ಹೈದರಾಬಾದ್: ಜೀವನಶೈಲಿಯಾಧಾರಿತ ರೋಗಗಳಲ್ಲಿ ಏರಿಕೆ ಕಾಣುತ್ತಿದ್ದು, ಇದು ದೇಶದಲ್ಲಿ ಶೇ 63ರಷ್ಟು ಸಾವಿಗೆ ಕಾರಣವಾಗುತ್ತಿದೆ. ಈ ಸಂಬಂಧ "ಅಪೋಲೋ ಹೆಲ್ತ್ ಆಫ್ ನೇಷನ್- 2024" ಎಂಬ ವರದಿಯನ್ನು ಅಪೋಲೋ ಗ್ರೂಪ್ ಹಾಸ್ಪಿಟಲ್ ಬಿಡುಗಡೆ ಮಾಡಿದೆ. ಈ ವರದಿಯಲ್ಲಿ ದೇಶಾದ್ಯಂತ ಇರುವ ಗ್ರೂಪ್ ಹಾಸ್ಪಿಟಲ್ಗೆ ಭೇಟಿ ನೀಡುವ ರೋಗಿಗಳ ಡೇಟಾವನ್ನು ವಿಶ್ಲೇಷಿಸಿ ಅಭಿವೃದ್ಧಿಪಡಿಸಲಾಗಿದೆ.
ಈ ಹಿಂದಿನ ಸ್ಥಿತಿಗೆ ಹೋಲಿಕೆ ಮಾಡಿದಾಗ ಇತ್ತೀಚಿನ ವರ್ಷಗಳಲ್ಲಿ ಹಲವು ಬಗೆಯ ಕ್ಯಾನ್ಸರ್ಗಳಲ್ಲಿ ಏರಿಕೆ ಕಾಣುತ್ತಿದೆ ಎಂಬುದನ್ನು ವರದಿಯಲ್ಲಿ ಸ್ಪಷ್ಟವಾಗಿ ಕಾಣಬಹುದಾಗಿದೆ. ವರದಿ ಅನುಸಾರ, ಭಾರತವು ವಿಶ್ವದ ಕ್ಯಾನ್ಸರ್ ರಾಜಧಾನಿಯಾಗುವ ಅಪಾಯವು ಆತಂಕಕಾರಿ ಸಂಕೇತವನ್ನು ಹೊಂದಿದೆ. ಯುವಜನತೆಯಲ್ಲಿ ಕೂಡ ಪೂರ್ವ ಮಧುಮೇಹ ಮತ್ತು ಪೂರ್ವ ಅಧಿಕ ರಕ್ತದೊತ್ತಡ ಸಮಸ್ಯೆಗಳಲ್ಲೂ ಏರಿಕೆ ಕಾಣುತ್ತಿದೆ. ಈ ವರದಿಯೂ ಜೀವನಶೈಲಿ ಸಂಬಂಧಿತ ರೋಗಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ ಎಂದು ಅಪೋಲೋ ಆಸ್ಪತ್ರೆಯ ಡಾ ಪ್ರೀತಾ ರೆಡ್ಡಿ ತಿಳಿಸಿದ್ದಾರೆ.
ಆರೋಗ್ಯ ಎಚ್ಚರಿಕೆ ವಹಿಸಬೇಕು:ಈ ಕುರಿತು ಮಾತನಾಡಿರುವ ಡಾ ಪ್ರೀತಿ ರೆಡ್ಡಿ, ರೋಗಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಿ ಆರೋಗ್ಯ ಕಾಳಜಿ ವಹಿಸುವುದು ಅಗತ್ಯವಾಗಿದೆ ಎಂದರು. ಸಿಇಒ ಡಾ.ಮಧು ಶಶಿಧರ್ ಮಾತನಾಡಿ, ದೇಶದ ಆರೋಗ್ಯ ವಲಯದಲ್ಲೂ ಈ ರೋಗಗಳು ಸವಾಲುಗಳನ್ನು ತಂದೊಡ್ಡುತ್ತಿವೆ. ಇವುಗಳನ್ನು ನಿಭಾಯಿಸಲು, ಅಪೋಲೋ ಮೊದಲ ಬಾರಿಗೆ 'ಪ್ರೊ ಹೆಲ್ತ್ ಸ್ಕೋರ್' ಎಂಬ ಡಿಜಿಟಲ್ ಆರೋಗ್ಯ ಅಪಾಯದ ಮೌಲ್ಯಮಾಪನ ಪ್ರಾರಂಭಿಸಿದೆ. ಜೀವನಶೈಲಿಯನ್ನು ಬದಲಾಯಿಸಿಕೊಳ್ಳುವುದು, ನಿಯಮಿತ ಆರೋಗ್ಯ ತಪಾಸಣೆ, ಸಮತೋಲಿತ ಆಹಾರ, ವ್ಯಾಯಾಮದಿಂದ ಈ ರೋಗದ ಸಮಸ್ಯೆಗಳನ್ನು ಕಡಿಮೆ ಮಾಡಬಹುದು ಎಂದು ತಿಳಿಸಿದ್ದಾರೆ.
ಯುವಜನತೆಯಲ್ಲಿ ಖಿನ್ನತೆ: ಯುವಜನರಲ್ಲಿ ಖಿನ್ನತೆ ಹೆಚ್ಚುತ್ತಿದೆ. 5 ಸಾವಿರ ಮಂದಿ ಯುವಜನತೆಯನ್ನು ಪರೀಕ್ಷೆಗೆ ಒಳಪಡಿಸಿ ಈ ಸತ್ಯವನ್ನು ತಿಳಿದುಕೊಳ್ಳಲಾಗಿದೆ. 10 ರಲ್ಲಿ ಒಬ್ಬ ಸೋಂಕು ಹೊಂದಿದ್ದಾರೆ. 18-25 ವರ್ಷದೊಳಗಿನ ಐವರಲ್ಲಿ ಒಬ್ಬರಲ್ಲಿ ಖಿನ್ನತೆ ಇದೆ. 18 ರಿಂದ 20 ವರ್ಷ ಶೇ 80ರಷ್ಟು ಯುವ ಜನರು ಮತ್ತು 65 ವರ್ಷ ಮೇಲ್ಪಟ್ಟ ವಯಸ್ಕರಲ್ಲಿ ಮನೆಯೊಳಗಿನ ಮತ್ತು ಮನೆಯೊರಗಿನ ಒತ್ತಡ ಹೆಚ್ಚಿದೆ.