ನವದೆಹಲಿ: ವ್ಯಾಯಾಮದ ಬಳಿಕ ಸ್ನಾಯು ದುರ್ಬಲತೆ ಮತ್ತು ನೋವಿನ ಸಮಸ್ಯೆ ಕಾಡುತ್ತಿದ್ದರೆ, ನಿಯಮಿತವಾಗಿ ಬಾದಾಮಿ ಸೇವನೆ ಮಾಡುವುದರಿಂದ ಈ ಸಮಸ್ಯೆಯನ್ನು ಒಂದು ಹಂತದವರೆಗೆ ತಡೆಗಟ್ಟಬಹುದು ಎಂದು ಅಧ್ಯಯನ ತಿಳಿಸಿದೆ. ಅಷ್ಟೇ ಅಲ್ಲದೆ, ಬಾದಾಮಿ ಸೇವನೆಯಿಂದಾಗಿ ಕೆಲವು ದೈಹಿಕ ಚಟುವಟಿಕೆಗಳ ಪ್ರದರ್ಶನದಲ್ಲಿ ಸುಧಾರಣೆ ಕಾಣಬಹುದಾಗಿದೆ ಎಂದು ಲಂಡನ್ನ ಕಿಂಗ್ಸ್ ಕಾಲೇಜು ವಿಜ್ಞಾನಿಗಳು ತಿಳಿಸಿದ್ದಾರೆ.
ಈ ಅಧ್ಯಯನಕ್ಕಾಗಿ ಅವರು ಸಾಧಾರಣ ಸ್ಥೂಲಕಾಯ ಹೊಂದಿರುವ ಮಧ್ಯಮ ವಯಸ್ಸಿನ ಮಹಿಳೆಯರನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಅವರಿಗೆ ಎಂಟು ವಾರಗಳ ಕಾಲ ನಿತ್ಯ 57 ಗ್ರಾಂನಷ್ಟು ಬಾದಾಮಿ ನೀಡಲಾಗಿತ್ತು. ಮತ್ತೊಂದು ಗುಂಪಿಗೆ ವಿಭಿನ್ನ ಆಹಾರ ಪದ್ಧತಿ ನೀಡಲಾಗಿದ್ದು, ಬಾದಾಮಿ ಬದಲಾಗಿ ಅಷ್ಟೇ ಕ್ಯಾಲರಿ ಹೊಂದಿರುವ ಬೇರೆ ಆಹಾರವನ್ನೂ ಕೂಡಾ ನೀಡಲಾಗಿತ್ತು. ಈ ಎರಡು ಗುಂಪುಗಳಿಗೆ ನೀಡಲಾದ ಡಯಟ್ ಬಳಿಕ ಅರ್ಧ ಗಂಟೆಗಳ ಕಾಲ ಟ್ರೆಡ್ ಮಿಲ್ನಲ್ಲಿ ಓಡುವ ಪರೀಕ್ಷೆ ಕೂಡಾ ಏರ್ಪಡಿಸಲಾಗಿತ್ತು . ಈ ಪರೀಕ್ಷೆಯನ್ನು ಸ್ನಾಯುಗಳಿಗೆ ಹಾನಿ ಮಾಡಲು ವಿನ್ಯಾಸಗೊಳಿಸಲಾಗಿತ್ತು. ಇದರಿಂದ ಬಾದಾಮಿ ಸ್ನಾಯುವಿನ ಚೇತರಿಕೆಗೆ ಸಹಾಯ ಮಾಡುತ್ತದೆಯೇ ಎಂಬುದನ್ನು ಪರೀಕ್ಷಿಸಲಾಗಿತ್ತು. ಜೊತೆಗೆ ಅವರ ರಕ್ತ ಸಂಬಂಧಿತ ಸೂಚಕಗಳ ಮಟ್ಟವನ್ನು ಕೂಡಾ ಇದೇ ವೇಳೆ ಅಳೆಯಲಾಗಿದೆ. ಇದನ್ನು ಟ್ರೆಡ್ ಮಿಲ್ ಪರೀಕ್ಷೆಯ ಮೊದಲು, ಸಮಯದಲ್ಲಿ ಮತ್ತು ನಂತರ ಪರೀಕ್ಷೆ ಕೈಗೊಳ್ಳಲಾಗಿತ್ತು.