಕಡಿಮೆ ಅವಧಿಯ ದೈಹಿಕ ಚಟುವಟಿಕೆ ನಡೆಸುವುದು ಉತ್ತಮ. ಕಡಿಮೆಯಿಂದ ಹೆಚ್ಚಿನ ಪ್ರಮಾಣದ ವ್ಯಾಯಾಮವಮ್ಮ ಕ್ರಮವಾಗಿ ಹಂತಹಂತವಾಗಿ ಹೆಚ್ಚಿಸಬೇಕು ಎನ್ನುತ್ತಾರೆ ಪಿಎಸ್​ಆರ್​ಐ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ.ಮನೀಶ್​​ ಅಗರ್ವಾಲ್​.

ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯ ರೋಗದ ಕೌಟುಂಬಿಕ ಇತಿಹಾಸ ಹೊಂದಿರುವವರು ಹೃದಯಘಾತದ ಹೆಚ್ಚಿನ ಅಪಾಯ ಹೊಂದುವ ಸಾಧ್ಯತೆ ಇದೆ. ಇದರ ಜೊತೆಗೆ ತಂಬಾಕು, ಧೂಮಪಾನ, ಅನಾರೋಗ್ಯಕರ ಜೀವನಶೈಲಿಯೊಂದಿಗೆ ಜಂಕ್‌ ಫುಡ್​ ಸೇವನೆ, ಅನಾರೋಗ್ಯಕರ ಎಣ್ಣೆ ಮತ್ತು ಶೂನ್ಯ ವ್ಯಾಯಾಮ ಕೂಡ ಕೆಲವು ದೇಶದಲ್ಲಿ ಹೃದಯಾಘಾತದ ಅಪಾಯವನ್ನು ಹೆಚ್ಚಿಸುವ ಅಂಶ.

ಕಳೆದ ವರ್ಷ ಗುಜರಾತ್​ನಲ್ಲಿ ನವರಾತ್ರಿ ಗರ್ಭ ಕಾರ್ಯಕ್ರಮದಲ್ಲಿ ದಿಢೀರ್​​ ಹೃದಯಾಘಾತಕ್ಕೊಳಗಾಗಿ ಕನಿಷ್ಠ 10 ಮಂದಿ ಸಾವನ್ನಪ್ಪಿದ್ದರು ಎಂದು ವರದಿಯಾಗಿತ್ತು. ಇದರಲ್ಲಿ 17 ವರ್ಷದ ಬಾಲಕ ಕೂಡ ಸಾವನ್ನಪ್ಪಿದ್ದ.(ಐಎಎನ್​ಎಸ್​)

ಇದನ್ನೂ ಓದಿ: ಕೋವಾಕ್ಸಿನ್​ ಸುರಕ್ಷತೆಯ ದಾಖಲೆ ಹೊಂದಿದೆ: ಭಾರತ್​ ಬಯೋಟೆಕ್ ಸ್ಪಷ್ಟನೆ​

ABOUT THE AUTHOR

...view details