ನವದೆಹಲಿ: ಹವಾಮಾನ ಬದಲಾವಣೆಚಾಲಿತ ತಾಪಮಾನ ಏರಿಕೆಯು ಜಾಗತಿಕವಾಗಿ ಸಾವು ಮತ್ತು ಅಂಗವೈಕಲ್ಯತೆಯೊಂದಿಗೆ ಸಂಬಂಧ ಹೊಂದಿದೆ ಎಂದು ಹೊಸ ಸಂಶೋಧನೆ ತಿಳಿಸಿದೆ. ಮೂರು ದಶಕಗಳ ಜಾಗತಿಕ ದತ್ತಾಂಶದಲ್ಲಿ ಇದು ಕಂಡುಬಂದಿದೆ. 2019ರಲ್ಲಿ ತಾಪಮಾನದಿಂದ 5.2 ಲಕ್ಷ ಪಾರ್ಶ್ವವಾಯು ಪ್ರಕರಣಗಳು ಕಂಡುಬಂದಿವೆ ಎಂದು ವರದಿ ಹೇಳಿದೆ. ಈ ಅಧ್ಯಯನವನ್ನು ಜರ್ನಲ್ ನ್ಯೂರೋಲಾಜಿಯಲ್ಲಿ ಪ್ರಕಟಿಸಲಾಗಿದೆ.
ವೇಗವಾಗಿ ಹೆಚ್ಚುತ್ತಿರುವ ಅಧಿಕ ತಾಪಮಾನ ಪಾರ್ಶ್ವವಾಯುವಿನ ಹೊರೆ ಕೂಡಾ ಹೆಚ್ಚಿಸಿದೆ. ವಿಶೇಷವಾಗಿ, ಹಿರಿಯ ವಯಸ್ಸಿನವರಲ್ಲಿ ಇದು ಜಾಸ್ತಿ. ಆಫ್ರಿಕಾದಂತಹ ಕಡಿಮೆ ಸಾಮಾಜಿಕ ಜನಸಂಖ್ಯಾ ಸೂಚ್ಯಂಕ ಹೊಂದಿರುವ ದೇಶಗಳಲ್ಲಿ ಅಸಮಾನವಾಗಿದೆ ಎಂದು ಅಧ್ಯಯನ ಕಂಡುಕೊಂಡಿದೆ.
ಭಾರತದಲ್ಲಿ ಅಧಿಕ ತಾಪಮಾನದಿಂದ ಪಾರ್ಶ್ವವಾಯುವಿಗೆ ತುತ್ತಾಗಿ 33 ಸಾವಿರ ಸಾವು ಸಂಭವಿಸಿದೆ. ಇದರಲ್ಲಿ ಶೇ.55ರಷ್ಟು ಅಂದರೆ 18 ಸಾವಿರ ಸಾವು ಅಧಿಕ ತಾಪಮಾನಕ್ಕೆ ಸಂಬಂಧಿಸಿದರೆ, ಶೇ.45ರಷ್ಟು ಅಂದರೆ 15 ಸಾವಿರ ಕಡಿಮೆ ತಾಪಮಾನದ್ದಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.