ಹೈದರಾಬಾದ್:ನೀವು ದೀರ್ಘಕಾಲದ ಮೂತ್ರಪಿಂಡ ಕಾಯಿಲೆ (ಸಿಕೆಡಿ) ಹೊಂದಿದ್ದರೆ, ನಿಮ್ಮ ಆಹಾರದಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕಾಗಬಹುದು. ನಿಮ್ಮ ಮೂತ್ರಪಿಂಡದ ಆರೋಗ್ಯವನ್ನು ಕಾಪಾಡಿಕೊಳ್ಳುಲು ಯಾವ ಆಹಾರಗಳನ್ನು ಮತ್ತು ಎಷ್ಟು ಪ್ರಮಾಣದಲ್ಲಿ ಸೇವನೆ ಮಾಡಬೇಕು ಎಂಬುದರ ಕುರಿತು ವೈದ್ಯರು, ಆಹಾರ ತಜ್ಞರು ಸಲಹೆಗಳನ್ನು ನೀಡಿದ್ದಾರೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಡಯಾಬಿಟಿಸ್ ಅಂಡ್ ಡೈಜೆಸ್ಟಿವ್ ಮತ್ತು ಕಿಡ್ನಿ ಡಿಸೀಸ್‌ನಲ್ಲಿ ಪ್ರಕಟವಾದ ಲೇಖನದ ಪ್ರಕಾರ, ಮೂತ್ರಪಿಂಡದ ಆರೋಗ್ಯ ಕಾಯ್ದುಕೊಳ್ಳಲು ಜನರಿಗೆ ವಿಶೇಷ ಆಹಾರದ ಅಗತ್ಯವಿರುತ್ತದೆ.
ಮೂತ್ರಪಿಂಡದ ಆರೋಗ್ಯಕ್ಕೆ ವೈದ್ಯರ ಸಲಹೆ:ನಿಮ್ಮ ಕಿಡ್ನಿ ಆರೋಗ್ಯವನ್ನು ಕಾಪಾಡಿಕೊಳ್ಳುಲು ಯಾವ ಆಹಾರದ ಕ್ರಮಗಳನ್ನು ಪಾಲನೆ ಮಾಡಬೇಕು ಎಂಬುದರ ಕುರಿತು ವೈದ್ಯರು ಮಹತ್ವದ ಸಲಹೆಗಳನ್ನು ನೀಡಿದ್ದಾರೆ. ಮೊದಲ ಮೂರು ಹಂತಗಳು (1-3) ಮೂತ್ರಪಿಂಡದ ಕಾಯಿಲೆ ಇರುವವರಿಗೆ ಮತ್ತು ಮೂತ್ರಪಿಂಡಗಳು ದುರ್ಬಲವಾಗಿದ್ದವರು ಕೊನೆಯ ಎರಡು ಹಂತಗಳ (4-5) ವ್ಯಾಪ್ತಿಯಲ್ಲಿ ಬರುತ್ತಾರೆ. ಇವರು ಯಾವ ಮತ್ತು ಎಷ್ಟು ಪ್ರಮಾಣದಲ್ಲಿ ಆಹಾರಗಳನ್ನು ತಿನ್ನಬೇಕು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.
