ಕರ್ನಾಟಕ

karnataka

ETV Bharat / entertainment

ಉದಿತ್ ನಾರಾಯಣ್ ಆಯ್ತು, ಗುರು ರಾಂಧವ ಕಿಸ್‌ ಕಹಾನಿ ವೈರಲ್​: ಗಾಯಕ ಹೇಳಿದ್ದೇನು? - KISS CONTROVERSY

ಭಾರತೀಯ ಚಿತ್ರರಂಗದ ಹೆಸರಾಂತ ಗಾಯಕ ಉದಿತ್ ನಾರಾಯಣ್ ಮಹಿಳಾ ಅಭಿಮಾನಿಯೊಬ್ಬರಿಗೆ ಮುತ್ತಿಕ್ಕಿ ವಿವಾದದಲ್ಲಿ ಸಿಲುಕಿದ್ದಾರೆ. ಇದರ ನಡುವೆ ಗುರು ರಾಂಧವ ಅವರ ವಿಡಿಯೋ ಕೂಡಾ ವೈರಲ್ ಆಗಿದೆ.

udit narayan, guru randhawa
ಉದಿತ್ ನಾರಾಯಣ್, ಗುರು ರಾಂಧವ (Photo: IANS)

By ETV Bharat Entertainment Team

Published : Feb 3, 2025, 8:29 PM IST

ಭಾರತೀಯ ಚಿತ್ರರಂಗದ ಹೆಸರಾಂತ ಗಾಯಕ ಉದಿತ್ ನಾರಾಯಣ್ ತಮ್ಮ ಮ್ಯೂಸಿಕ್​ ಪ್ರೋಗ್ರಾಮ್​ನಲ್ಲಿ ಮಹಿಳಾ ಅಭಿಮಾನಿಯೊಬ್ಬರಿಗೆ ಮುತ್ತಿಕ್ಕಿ ವಿವಾದದಲ್ಲಿ ಸಿಲುಕಿದ್ದಾರೆ. ಜನಪ್ರಿಯ ಗಾಯಕನ ಈ ನಡೆ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿದೆ. ಆದಾಗ್ಯೂ, ಉದಿತ್ ನಾರಾಯಣ್ ಈ ವಿಷಯದಲ್ಲಿ ಈಗಾಗಲೇ ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ.

ಈ ಬೆನ್ನಲ್ಲೇ ಪಂಜಾಬಿ ಗಾಯಕ ಗುರು ರಾಂಧವ ಅವರ ಕನ್ಸರ್ಟ್​​ (ಲೈವ್​ ಮ್ಯೂಸಿಕ್​ ಪ್ರೋಗ್ರಾಮ್​​) ವಿಡಿಯೋ ವೈರಲ್ ಆಗುತ್ತಿದೆ. ಇದರಲ್ಲಿ ಮಹಿಳಾ ಅಭಿಮಾನಿಯೊಬ್ಬರು ಗಾಯಕನನ್ನು ಚುಂಬಿಸಿದ್ದು, ಗುರು ರಾಂಧವ ಹಿಂದೆ ಸರಿದಿದ್ದಾರೆ. ಇದು ಹಳೇ ವಿಡಿಯೋದಂತೆ ತೋರಿದ್ದು, ಉದಿತ್ ನಾರಾಯಣ್ ವಿಚಾರವಾಗಿ ಬೆಳಕಿಗೆ ಬಂದಿದೆ.

ಗುರು ರಾಂಧವ ಅವರ ವೈರಲ್ ವಿಡಿಯೋದಲ್ಲಿ, ವೇದಿಕೆಯೇರಿದ ಮಹಿಳಾ ಅಭಿಮಾನಿಯೊಬ್ಬರು ಗಾಯಕನೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದಾರೆ. ಈ ವೇಳೆ ಗಾಯಕನ ಕೆನ್ನೆಗೆ ಮುತ್ತಿಟ್ಟಿದ್ದಾರೆ. ಆಘಾತಕ್ಕೊಳಗಾದ ಗಾಯಕ ಹಿಂದೆ ಸರಿದಿರೋದನ್ನು ನೀವು ಈ ವಿಡಿಯೋದಲ್ಲಿ ನೋಡಬಹುದು. ಮಹಿಳಾ ಅಭಿಮಾನಿ ಗುರು ರಾಂಧವಗೆ ಮುತ್ತಿಟ್ಟ ನಂತರ, ಗಾಯಕ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಆದ್ರೆ ಅವರಿಗೆ ಶಾಕ್​ ಆಗಿರೋದು ಮುಖದ ಹಾವಭಾವದಲ್ಲಿ ಕಂಡುಬಂದಿದೆ.

