ಕರ್ನಾಟಕ

karnataka

ETV Bharat / entertainment

ತಾಪ್ಸಿ ಪನ್ನು-ಮಥಿಯಾಸ್ ಬೋ ಮದುವೆ ವಿಡಿಯೋ ವೈರಲ್​ - Taapsee Pannu Wedding Video - TAAPSEE PANNU WEDDING VIDEO

ತಾಪ್ಸಿ ಪನ್ನು ಹಾಗೂ ಮಥಿಯಾಸ್ ಬೋ ತಮ್ಮ ಮದುವೆ ಬಗ್ಗೆ ಅಧಿಕೃತವಾಗಿ ಘೋಷಿಸುವ ಮುನ್ನವೇ, ಸಮಾರಂಭದ ವಿಡಿಯೋ ವೈರಲ್ ಆಗಿದೆ.

Taapsee Pannu Mathias Boe Wedding
ತಾಪ್ಸಿ ಪನ್ನು ಮಥಿಯಾಸ್ ಬೋ ಮದುವೆ

By ETV Bharat Karnataka Team

Published : Apr 3, 2024, 5:59 PM IST

ಬಹುಭಾಷಾ ಸಿನಿಮಾಗಳಲ್ಲಿ ಗುರುತಿಸಿಕೊಂಡಿರುವ ನಟಿ-ನಿರ್ಮಾಪಕಿ ತಾಪ್ಸಿ ಪನ್ನು ಹಾಗೂ ಮಥಿಯಾಸ್ ಬೋ (Mathias Boe) ಇತ್ತೀಚೆಗೆ ದಾಂಪತ್ಯ ಜೀವನ ಆರಂಭಿಸಿದ್ದಾರೆ ಎಂಬ ವರದಿಗಳು ಇಂಟರ್​ನೆಟ್​ನಲ್ಲಿ ಬಿರುಗಾಳಿ ಎಬ್ಬಿಸಿದ್ದವು. ಆದರೆ ಈ ಜೋಡಿ ಮಾತ್ರ ತಮ್ಮ ಅಧಿಕೃತ ಸೋಷಿಯಲ್​​ ಮೀಡಿಯಾ ಖಾತೆಗಳಲ್ಲಿ ಏನನ್ನೂ ಹಂಚಿಕೊಂಡಿಲ್ಲ. ಜನಪ್ರಿಯ ಜೋಡಿಯ ವಿಶೇಷ ದಿನದ ಮೊದಲ ಫೋಟೋ-ವಿಡಿಯೋಗಾಗಿ ಅನೇಕರು ಕಾತರದಿಂದ ಕಾಯುತ್ತಿದ್ದರು. ಅಂತಿಮವಾಗಿ ಮದುವೆ ವಿಡಿಯೋ ಹೊರಬಿದ್ದಿದೆ. ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿರುವ ಈ ವಿಡಿಯೋದಲ್ಲಿ, ನೂತನ ವಧು ವರನ ಖುಷಿ ಕ್ಷಣಗಳಿವೆ.

ಮಾರ್ಚ್ ಕೊನೆ ವಾರದಲ್ಲಿ ತಾಪ್ಸಿ ಪನ್ನು ತಮ್ಮ ಬಹುಕಾಲದ ಗೆಳೆಯ ಮಥಿಯಾಸ್ ಬೋ ಅವರನ್ನು ಮದುವೆ ಆಗಿದ್ದಾರೆಂಬ ಸುದ್ದಿ ಸದ್ದು ಮಾಡಿತು. ಖಾಸಗಿತನಕ್ಕೆ ಹೆಚ್ಚು ಮಹತ್ವ ಕೊಡುವ ತಾಪ್ಸಿ ಪನ್ನು ಮದುವೆ ವಿಚಾರವನ್ನು ಎಲ್ಲೂ ಬಿಟ್ಟುಕೊಡಲಿಲ್ಲ. ಯಾವ ಸುಳಿವೂ ಬಿಟ್ಟುಕೊಡದೇ ಕೇವಲ ಕುಟುಂಬಸ್ಥರು, ಸ್ನೇಹಿತರ ಸಮ್ಮುಖದಲ್ಲಿ ಉದಯಪುರದಲ್ಲಿ ಮದುವೆ ಆಗಿದ್ದಾರೆ ಎಂದು ವರದಿಗಳಾಗಿತ್ತು. ಒಂದು ವಾರದ ಬಳಿಕ ಖಾಸಗಿ ವಿವಾಹ ಸಮಾರಂಭದ ವಿಡಿಯೋ ಆನ್​ಲೈನ್​ನಲ್ಲಿ ಕಾಣಿಸಿಕೊಂಡಿದೆ.

ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿರುವ ವಿಡಿಯೋದಲ್ಲಿ ತಾಪ್ಸಿ ಪನ್ನು ಸಾಂಪ್ರದಾಯಿಕ ಕೆಂಪು ಬಣ್ಣದ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ. ಮದುವೆ ಸ್ಥಳ ಪ್ರವೇಶಿಸುವ ಸಂದರ್ಭದಲ್ಲಿ ಅವರು ಬಹಳ ಸಂತೋಷದಿಂದ ನೃತ್ಯ ಮಾಡಿದ್ದಾರೆ. ವರ ಮಥಿಯಾಸ್ ಬೋ ಕೂಡ ಶೇರ್ವಾನಿ ಧರಿಸಿ ಸಾಂಪ್ರದಾಯಿಕವಾಗಿ ಕಾಣಿಸಿಕೊಂಡಿದ್ದಾರೆ.

