ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ (ANI) ಮುಂಬೈ:ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಬಾಲಿವುಡ್ನ ದಿ ಬೆಸ್ಟ್ ಕಪಲ್ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಅವರು ಬೇಬಿಮೂನ್‌ಗಾಗಿ (ಮಗು ಹುಟ್ಟುವ ಮುನ್ನ ಸಣ್ಣ ಟ್ರಿಪ್ ಹೋಗೋದು) ಲಂಡನ್‌ಗೆ ತೆರಳಿದರು. ಅದಕ್ಕೂ ಮುನ್ನ ಮುಂಬೈ ವಿಮಾನ ನಿಲ್ದಾಣದಲ್ಲಿ ಕ್ಯಾಮರಾ ಕಣ್ಣಿಗೆ ಕಾಣಿಸಿಕೊಂಡರು. ಕೈ ಕೈ ಹಿಡಿದುಕೊಂಡು ವಿಮಾನ ನಿಲ್ದಾಣದ ಒಳಗೆ ತೆರಳುತ್ತಿರುವ ದಂಪತಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಜಾಗ ಪಡೆದಿವೆ. ನೆಟ್ಟಿಗರು ಕೂಡ ತಾರಾ ಜೋಡಿಗೆ ಶುಭಾಶಯ ಕೋರುತ್ತಿದ್ದಾರೆ.
ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ (ANI) ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಕಾರಿನ ಬಾಗಿಲು ತೆರೆದ ರಣವೀರ್ ಸಿಂಗ್, ಪತ್ನಿ ದೀಪಿಕಾಳ ಕೈ ಹಿಡಿದುಕೊಂಡು ಚೆಕ್-ಇನ್ ಗೇಟ್‌ನತ್ತ ಸುರಕ್ಷಿತವಾಗಿ ಕರೆದುಕೊಂಡು ಹೋಗುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ದೀಪಿಕಾ ಕಪ್ಪು ಕಾರ್ಡಿಜನ್ ಮತ್ತು ಬಿಳಿ ಸ್ನೀಕರ್ ಬಾಡಿಕಾನ್ ಡ್ರೆಸ್ ಧರಿಸಿದ್ದರೆ, ರಣವೀರ್ ಕಪ್ಪು ಟಿ-ಶರ್ಟ್ ಮತ್ತು ಮ್ಯಾಚಿಂಗ್ ಪ್ಯಾಂಟ್ ಧರಿಸಿದ್ದರು. ತಾರಾ ಜೋಡಿ ಕ್ಯಾಮರಾ ಕಣ್ಣಿಗೆ ಕಾಣಿಸಿಕೊಳ್ಳುತ್ತಿದ್ದಂತೆ ರಣವೀರ್ ಮತ್ತು ದೀಪಿಕಾ ಅವರನ್ನು ಸುತ್ತುವರೆದ ಪಾಪರಾಜಿಗಳು ಪೋಸ್ ನೀಡುವಂತೆ ಕೇಳಿದರು. ಮುಗುಳು ನಡೆಯೊಂದಿಗೆ ದಂಪತಿ ಕೈ ಕೈ ಹಿಡಿದು ಚೆಕ್-ಇನ್ ಗೇಟ್‌ನತ್ತ ತೆರಳಿದರು.
ಬುಧವಾರ ಮುಂಬೈನಲ್ಲಿ ನಡೆದ ನಾಗ್ ಅಶ್ವಿನ್ ಅವರ ಕಲ್ಕಿ 2898 AD ಚಿತ್ರದ ಪ್ರೀ-ರಿಲೀಸ್ ಈವೆಂಟ್‌ನಲ್ಲಿ ದೀಪಿಕಾ ಪಡುಕೋಣೆ ಹಾಜರಾಗಿದ್ದರು. ಈ ಸಮಾರಂಭದಲ್ಲಿ ನಾಯಕ ನಟ ಪ್ರಭಾಸ್, ಅಮಿತಾಬ್ ಬಚ್ಚನ್, ಕಮಲ್ ಹಾಸನ್ ಸೇರಿದಂತೆ ದೊಡ್ಡ ತಾರಾ ಬಳಗವೇ ಭಾಗವಹಿಸಿತ್ತು. ದೀಪಿಕಾ ತನ್ನ ಸೀಟಿನಿಂದ ಏಳುತ್ತಿದ್ದಂತೆ, ಪ್ರಭಾಸ್ ಮತ್ತು ಅಮಿತಾಬ್ ಬಚ್ಚನ್ ಅವರ ಸಹಾಯಕ್ಕೆ ಧಾವಿಸಿರುವ ದೃಶ್ಯ ಕೂಡ ಸಾಮಾಜಿಕ ಜಾಲತಾಣದಲ್ಲಿ ಜಾಗ ಪಡೆದಿದೆ. ಅಲ್ಲದೇ ಈ ಇವೆಂಟ್ನಲ್ಲಿ ಪ್ರಭಾಸ್ ಹಾಗೂ ದೀಪಿಕಾ ಪರಸ್ಪರ ತಮಾಷೆ ಮಾಡುತ್ತಾ ಪರಸ್ಪರರ ಕಾಲೆಳೆದುಕೊಂಡಿರುವುದು ಕೂಡ ಸೆರೆಯಾಗಿದೆ.
ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ (ANI) ಹೃತಿಕ್ ರೋಷನ್, ಅನಿಲ್ ಕಪೂರ್, ಕರಣ್ ಸಿಂಗ್ ಗ್ರೋವರ್ ಮತ್ತು ಸಂಜೀದಾ ಶೇಖ್ ನಟನೆಯ ಇತ್ತೀಚೆಗೆ ತೆರೆಕಂಡ 'ಫೈಟರ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದ ದೀಪಿಕಾ, 'ಕಲ್ಕಿ 2898 AD' ಚಿತ್ರದಲ್ಲಿಯೂ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಬಿಗ್ ಬಜೆಟ್ನಲ್ಲಿ ತಯಾರಾಗುತ್ತಿರುವ ಈ ಚಿತ್ರ ಜೂನ್ 27 ರಂದು ವಿಶ್ವದಾದ್ಯಂತ ಏಕಕಾಲಕ್ಕೆ ತೆರೆಗೆ ಬರಲಿದೆ. ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿದೆ. ಪ್ರಭಾಸ್, ಅಮಿತಾಭ್ ಬಚ್ಚನ್, ಕಮಲ್ ಹಾಸನ್ ಮತ್ತು ದಿಶಾ ಪಟಾನಿ ಕಲ್ಕಿ 2898 AD ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ:ಸಿನಿಮಾ ಆಗ್ತಿದೆ ಹೈದರಾಬಾದ್ ಅತ್ಯಾಚಾರ, ಕೊಲೆ ಪ್ರಕರಣ; ಪ್ರಮುಖ ಪಾತ್ರದಲ್ಲಿ ಕರೀನಾ - Kareena Kapoor Khan