ಕರ್ನಾಟಕ

karnataka

ETV Bharat / entertainment

ಪ್ರಧಾನಿ ಜೊತೆಗೆ 'ದಿ ಸಬರಮತಿ ರಿಪೋರ್ಟ್​' ಸಿನಿಮಾ ವೀಕ್ಷಣೆ: ವೃತ್ತಿ ಜೀವನದ ಅತ್ಯುತ್ತಮ ಕ್ಷಣ ಎಂದ ನಟ ವಿಕ್ರಾಂತ್​

ಸಂಸದರೊಂದಿಗೆ ಸಿನಿಮಾ ವೀಕ್ಷಣೆಯ ಹಲವು ಫೋಟೋಗಳನ್ನು ಅಧಿಕೃತ ಎಕ್ಸ್​ ಜಾಲತಾಣದಲ್ಲಿ ಹಂಚಿಕೊಂಡ ಪ್ರಧಾನಿ ನರೇಂದ್ರ ಮೋದಿ, ಚಿತ್ರದ ನಿರ್ಮಾಣದ ಪ್ರಯತ್ನವನ್ನು ಶ್ಲಾಘಿಸಿದ್ದಾರೆ.

the-sabarmati-report-screening-pm-narendra-modi-got-emotional-vikrant-massey-calls-highest-point-of-his-career
ಸಿನಿಮಾ ವೀಕ್ಷಿಸಿದ ಪ್ರಧಾನಿಗಳು (ಎಎನ್​ಐ)

By ETV Bharat Karnataka Team

Published : Dec 3, 2024, 10:40 AM IST

Updated : Dec 3, 2024, 12:18 PM IST

ನವದೆಹಲಿ: ನಟ ವಿಕ್ರಾಂತ್​ ಮಸ್ಸೆ ಅಭಿನಯದ 'ದಿ ಸಬರಮತಿ ರಿಪೋರ್ಟ್'​ ಚಲನಚಿತ್ರವನ್ನು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್​ ಶಾ, ರಕ್ಷಣಾ ಸಚಿವರಾದ ರಾಜನಾಥ್​ ಸಿಂಗ್​ ಸೇರಿದಂತೆ ಅನೇಕರು ವೀಕ್ಷಿಸಿದರು. ಸೋಮವಾರ ಸಂಜೆ ಸಂಸತ್ ಭವನದ ಬಾಲಯೋಗಿ ಆಡಿಟೋರಿಯಂನಲ್ಲಿ ಆಯೋಜಿಸಿದ್ದ ವಿಶೇಷ ಪ್ರದರ್ಶನದಲ್ಲಿ ಸಿನಿಮಾದ ನಾಯಕ ನಟ ವಿಕ್ರಾಂತ್​ ಮಸ್ಸೆ ಸೇರಿದಂತೆ ಚಿತ್ರತಂಡದ ಸದಸ್ಯರು, ಪ್ರಧಾನಿಗಳೊಂದಿಗೆ ಸಿನಿಮಾ ವೀಕ್ಷಣೆ ಮಾಡಿದರು. ಈ ವೇಳೆ ಮಾತನಾಡಿದ ಚಿತ್ರ ನಟ ವಿಕ್ರಾಂತ್​ ಮಸ್ಸೆ, ಇದು ತಮ್ಮ ವೃತ್ತಿಜೀವನದ ಅತ್ಯುತ್ತಮ ಕ್ಷಣ ಎಂದು ತಿಳಿಸಿದರು.

ಸಂಸದರೊಂದಿಗೆ ಸಿನಿಮಾ ವೀಕ್ಷಣೆಯ ಹಲವು ಫೋಟೋಗಳನ್ನು ಅಧಿಕೃತ ಎಕ್ಸ್​ ಜಾಲತಾಣದಲ್ಲಿ ಹಂಚಿಕೊಂಡ ಪ್ರಧಾನಿ ನರೇಂದ್ರ ಮೋದಿ, ಚಿತ್ರದ ನಿರ್ಮಾಣದ ಪ್ರಯತ್ನವನ್ನು ಶ್ಲಾಘಿಸಿದರು.

ಪದಗಳಲ್ಲಿ ಹೇಳಲು ಸಾಧ್ಯವಿಲ್ಲ- ವಿಕ್ರಾಂತ್​:ಸಿನಿಮಾ ವೀಕ್ಷಣೆ ಬಳಿಕ ಮಾಧ್ಯಮದ ಜೊತೆ ಅನುಭವ ಹಂಚಿಕೊಂಡ ವಿಕ್ರಾಂತ್​, 'ಪ್ರಧಾನಿ ಮತ್ತು ಎಲ್ಲಾ ಕ್ಯಾಬಿನೆಟ್​ ಸಚಿವರು ಹಾಗೂ ಅನೇಕ ಸಂಸದರೊಂದಿಗೆ ನಾನು ಕೂಡ ಸಿನಿಮಾ ವೀಕ್ಷಿಸಿದೆ. ಇದೊಂದು ವಿಶೇಷ ಅನುಭವ. ಇದು ಅತ್ಯಂತ ಸಂತಸದ ವಿಷಯವಾಗಿದ್ದು, ಇದನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ, ಪ್ರಧಾನ ಮಂತ್ರಿ ಅವರೊಂದಿಗೆ ಸಿನಿಮಾ ವೀಕ್ಷಣೆಗೆ ಸಮಯ ಸಿಕ್ಕಿರುವುದು ನನ್ನ ವೃತ್ತಿ ಜೀವನದ ಅತ್ಯುತ್ತಮ ಮಹತ್ವದ ಕ್ಷಣ' ಎಂದರು.

