ದೆಹಲಿ: ಬದಲಾಗುವ ಹೃದಯ ಬಡಿತವನ್ನು ಅಂದಾಜು ಮಾಡುವ ಉದ್ದೇಶದಿಂದ ವಿಜ್ಞಾನಿಗಳು ಕೃತಕ ಬುದ್ಧಿಮತ್ತೆಯನ್ನು (ಎಐ) ಅಭಿವೃದ್ಧಿ ಪಡಿಸಿದ್ದಾರೆ. ಇದು ವ್ಯಕ್ತಿಯ ಹೃದಯ ಬಡಿತದ ದರದಲ್ಲಿ ಉಂಟಾಗುವ ವ್ಯತ್ಯಾಸವನ್ನು ಅರ್ಧ ಗಂಟೆ ಮುಂಚಿತವಾಗಿಯೇ ಪತ್ತೆ ಮಾಡುವುದರಿಂದ ಆಗಬಹುದಾದ ಅನಾಹುತ ತಡೆಯಲು ಸಾಧ್ಯವಾಗುತ್ತದೆ. ಈ ಎಐ ಮಾದರಿ ಸಾಮಾನ್ಯ ಹೃದಯ ಬಡಿತದಿಂದ ಹೃತ್ಕರ್ಣ ಕಂಪನದ ರೂಪಾಂತರವನ್ನು ಶೇ 80ರಷ್ಟು ನಿಖರತೆಯೊಂದಿಗೆ ಪತ್ತೆ ಮಾಡುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಹೃತ್ಕರ್ಣದ ಕಂಪನಗಳು ಸಾಮಾನ್ಯವಾಗಿ ಹೃದಯ ಬಡಿತವಾಗಿದೆ. ಹೃದಯದಲ್ಲಿನ ಮೇಲ್ಭಾಗದ ಕವಾಟದ ಬಡಿತದಲ್ಲಿನ ಹೃದಯದ ಕಂಪನವಾಗಿದೆ. ಕೆಳಗಿನ ಕವಾಟಗಳಿಲ್ಲದೇ ಇದರ ಲಯವು ಕೆಲಸ ಮಾಡುವುದಿಲ್ಲ. ಹೃತ್ಕರ್ಣದ ಕಂಪನವನ್ನು ಸಮೀಪಿಸಿದಾಗ ಅದು ಒಂದು ನಿರ್ದಿಷ್ಟ ಮಿತಿಯನ್ನು ದಾಟುವವರೆಗೆ ಈ ಬಡಿತದ ಸಂಭವನೀಯತೆಯು ಹೆಚ್ಚಾಗುತ್ತದೆ. ಇಂತಹ ಸಂದರ್ಭದಲ್ಲಿ ಈ ಎಐ ಮಾದರಿಗಳು ಉಂಟಾಗಲಿರುವ ಪರಿಸ್ಥಿತಿ ಕುರಿತು ಅರ್ಧ ಗಂಟೆ ಮುಂಚೆಯೇ ಎಚ್ಚರಿಕೆ ನೀಡುತ್ತದೆ. ಈ ಕಾರಣದಿಂದ ರೋಗಿಗಳು ಮುನ್ನೆಚ್ಚರಿಕೆ ಕ್ರಮವನ್ನು ತೆಗೆದುಕೊಳ್ಳುವ ಮೂಲಕ ಹೃದಯ ಬಡಿತ ಸಾಮಾನ್ಯ ಮಾಡಬಹುದು. ಆಗುವ ಅನಾಹುತ ತಪ್ಪಿಸಬಹುದಾಗಿದೆ.
ಇದಕ್ಕಾಗಿ ತಂಡವೂ ನುರಿತ ಆಳ ಕಲಿಕಾ ಮಾದರಿಗಳಿಂದ ದತ್ತಾಂಶವನ್ನು ಪಡೆದಿದ್ದಾರೆ. ಈ ಸಾಧನವನ್ನು ರೋಗಿಗಳು ಪ್ರತಿ ನಿತ್ಯ ಕೂಡ ಬಳಕೆ ಮಾಡಬಹುದು. ಈ ಧರಿಸಬುದಾದ ಸಾಧನವು ರಿಯಲ್ ಟೈಮ್ ನಿರ್ವಹಣೆ ಮತ್ತು ಮುನ್ನೆಚ್ಚರಿಕೆಯನ್ನು ನೀಡುತ್ತದೆ.