ಮೊದಲನೇ ಹಂತ 1: ಕಡಿಮೆ ಉಪ್ಪಿರುವ ಆಹಾರ ಸೇವಿಸಿ
ನಿಮ್ಮ ರಕ್ತದೊತ್ತಡವನ್ನು ನಿಯಂತ್ರಿಸಲು, ನಿಮ್ಮ ಆಹಾರದಲ್ಲಿ ದಿನಕ್ಕೆ 2,300 ಮಿ.ಗ್ರಾಂ ಸೋಡಿಯಂ ಕಡಿಮೆ ಇರಬೇಕು. ಯಾವಾಗಲೂ ತಾಜಾ ಆಹಾರವನ್ನು ಖರೀದಿಸಿ. ನೀವು ಸೂಪರ್ ಮಾರ್ಕೆಟ್ಗಳಲ್ಲಿ ಅಥವಾ ರೆಸ್ಟೋರೆಂಟ್ಗಳಲ್ಲಿ ಖರೀದಿಸುವ ಅನೇಕ ಸಿದ್ಧಪಡಿಸಿದ ಅಥವಾ ಪ್ಯಾಕೇಜ್ ಮಾಡಿದ ಆಹಾರಗಳಲ್ಲಿ ಸೋಡಿಯಂ (ಉಪ್ಪು) ಸೇರಿಸಲಾಗುತ್ತದೆ. ರೆಡಿಮೇಡ್ ಆಹಾರಗಳಾದ ಫಾಸ್ಟ್ ಫುಡ್, ಹೆಪ್ಪುಗಟ್ಟಿದ ಊಟ ಮತ್ತು ಡಬ್ಬಿಯಲ್ಲಿಟ್ಟ ಆಹಾರಗಳನ್ನು (ಅವುಗಳಲ್ಲಿ ಸೋಡಿಯಂ ಹೆಚ್ಚಾಗಿರುತ್ತದೆ) ತಿನ್ನುವ ಬದಲು ನಿಮ್ಮ ಸ್ವಂತ ಊಟವನ್ನು ಬೇಯಿಸಿ. ನಿಮ್ಮ ಸ್ವಂತ ಆಹಾರವನ್ನು ನೀವು ತಯಾರಿಸಿ ಸೇವಿಸಿ, ಆದಷ್ಟು ಕಡಿಮೆ ಪ್ರಮಾಣದಲ್ಲಿ ಉಪ್ಪನ್ನು ಬಳಕೆ ಮಾಡಿ.
ಉಪ್ಪಿನ ಬದಲು ಮಸಾಲೆಗಳು ಮತ್ತು ಸೋಡಿಯಂ ಮುಕ್ತ ಮಸಾಲೆಗಳನ್ನು ಬಳಸಿ. ಆಹಾರ ಪ್ಯಾಕೆಟ್ಗಳ ಮೇಲೆ ಪೌಷ್ಟಿಕಾಂಶದ ಅಂಶಗಳ ಲೇಬಲ್‌ಗಳಲ್ಲಿ ಸೋಡಿಯಂ ಅನ್ನು ಪರಿಶೀಲಿಸಿ. ಕಡಿಮೆ ಸೋಡಿಯಂ ಇರುವ ಆಹಾರಗಳನ್ನು ಉಪಯೋಗಿಸಲು ಪ್ರಯತ್ನಿಸಿ. ತರಕಾರಿಗಳು, ಬೀನ್ಸ್, ಮಾಂಸ ಮತ್ತು ಮೀನುಗಳನ್ನು ತಿನ್ನುವ ಮೊದಲು ನೀರಿನಿಂದ ತೊಳೆಯಿರಿ. ಆಹಾರದ ಲೇಬಲ್‌ಗಳಲ್ಲಿ ಸೋಡಿಯಂ-ಮುಕ್ತ ಅಥವಾ ಉಪ್ಪು-ಮುಕ್ತ ಅಥವಾ ಉಪ್ಪು ಇಲ್ಲ, ಸೋಡಿಯಂ ಇಲ್ಲ ಅಥವಾ ಉಪ್ಪುರಹಿತ ಅಥವಾ ಲಘುವಾಗಿ ಉಪ್ಪು ಹಾಕಿರುವಂತಹ ಪದಗಳನ್ನು ಮಾತ್ರ ಖರೀದಿಸಿ.