ಇದನ್ನೂ ಓದಿ:'ನನ್ನಲ್ಲಿ ಕೆಟ್ಟ ಭಾವನೆಗಳಿಲ್ಲ, ಆದ್ರೆ ಜನರ ಯೋಚನೆ..!' ಕಿಸ್ ವಿವಾದದ ಬಗ್ಗೆ ಉದಿತ್ ನಾರಾಯಣ್ ಪ್ರತಿಕ್ರಿಯೆ

ನೆಟ್ಟಿಗರೀಗ ಈ ವಿಡಿಯೋವನ್ನು ವೈರಲ್ ಮಾಡುತ್ತಿದ್ದಾರೆ. ಉದಿತ್ ನಾರಾಯಣ್ ಅವರಿಗೆ ಗಾಯಕ ಗುರು ರಾಂಧವ ಅವರನ್ನು ನೋಡಿ ಕಲಿಯಿರಿ ಎಂದು ಕೆಲ ನೆಟ್ಟಿಗರು ಸಲಹೆ ಕೊಟ್ಟಿದ್ದಾರೆ. ಸಾಮಾಜಿಕ ಜಾಲತಾಣ ಬಳಕೆದಾರರೋರ್ವರು ಪ್ರತಿಕ್ರಿಯಿಸಿ, 'ಉದಿತ್ ಜಿ, ಈ ಗಾಯಕನನ್ನು ನೋಡಿ, ಅವರಿಂದ ಏನಾದರೂ ಕಲಿಯಿರಿ' ಎಂದು ತಿಳಿಸಿದ್ದಾರೆ. ಮತ್ತೋರ್ವ ಇಂಟರ್​ನೆಟ್​ ಬಳಕೆದಾರ ಪ್ರತಿಕ್ರಿಯಿಸಿ, 'ಮಹಿಳೆ ಉದಿತ್ ಜಿ ಅವರನ್ನು ಚುಂಬಿಸಿದ್ದಾರೆ. ಮತ್ತೋರ್ವ ಮಹಿಳಾ ಫ್ಯಾನ್​​ ಗುರು ರಾಂಧವ ಅವರನ್ನು ಚುಂಬಿಸಿದ್ದಾರೆ. ಒಂದೇ ಕ್ರಿಯೆ, ಆದ್ರೆ ಗಾಯಕರಿಂದ ವಿಭಿನ್ನ ಪ್ರತಿಕ್ರಿಯೆ' ಎಂದು ಹೇಳಿದ್ದಾರೆ. ಗುರು ರಾಂಧವ ವಿಡಿಯೋಗೆ ಉದಿತ್ ನಾರಾಯಣ್​ ವಿಡಿಯೋ ಹೋಲಿಸಿ, ಕೆಲವರು ಟ್ರೋಲ್ ಮಾಡುತ್ತಿದ್ದಾರೆ.

ಇದನ್ನೂ ಓದಿ:'ಜೀವನದ ಅತ್ಯಂತ ಕಠಿಣ ದಿನ': ಸಂಗೀತ ಕಾರ್ಯಕ್ರಮದಲ್ಲಿ ಸೋನು ನಿಗಮ್ ನರಳಾಟ - ವಿಡಿಯೋ

ಮಹಿಳಾ ಅಭಿಮಾನಿ ತುಟಿಗೆ ಚುಂಬಿಸಿದ ವಿಡಿಯೋ ವೈರಲ್​ ಆದ ಬೆನ್ನಲ್ಲೇ ಗಾಯಕ ಉದಿತ್ ನಾರಾಯಣ್ ಭಾರೀ ಟೀಕೆಗಳನ್ನು ಎದುರಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಈವರೆಗೆ ನಾನು ನನಗೆ, ನನ್ನ ಕುಟುಂಬಕ್ಕೆ, ನನ್ನ ದೇಶಕ್ಕೆ ಕೆಟ್ಟ ಹೆಸರು ತರುವ ಕೆಲಸ ಮಾಡಿಲ್ಲ. ಈಗ ಅಂಥ ಕೆಲಸ ಮಾಡುತ್ತೇನಾ?. ಅಭಿಮಾನಿಗಳೊಂದಿಗೆ ಉತ್ತಮ ಬಾಂಧವ್ಯ ಇದೆ. ನನ್ನ ಮನಸ್ಸಿನಲ್ಲಿ ಯಾವುದೇ ಕೆಟ್ಟ ಉದ್ದೇಶಗಳಿಲ್ಲ. ಹೀಗಿರುವಾಗ ಈ ವಿವಾದದಿಂದ ನಾನೇಕೆ ಅಸಮಾಧಾನಗೊಳ್ಳಬೇಕು?. ನಮ್ಮ ಶುದ್ಧ ಪ್ರೀತಿಯನ್ನು ಜನರು ತಪ್ಪಾಗಿ ನೋಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ABOUT THE AUTHOR

...view details