ಸೋಷಿಯಲ್​ ಮೀಡಿಯಾ ಪ್ಲಾಟ್​​ಫಾರ್ಮ್ ರೆಡ್ಡಿಟ್‌ನಲ್ಲಿ ಹಂಚಿಕೊಳ್ಳಲಾದ ವಿಡಿಯೋ, ಸಾಂಪ್ರದಾಯಿಕ ಸಂಗೀತ, ಚೂಡಾ, ಕಲೀರಸ್ ಮತ್ತು ಸನ್‌ಗ್ಲಾಸ್‌ಗಳೊಂದಿಗೆ ತಾಪ್ಸಿಯ ಆಕರ್ಷಕ ಪ್ರವೇಶವನ್ನು ತೋರಿಸಿದೆ. ವರನ ಹತ್ತಿರ ಸಮೀಪಿಸಿದ ವಧುವಿನ ಮೊಗದಲ್ಲಿ ಸಂತೋಷ ಉಕ್ಕಿಹರಿದಿದೆ. ಪರಸ್ಪರ ಆತ್ಮೀಯ ಅಪ್ಪುಗೆಯಲ್ಲಿ ತಲ್ಲೀನರಾದ ಸಂದರ್ಭ ಗುಲಾಬಿ ದಳಗಳ ಸುರಿಮಳೆಯಾಗುತ್ತದೆ. ಪುಷ್ಪ ಮಳೆಯ ಸಂದರ್ಭದಲ್ಲೇ ಇಬ್ಬರೂ ಹಾರ ಬದಲಾಯಿಸಿಕೊಳ್ಳುತ್ತಾರೆ.

ಇದನ್ನೂ ಓದಿ:ಕರ್ನಾಟಕದಲ್ಲೇ ಯಶ್ 'ಟಾಕ್ಸಿಕ್​' ಚಿತ್ರೀಕರಣ: ಕಾರಣಗಳಿಲ್ಲಿವೆ - Toxic Shooting

ತಮ್ಮ ವಿವಾಹ ಹೆಚ್ಚು ಪ್ರಚಾರ ಪಡೆಯುವ ಮನಸ್ಸು ಈ ಜೋಡಿಗಿರಲಿಲ್ಲ. ಹಾಗಾಗಿ ಯಾವುದೇ ಗುಟ್ಟು ಬಿಟ್ಟುಕೊಡದೇ, ಸದ್ದಿಲ್ಲದೇ ಮದುವೆಯಾಗಿದ್ದಾರೆ. ಮಾರ್ಚ್ 20 ರಂದು ಮದುವೆಯ ಉತ್ಸವವು ಪ್ರಾರಂಭವಾಗಿತ್ತು ಎಂದು ವರದಿಗಳು ಸೂಚಿಸಿವೆ. ಮಾರ್ಚ್ 23 ರಂದು ಉದಯಪುರದಲ್ಲಿ ಮದುವೆಯ ಮುಖ್ಯಶಾಸ್ತ್ರಗಳು ನಡೆದಿವೆ. ಅತ್ಯಂತ ಜನಪ್ರಿಯತೆಯ ಹೊರತಾಗಿಯೂ, ಮದವೆ ವಿಚಾರದಲ್ಲಿ ತಾಪ್ಸಿ ಮತ್ತು ಮಥಿಯಾಸ್ ಮಾಧ್ಯಮಗಳಿಂದ ದೂರವುಳಿದಿದ್ದಾರೆ. ಅದ್ಧೂರಿ ಆತ್ಮೀಯ ಆಚರಣೆಯಲ್ಲಿ ತಮ್ಮ ಮುಖ್ಯ ದಿನವನ್ನು ವಿಶೇಷವಾಗಿಸಿದ್ದಾರೆ.

ಇದನ್ನೂ ಓದಿ:ಬಹುಕಾಲದ ಗೆಳೆಯನನ್ನು ವರಿಸಿದ ನಟಿ ತಾಪ್ಸಿ ಪನ್ನು: ಪ್ರಿ ವೆಡ್ಡಿಂಗ್​ ಫೋಟೋ ಹಂಚಿಕೊಂಡ ಸಹೋದರಿ - Taapsee Pannu marries Mathias Boe

ಮಥಿಯಾಸ್ ಬೋ ಡೆನ್ಮಾರ್ಕ್ ಮೂಲದವರು. ಬ್ಯಾಡ್ಮಿಂಟನ್ ಆಟಗಾರ ಮತ್ತು ತರಬೇತುದಾರ. ತಾಪ್ಸಿ ಪನ್ನು ಬಹುಭಾಷಾ ಸಿನಿಮಾಗಳಲ್ಲಿ ಯಶಸ್ವಿ ವೃತ್ತಿಜೀವನ ಮುನ್ನಡೆಸುತ್ತಿದ್ದಾರೆ. ಬಹುಸಮಯಗಳಿಂದ ಡೇಟಿಂಗ್​ನಲ್ಲಿದ್ದರು. ತಮ್ಮ ಪ್ರೀತಿಗೆ ಮದುವೆ ಎಂಬ ಅಧಿಕೃತ ಮುದ್ರೆ ಒತ್ತಿದ್ದು, ಈ ವಿಚಾರದ ಬಗ್ಗೆ ಮಾತನಾಡುವಂತೆ ಅಭಿಮಾನಿಗಳು ಸೋಷಿಯಲ್​ ಮೀಡಿಯಾ ಮೂಲಕ ಒತ್ತಾಯಿಸುತ್ತಿದ್ದಾರೆ.

ABOUT THE AUTHOR

...view details