ಎರಡನೇ ಹಂತ: ಪ್ರೋಟೀನ್ ಸರಿಯಾದ ಪ್ರಮಾಣದಲ್ಲಿ ಸೇವಿಸಿ
ನಿಮ್ಮ ಮೂತ್ರಪಿಂಡಗಳನ್ನು ರಕ್ಷಿಸಲು ಸಹಾಯ ಮಾಡಲು, ಸರಿಯಾದ ರೀತಿಯ ಪ್ರೋಟೀನ್ ಅನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸಿ. ನಿಮ್ಮ ದೇಹಕ್ಕೆ ಹೆಚ್ಚು ಪ್ರೋಟೀನ್ ಅನ್ನು ನೀಡಿದರೆ, ಅದು ತ್ಯಾಜ್ಯವನ್ನು ಉತ್ಪಾದಿಸುತ್ತದೆ. ನಿಮ್ಮ ಮೂತ್ರಪಿಂಡಗಳು ಈ ತ್ಯಾಜ್ಯವನ್ನು ತೆಗೆದುಹಾಕುತ್ತವೆ. ಅಗತ್ಯಕ್ಕಿಂತ ಹೆಚ್ಚು ಪ್ರೊಟೀನ್ ಸೇವಿಸುವುದರಿಂದ ನಿಮ್ಮ ಮೂತ್ರಪಿಂಡಗಳು ಹೆಚ್ಚು ಕೆಲಸ ಮಾಡುತ್ತವೆ.
ಕಡಿಮೆ ಪ್ರೋಟೀನ್ ಭರಿತ ಆಹಾರ ಸೇವಿಸಿ: ಸಸ್ಯ ಮತ್ತು ಪ್ರಾಣಿಗಳ ಆಹಾರಗಳಲ್ಲಿ ಪ್ರೋಟೀನ್ ಕಂಡುಬರುತ್ತದೆ. ಹೆಚ್ಚಿನ ಜನರು ಎರಡೂ ರೀತಿಯ ಪ್ರೋಟೀನ್ಗಳನ್ನು ಸೇವಿಸುತ್ತಾರೆ. ನಿಮಗಾಗಿ ಪ್ರೋಟೀನ್ ಆಹಾರಗಳ ಸರಿಯಾದ ಸಂಯೋಜನೆಯನ್ನು ಹೇಗೆ ಆಯ್ಕೆ ಮಾಡುವುದು ಎಂಬುದರ ಕುರಿತು ಆಹಾರ ತಜ್ಞರು ನಿಮಗಾಗಿ ಮಹತ್ವದ ಸೂತ್ರಗಳನ್ನು ನೀಡಿದ್ದಾರೆ.
- ಮಾಂಸ- ಪ್ರೋಟೀನ್ ಆಹಾರ:ನೀವು ಸುಮಾರು 2 ರಿಂದ 3 ಔನ್ಸ್ (85 gm) ಬೇಯಿಸಿದ ಕೋಳಿ, ಮೀನು ಅಥವಾ ಕುರಿ ಮಾಂಸವನ್ನು ತಿನ್ನಬಹುದು. ಡೈರಿ ಆಹಾರಗಳ ಒಂದು ಭಾಗವು ಸುಮಾರು ಅರ್ಧ ಕಪ್ ಹಾಲು ಅಥವಾ ಮೊಸರು ಅಥವಾ ಚೀಸ್ ಸ್ಲೈಸ್ ಆಗಿರಬಹುದು.
- ಸಸ್ಯ-ಪ್ರೋಟೀನ್ ಆಹಾರ:ನೀವು ಬೇಯಿಸಿದ ಬೀನ್ಸ್ ಅರ್ಧ ಕಪ್ ಮತ್ತು ಶೇಂಗಾ ಸೇರಿದಂತೆ ವಿವಿಧ ಬೀಜಗಳನ್ನು ಅರ್ಧ ಕಪ್ಗಿಂತ ಕಡಿಮೆ ಪ್ರಮಾಣದಲ್ಲಿ ತಿನ್ನಬಹುದು. ನೀವು ಬ್ರೆಡ್ ಸ್ಲೈಸ್ ಮತ್ತು ಅರ್ಧ ಕಪ್ ಬೇಯಿಸಿದ ಅನ್ನ ಅಥವಾ ಬೇಯಿಸಿದ ನೂಡಲ್ಸ್ ತಿನ್ನಬಹುದು.
