ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ಶಾರುಖ್ ಖಾನ್ ಬಗ್ಗೆ ವಿಶೇಷ ಪರಿಚಯ ಬೇಕೆನಿಸದು. ಭಾರತದಲ್ಲಿ ಮಾತ್ರವಲ್ಲದೇ ಜಗತ್ತಿನಾದ್ಯಂತ ಅಪಾರ ಅಭಿಮಾನಿಗಳನ್ನು ಸಂಪಾದಿಸಿರೋ ನಟ. ಇತ್ತೀಚೆಗೆ ರಾಜ್‌ಕೋಟ್‌ನಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ಕ್ರಿಕೆಟ್ ಪಂದ್ಯದ ಸಂದರ್ಭದಲ್ಲಿ ವಿದೇಶಿಗನೋರ್ವ ಶಾರುಖ್ ಅವರ ಸೂಪರ್ ಹಿಟ್ ಸಿನಿಮಾ 'ಕಲ್ ಹೋ ನಾ ಹೋ' ಟೈಟಲ್ ಟ್ರ್ಯಾಕ್ನ ಮ್ಯೂಸಿಕ್ ಅನ್ನು ನುಡಿಸಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಬಾಲಿವುಡ್ ಮತ್ತು ಕ್ರಿಕೆಟ್ ವಿಶ್ವದಾದ್ಯಂತ ಬಹಳಾನೇ ಪ್ರಾಮುಖ್ಯತೆ ಹೊಂದಿದೆ. ಕ್ರಿಕೆಟ್ ಕ್ರೇಜ್ ಜಗತ್ತಿನಾದ್ಯಂತ ವಿಸ್ತರಿಸಿರೋದು ಹೊಸ ವಿಚಾರವೇನಲ್ಲ. ಮತ್ತೊಂದೆಡೆ ಬಾಲಿವುಡ್ ಕ್ರೇಜ್ ಕೂಡ ಕಡಿಮೆಯೇನಿಲ್ಲ. ಇದರ ಹೆಚ್ಚಿನ ಕ್ರೆಡಿಟ್ಸ್ ಶಾರುಖ್ ಖಾನ್ ಅವರಿಗೇನೆ ಸಲ್ಲುತ್ತದೆ ಅಂತಾರೆ ಅಭಿಮಾನಿಗಳು. ಇತ್ತೀಚೆಗೆ ರಾಜ್‌ಕೋಟ್‌ನಲ್ಲಿ ನಡೆದ ಭಾರತ - ಇಂಗ್ಲೆಂಡ್ ಟೆಸ್ಟ್ ಪಂದ್ಯದ ಸಂದರ್ಭದಲ್ಲಿ, ಶಾರುಖ್ ಖಾನ್ ಅವರ ಅಭಿಮಾನಿಯೊಬ್ಬರು (ವಿದೇಶಿಗ) ಕಲ್ ಹೋ ನಾ ಹೋ ಚಿತ್ರದ ಟೈಟಲ್ ಟ್ರ್ಯಾಕ್ ನುಡಿಸೋ ಮೂಲಕ ಎಸ್ಆರ್ಕೆ ಮೇಲಿನ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದರು. ಈ ವಿಡಿಯೋ ಆನ್ಲೈನ್ನಲ್ಲಿ ಕಾಡ್ಗಿಚ್ಚಿನ ವೇಗದಲ್ಲಿ ವೈರಲ್ ಆಗಿದೆ. ಇದು ಶಾರುಖ್ ಖಾನ್ ಅವರ ಜನಪ್ರಿಯತೆಯನ್ನು ಸಾಬೀತುಪಡಿಸಿದೆ.
ಈ ವೈರಲ್ ವಿಡಿಯೋದಲ್ಲಿ, ಹಲವು ವಿದೇಶಿ ಪ್ರೇಕ್ಷಕರು ಈ ಮ್ಯೂಸಿಕ್ ಅನ್ನು ಆನಂದಿಸಿದ್ದಾರೆ. ಕೆಲವರು ಹಾಡನ್ನು ಹಾಡಿದ್ದಾರೆ. ಸಿನಿಮಾ, ಕಲಾವಿದರಿಗೆ ಗಡಿ, ಅಡೆತಡೆಗಳಿಲ್ಲ. ಎಲ್ಲೆಗಳನ್ನು ಮೀರಿ ಸಿನಿಪ್ರಿಯರನ್ನು ತಲುಪುತ್ತದೆ ಎಂಬ ವಿಚಾರವನ್ನು ಈ ವಿಡಿಯೋ ಸಾಬೀತುಪಡಿಸಿದೆ. ಪ್ರತಿಭಾವಂತ ಅಭಿಮಾನಿಯ ಪರ್ಫಾಮೆನ್ಸ್ಗೆ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ. ಕ್ರೀಡಾಂಗಣದಲ್ಲಿದ್ದವರು ಆತನಿಗೆ ಬೆಂಬಲ ಸೂಚಿಸಿ, ಅಭಿನಂದನೆ ತಿಳಿಸಿದ್ದಾರೆ.