ಕರ್ನಾಟಕ

karnataka

ETV Bharat / entertainment

ಮೊದಲ ದಿನ 126 ಕೊಟಿ ರೂ. ಕಲೆಕ್ಷನ್​ ಮಾಡಿದ್ದ ವಿಜಯ್ ನಟನೆಯ 'ಗೋಟ್'​​ ಎರಡನೇ ದಿನ ಗಳಿಸಿದ್ದೆಷ್ಟು? - Greatest of All Time Collection - GREATEST OF ALL TIME COLLECTION

ಸೈನ್ಸ್​ ಫಿಕ್ಷನ್​ ಆ್ಯಕ್ಷನ್​ ಡ್ರಾಮಾ 'ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್' (ಗೋಟ್) ಗುರುವಾರ ತೆರೆಕಂಡು ಪ್ರದರ್ಶನ ಮುಂದುವರಿಸಿದೆ. ದಳಪತಿ ವಿಜಯ್ ನಟನೆಯ ಈ ಚಿತ್ರ ಮೊದಲ ದಿನ ಎಲ್ಲಾ ಭಾಷೆ ಸೇರಿ ಭಾರತದಲ್ಲಿ 44 ಕೋಟಿ ರೂಪಾಯಿ, ವಿಶ್ವದಾದ್ಯಂತ ಬರೋಬ್ಬರಿ 126 ಕೊಟಿ ರೂ. ಕಲೆಕ್ಷನ್​ ಮಾಡಿತ್ತು. ಆದ್ರೆ ಎರಡನೇ ದಿನ ಈ ಅಂಕಿ ಅಂಶ ಕೊಂಚ ಇಳಿದಿದೆ.

Thalapathy Vijay
ದಳಪತಿ ವಿಜಯ್ (ETV Bharat)

By ETV Bharat Karnataka Team

Published : Sep 7, 2024, 12:51 PM IST

ಹೈದರಾಬಾದ್: ದಕ್ಷಿಣ ಚಿತ್ರರಂಗದ ಅತ್ಯಂತ ಜನಪ್ರಿಯ ನಟ ದಳಪತಿ ವಿಜಯ್ ಮುಖ್ಯಭೂಮಿಕೆಯ ಬಹುನಿರೀಕ್ಷಿತ 'ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್' (ಗೋಟ್) ಚಿತ್ರ ಗುರುವಾರ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ತೆರೆಕಂಡಿದೆ. ಬಿಡುಗಡೆಯಾದ ದಿನ ಬರೋಬ್ಬರಿ 126 ಕೊಟಿ ರೂ. ಕಲೆಕ್ಷನ್​ ಮಾಡಿದ್ದ ಆ್ಯಕ್ಷನ್​ ಸಿನಿಮಾ ಎರಡನೇ ದಿನದಂದು ಬಾಕ್ಸ್ ಆಫೀಸ್ ವಿಷಯದಲ್ಲಿ ಗಮನಾರ್ಹ ಕುಸಿತ ಕಂಡಿದೆ. ಸೈನ್ಸ್​ ಫಿಕ್ಷನ್​ ಆ್ಯಕ್ಷನ್​ ಡ್ರಾಮಾ ತನ್ನ ಮೊದಲ ದಿನ ಎಲ್ಲಾ ಭಾಷೆ ಸೇರಿ ಭಾರತದಲ್ಲಿ 44 ಕೋಟಿ ರೂಪಾಯಿ ಸಂಗ್ರಹಿಸುವಲ್ಲಿ ಯಶಸ್ವಿಯಾಗಿತ್ತು.

ಎರಡನೇ ದಿನ, ಶನಿವಾರದಂದು ವೆಂಕಟ್ ಪ್ರಭು ನಿರ್ದೇಶನ ಈ ಚಿತ್ರ ಕಲೆಕ್ಷನ್​​ ವಿಚಾರದಲ್ಲಿ ಶೇಕಡ 43.75ರಷ್ಟು ಕುಸಿದಿದೆ. ಸಿನಿಮಾ ದೇಶೀಯ ಮಾರುಕಟ್ಟೆಯಲ್ಲಿ 24.75 ಕೋಟಿ ರೂಪಾಯಿ ಗಳಿಸಿದೆ ಎಂದು ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿ ಮಾಡಿದೆ. ಈ ಮೂಲಕ ಎರಡು ದಿನಗಳಲ್ಲಿ ಭಾರತೀಯ ಬಾಕ್ಸ್ ಆಫೀಸ್​ನಲ್ಲಿ ಎರಡು ದಿನಗಳ ಒಟ್ಟು ಕಲೆಕ್ಷನ್​​ 68.75 ಕೋಟಿ ರೂ. ಆಗಿದೆ.

'ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್' ತೆರೆಕಂಡ ದಿನದಂದು ತಮಿಳು ಆವೃತ್ತಿಯು 39 ಕೋಟಿ ರೂ.ಗಳನ್ನು ಗಳಿಸಿತ್ತು. ಆದಾಗ್ಯೂ ಎರಡನೇ ದಿನ, ಈ ಅಂಕಿ ಅಂಶ ಕುಸಿತವಾಗಿದೆ. ಶುಕ್ರವಾರದಂದು 22 ಕೋಟಿ ರೂ. ಕಲೆಕ್ಷನ್​ ಮಾಡಿದೆ. ಚಿತ್ರದ ಹಿಂದಿ ಆವೃತ್ತಿ ಗಮನಿಸಿದರೆ, 1.85 ಕೋಟಿ ರೂಪಾಯಿಯಿಂದ 1.5 ಕೋಟಿ ರೂ.ಗೆ ಕುಸಿದಿದೆ. ತೆಲುಗು ಆವೃತ್ತಿ ಗಳಿಕೆಯಲ್ಲಿ ಎರಡನೇ ದಿನ ಶೇ. 50ರಷ್ಟು ಕುಸಿತ ಕಂಡಿದೆ.

ಇದನ್ನೂ ಓದಿ:ಅಬ್ಬಬ್ಬಾ, ಮೊದಲ ದಿನವೇ 126 ಕೋಟಿ ರೂ. ಕಲೆಕ್ಷನ್​​​ ಮಾಡಿದ ದಳಪತಿ ವಿಜಯ್ ಅಭಿನಯದ 'ಗೋಟ್' - Greatest of All Time Collection

ಶುಕ್ರವಾರದಂದು, ಪ್ರೊಡಕ್ಷನ್ ಹೌಸ್ ಎಜಿಎಸ್ ಎಂಟರ್‌ಟೈನ್‌ಮೆಂಟ್ GOAT ತನ್ನ ಆರಂಭಿಕ ದಿನದಂದು ಜಾಗತಿಕವಾಗಿ 126.32 ಕೋಟಿ ರೂಪಾಯಿಗಳನ್ನು ತಲುಪಿದೆ ಎಂದು ಬಹಿರಂಗಪಡಿಸಿತು. ಕಳೆದ ವರ್ಷ ಲೋಕೇಶ್ ಕನಕರಾಜ್ ನಿರ್ದೇಶನದ 148.5 ಕೋಟಿ ರೂ. ಗಳಿಸಿದ ವಿಜಯ್ ಅವರ ಹಿಂದಿನ ಪ್ರಾಜೆಕ್ಟ್ ಲಿಯೋ ಮೊದಲ ದಿನದ ಗಳಿಕೆಗೆ ಹೋಲಿಸಿದರೆ ಇದು ಗಮನಾರ್ಹ ಕುಸಿತವನ್ನು ಪ್ರತಿಬಿಂಬಿಸುತ್ತದೆ. GOAT ದಳಪತಿ ವಿಜಯ್ ಅವರು ರಾಜಕೀಯಕ್ಕೆ ಪ್ರವೇಶಿಸುವ ಬಗ್ಗೆ ಈ ವರ್ಷದ ಆರಂಭದಲ್ಲಿ ಘೋಷಿಸಿದ ನಂತರ ಅವರ ಮೊದಲ ಚಿತ್ರವಾಗಿದೆ.

ಇದನ್ನೂ ಓದಿ:ಸೀರೆಯುಟ್ಟು ಸಿದ್ದಿವಿನಾಯಕ ದೇವಸ್ಥಾನಕ್ಕೆ ಬಂದ ತುಂಬು ಗರ್ಭಿಣಿ ದೀಪಿಕಾ: ನಟಿಯ ವಿಡಿಯೋ ನೋಡಿ - Deepika Padukone

ಶುಕ್ರವಾರದಂದು ಈ ಸಿನಿಮಾದ ಹಿಂದಿರುವ ಪ್ರೊಡಕ್ಷನ್ ಹೌಸ್ ಎಜಿಎಸ್ ಎಂಟರ್‌ಟೈನ್‌ಮೆಂಟ್ ಕಲೆಕ್ಷನ್​​ ಮಾಹಿತಿಯನ್ನು ಬಹಿರಂಗಪಡಿಸಿತ್ತು. ಗೋಟ್​​ ತನ್ನ ಮೊದಲ ದಿನದಂದು ಜಾಗತಿಕವಾಗಿ 126.32 ಕೋಟಿ ರೂಪಾಯಿಗಳನ್ನು ಸಂಪಾದಿಸಿದೆ ಎಂದು ಬಹಿರಂಗಪಡಿಸಿತ್ತು. ಕಳೆದ ವರ್ಷ ಬಿಡುಗಡೆ ಆದ ಲೋಕೇಶ್ ಕನಕರಾಜ್ ನಿರ್ದೇಶನದ ಮತ್ತು ದಳಪತಿ ವಿಜಯ್ ನಟನೆಯ ಲಿಯೋ ಸಿನಿಮಾದ ಮೊದಲ ದಿನದ ಗಳಿಕೆಗೆ ಹೋಲಿಸಿದರೆ ಗೋಟ್​ ಅಂಕಿ ಅಂಶ ಕೊಂಚ ಕಡಿಮೆ ಇದೆ. ಲಿಯೋ ಸಿನಿಮಾ ಮೊದಲ ದಿನ ಬರೋಬ್ಬರಿ 148.5 ಕೋಟಿ ರೂ. ಗಳಿಸುವ ಮೂಲಕ ದಾಖಲೆ ಬರೆದಿತ್ತು.

ABOUT THE AUTHOR

...view details