ಮೂರನೇ ಹಂತ 3: ಹೃದಯ- ಕಿಡ್ನಿಗೆ ಆರೋಗ್ಯಕರ ಆಹಾರ
ಹೃದಯ ಮತ್ತು ಮೂತ್ರಪಿಂಡಗಳಲ್ಲಿ ಕೊಬ್ಬು ಸಂಗ್ರಹವಾಗುವುದನ್ನು ತಡೆಯಲು ಸಹಾಯ ಮಾಡಲು, ಆರೋಗ್ಯಕರವಾದ ಆಹಾರವನ್ನು ಆರಿಸಿ. ಹೆಚ್ಚು ಕೊಬ್ಬಿನಾಂಶವಿರುವ ಆಹಾರಗಳನ್ನು ಸೇವಿಸುವ ಬದಲಿಗೆ, ಹಸಿ ತರಕಾರಿ, ಸೊಪ್ಪು ಸೇವಿಸಿದರೆ ತುಂಬಾ ಒಳ್ಳೆಯದು. ತುಪ್ಪ ಮತ್ತು ಬೆಣ್ಣೆಯ ಬದಲಿಗೆ, ನಾನ್‌ಸ್ಟಿಕ್ ಅಡುಗೆ ಸ್ಪ್ರೇ ಅಥವಾ ಸ್ವಲ್ಪ ಪ್ರಮಾಣದ ಆಲಿವ್ ಎಣ್ಣೆಯಿಂದ ಬೇಯಿಸಿ. ಮಾಂಸದಿಂದ ಕೊಬ್ಬನ್ನು ಟ್ರಿಮ್ ಮಾಡಿ ಮತ್ತು ತಿನ್ನುವ ಮೊದಲು ಕೋಳಿಯಿಂದ ಚರ್ಮವನ್ನು ತೆಗೆದುಹಾಕಿ. ಸ್ಯಾಚುರೇಟೆಡ್ ಮತ್ತು ಟ್ರಾನ್ಸ್ ಕೊಬ್ಬುಗಳನ್ನು ಮಿತಿಗೊಳಿಸಿ ಮತ್ತು ಆಹಾರ ಲೇಬಲ್ಗಳನ್ನು ತಪ್ಪದೇ ಓದಿ. ತೆಳುವಾದ ಮಾಂಸದ ತುಂಡುಗಳು, ಚರ್ಮರಹಿತ ಚಿಕನ್, ಮೀನು, ಕಡಿಮೆ ಕೊಬ್ಬು ಅಥವಾ ಕೊಬ್ಬು ಮುಕ್ತ ಹಾಲು, ಮೊಸರು, ಚೀಸ್, ಬೀನ್ಸ್, ತರಕಾರಿಗಳು ಮತ್ತು ಹಣ್ಣುಗಳನ್ನು ಸೇವಿಸಿ.
ಮದ್ಯಕ್ಕೆ ಮಿತಿ ಇರಲಿ:ನೀವು ಪುರುಷರಾಗಿದ್ದರೆ ಎರಡಕ್ಕಿಂತ ಹೆಚ್ಚು ಬಾರಿ ಮದ್ಯಪಾನ ಮಾಡಬೇಡಿ. ಮತ್ತು ನೀವು ಮಹಿಳೆಯಾಗಿದ್ದರೆ ದಿನಕ್ಕೆ ಒಂದಕ್ಕಿಂತ ಹೆಚ್ಚು ಸಲ ಮದ್ಯ ಸೇವಿಸಬೇಡಿ. ಅತಿಯಾಗಿ ಮದ್ಯಪಾನ ಮಾಡುವುದರಿಂದ ಯಕೃತ್ತು, ಹೃದಯ ಮತ್ತು ಮೆದುಳು ಹಾನಿಗೊಳಗಾಗಬಹುದು. ಮತ್ತು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ನೀವು ಸುರಕ್ಷಿತವಾಗಿ ಎಷ್ಟು ಆಲ್ಕೋಹಾಲ್ ಕುಡಿಯಬಹುದು ಎಂಬುದಕ್ಕೆ ನಿಮ್ಮ ವೈದ್ಯರು, ಆಹಾರ ತಜ್ಞರ ಸಲಹೆ ಪಡೆದುಕೊಳ್ಳಬಹುದು.