ಸಿನಿಮಾ ವೀಕ್ಷಣೆಯಲ್ಲಿ ಚಿತ್ರತಂಡ (ಎಎನ್​ಐ)

ಮಾಧ್ಯಮಗಳ ವರದಿ ಅನುಸಾರ, ಚಿತ್ರದ ವೀಕ್ಷಣೆ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾವನಾತ್ಮಕಗೊಂಡರು.

ಪ್ರಧಾನಿ ಅವರಿಗೆ ಅಭಾರಿ- ವಿಕ್ರಾಂತ್​​ ಮಸ್ಸೆ;ನಟ ವಿಕ್ರಾಂತ್​ ಮಸ್ಸೆ ಕೂಡ ಪ್ರಧಾನಿ ಅವರೊಂದಿಗೆ 'ದಿ ಸಬರಮತಿ ರಿಪೋರ್ಟ್'​ ಸಿನಿಮಾ ವೀಕ್ಷಣೆಯ ಫೋಟೋಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡು ಧನ್ಯವಾದ ತಿಳಿಸಿದ್ದಾರೆ. 'ನನ್ನ ಸಂಪೂರ್ಣ ಜೀವನದಲ್ಲಿ ನೆನಪಿಡುವ ಘಟನೆ ಇದು. ನನ್ನ ಸಿನಿಮಾ ವೀಕ್ಷಣೆಗೆ ಅವರು ಸಮಯ ನೀಡಿದ್ದಕ್ಕೆ ನಾನು ಸದಾ ಅವರಿಗೆ ಅಭಾರಿಯಾಗಿರುತ್ತೇನೆ. ನಿಮ್ಮ ಪ್ರಶಂಸೆಯ ಮಾತು ಎಂದಿಗೂ ಮರೆಯಲು ಸಾಧ್ಯವಿಲ್ಲ' ಎಂದು ಪೋಸ್ಟ್​ ಮಾಡಿದ್ದಾರೆ.

ಸಬರಮತಿ ಸಿನಿಮಾ ಬಗ್ಗೆ ಒಂದಿಷ್ಟು ಮಾಹಿತಿ:'ದಿ ಸಬರಮತಿ ರಿಪೋರ್ಟ್'​ ಚಿತ್ರವೂ 2002ರ ಫೆಬ್ರವರಿ 27ರಂದು ಗುಜರಾತ್​ನಲ್ಲಿನ ಗೋದ್ರಾ ರೈಲು ನಿಲ್ದಾಣ ಸಮೀಪ ಸಬರಮತಿ ಎಕ್ಸ್​ಪ್ರೆಸ್​​ ರೈಲಿನ S-6 ಕೋಚ್‌ನಲ್ಲಿ ಸಂಭವಿಸಿದ ಬೆಂಕಿ ದುರಂತ ಘಟನೆ ಆಧಾರಿತ ಚಿತ್ರವಾಗಿದೆ. ಚಿತ್ರದ ಟ್ರೈಲರ್​ ಬಿಡುಗಡೆಯಾದ ಸಂದರ್ಭದಲ್ಲೇ ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್​ ಮಾಡಿದ್ದ ಪ್ರಧಾನಿ, ಉತ್ತಮ ಕೆಲಸ. ಸತ್ಯ ಹೊರ ಬರುತ್ತಿರುವುದು ಒಳ್ಳೆಯದು. ಇದೀಗ ಸಾಮಾನ್ಯ ಮನುಷ್ಯರು ಇದನ್ನು ತಿಳಿಯಬಹುದು. ಸುಳ್ಳು ಸುದ್ದಿಗಳ ಸಿಮೀತ ಅವಧಿಯಲ್ಲಿಯೇ ಸಾಯುತ್ತದೆ. ಹಾಗೇ ಸತ್ಯವೂ ಹೊರಬರುತ್ತದೆ ಎಂದಿದ್ದರು.

ಸಿನಿಮಾ ವೀಕ್ಷಣೆಯಲ್ಲಿ ಸಂಸದರು, ರಾಜಕೀಯ ನಾಯಕರು (ಎಎನ್​ಐ)

2002 ರ ಗೋಧ್ರಾ ಘಟನೆ ಕುರಿತು ಈ ಚಿತ್ರಕ್ಕೆ ಉತ್ತರ ಪ್ರದೇಶ, ಚತ್ತೀಸ್‌ಗಢ, ಮಧ್ಯಪ್ರದೇಶ, ಉತ್ತರಾಖಂಡ, ಒಡಿಶಾ, ಹರಿಯಾಣ, ಗುಜರಾತ್ ಮತ್ತು ರಾಜಸ್ಥಾನ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ತೆರಿಗೆ ವಿನಾಯಿತಿ ನೀಡಲಾಗಿದೆ.

ಇದನ್ನೂ ಓದಿ: ಚಿತ್ರರಂಗಕ್ಕೆ ವಿದಾಯ ಘೋಷಿಸಿದ '12th ಫೇಲ್​' ನಟ ವಿಕ್ರಾಂತ್ ಮಸ್ಸೆ ಆಸ್ತಿಯೆಷ್ಟು?

Last Updated : Dec 3, 2024, 12:18 PM IST

ABOUT THE AUTHOR

...view details