ಕರ್ನಾಟಕ

karnataka

ETV Bharat / entertainment

ಕಿಚ್ಚ ಸುದೀಪ್​​ ಶೂಟಿಂಗ್​ ಸೆಟ್​ನಲ್ಲಿ ಹೇಗಿರ್ತಾರೆಂಬುದು ಗೊತ್ತಾಗಬೇಕಾ?: ಈ ವಿಡಿಯೋದಲ್ಲಿ ನೋಡಿ - SUDEEP

ಅಭಿನಯ ಚಕ್ರವರ್ತಿ ಸುದೀಪ್​ ಬಗ್ಗೆ ತಿಳಿದುಕೊಳ್ಳಲು ಯಾರಿಗೆ ತಾನೆ ಆಸಕ್ತಿ ಇಲ್ಲ ಹೇಳಿ?. ಬಹುಬೇಡಿಕೆ ನಟನ ವೃತ್ತಿಜೀವನ ಮತ್ತು ವೈಯಕ್ತಿಕ ಜೀವನದ ಬಗ್ಗೆ ತಿಳಿದುಕೊಳ್ಳಲು ಕೋಟ್ಯಂತರ ಅಭಿಮಾನಿಗಳು ಉತ್ಸುಕರಾಗಿರುತ್ತಾರೆ. ಅದರರಂತೆ, ವಿಡಿಯೋವೊಂದು ಇಲ್ಲಿದೆ.

Sudeep
ಕಿಚ್ಚ ಸುದೀಪ್ (Photo: ETV Bharat)

By ETV Bharat Entertainment Team

Published : Dec 6, 2024, 12:11 PM IST

ಅಭಿನಯ ಚಕ್ರವರ್ತಿ ಕನ್ನಡ ಚಿತ್ರರಂಗದ ಕೀರ್ತಿ. ಸ್ಯಾಂಡಲ್​ವುಡ್​ ಜನಪ್ರಿಯತೆಯನ್ನು ಗಡಿ ಮೀರಿ ಪಸರಿಸಿದವರ ಪೈಕಿ ಕಿಚ್ಚ ಸುದೀಪ್​ ಪ್ರಮುಖರು. ತಮ್ಮ ಪಾತ್ರಕ್ಕೆ ಜೀವ ತುಂಬುವ ಮೂಲಕ ನಟನೆ ಅಂದ್ರೆ ಹೀಗಿರಬೇಕೆಂದು ತೋರಿಸಿಕೊಟ್ಟ ತಾರೆ. ತಮ್ಮ ಅಮೋಘ ಅಭಿನಯ, ವ್ಯಕ್ತಿತ್ವ, ನಡೆನುಡಿಯಿಂದಲೇ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿರುವ ಸೌತ್ ಸೂಪರ್​ ಸ್ಟಾರ್​ನ ಮುಂದಿನ ಬಹುನಿರೀಕ್ಷಿತ ಚಿತ್ರ 'ಮ್ಯಾಕ್ಸ್'.

ಬಿಡುಗಡೆ ಹೊಸ್ತಿಲಿನಲ್ಲಿರುವ ಚಿತ್ರದ ಪ್ರಚಾರ ಆರಂಭಗೊಂಡಿದೆ. ಮ್ಯಾಕ್ಸ್​ ಚಿತ್ರಮಂದಿರ ಪ್ರವೇಶಿಸಲು ದಿನಗಣನೆ ಆರಂಭಗೊಂಡಿದ್ದು, ಸ್ವತಃ ನಾಯಕ ನಟ ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ದಕ್ಷಿಣ ಚಿತ್ರರಂಗದಲ್ಲೇ ದೊಡ್ಡ ಮಟ್ಟದ ಹೈಪ್​ ಕ್ರಿಯಟ್​ ಮಾಡಿರುವ 'ಮ್ಯಾಕ್ಸ್​'ನ ಮೇಕಿಂಗ್​ ಅನ್ನು ಇಲ್ಲಿ ಕಾಣಬಹುದು.

ಮ್ಯಾಕ್ಸ್​​ ದಿ ಮೂವಿ:ಮೇಕಿಂಗ್​ ವಿಡಿಯೋ ಹಂಚಿಕೊಂಡ ಸುದೀಪ್​​, ''ಮ್ಯಾಕ್ಸ್​​ ದಿ ಮೂವಿ'' ಎಂಬ ಕ್ಯಾಪ್ಷನ್​ ಕೊಟ್ಟಿದ್ದಾರೆ. ಜೊತೆಗೆ, ವಿಡಿಯೋ ಮೇಲೆ ಡಿ.25ಕ್ಕೆ ಸಿನಿಮಾ ಬಿಡುಗಡೆ ಎಂಬ ಕ್ಯಾಪ್ಷನ್​ ಕೊಟ್ಟಿದ್ದಾರೆ. ವಿಡಿಯೋದಲ್ಲಿ, ಸುದೀಪ್​ ಅವರು ಶೂಟಿಂಗ್​ ಸೆಟ್​​ನಲ್ಲಿ ಮಸ್ತ್​ ಮಜಾ ಮಾಡಿರೋದನ್ನು ಕಾಣಬಹುದು. ಸಹುದ್ಯೋಗಿಗಳೊಂದಿಗೆ ಸೂಪರ್ ಸ್ಟಾರ್​ ಎಷ್ಟು ಫ್ರೆಂಡ್ಲಿ ಆಗಿರುತ್ತಾರೆಂಬುದು ಇಲ್ಲಿ ಗೊತ್ತಾಗುತ್ತಿದೆ. ಸ್ಟ್ಯಾಂಡರ್ಡ್​​ಗೆ ಮತ್ತೊಂದು ಹೆಸರೇ ಸುದೀಪ್​ ಅಂತಿರುವಾಗ, ನಟನ ಸ್ನೇಹಪರ ವರ್ತನೆ ಬಹುತೇಕರ ಹೃದಯ ಗೆದ್ದಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

ಇದನ್ನೂ ಓದಿ:ಅಬ್ಬಬ್ಬಾ, ಆರ್​ಆರ್​ಆರ್​ ದಾಖಲೆ ಪುಡಿಗಟ್ಟಿದ 'ಪುಷ್ಪ 2': ಮೊದಲ ದಿನವೇ ಅತಿ ಹೆಚ್ಚು ಕಲೆಕ್ಷನ್​ ಮಾಡಿದ ಸಿನಿಮಾವಿದು

ಬರೋಬ್ಬರಿ 50 ಕೋಟಿ ರೂಪಾಯಿ ಬಜೆಟ್​ ಸಿನಿಮಾ:ವಿಜಯ್ ಕಾರ್ತಿಕೇಯ ಕೈಚಳಕದಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ 'ಮ್ಯಾಕ್ಸ್' ಚಿತ್ರವನ್ನು ಕಲೈಪುಲಿ ಎಸ್ ತನು ವಿ ಕ್ರಿಯೇಷನ್ಸ್ ಹಾಗೂ ಕಿಚ್ಚ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಲಾಗಿದೆ. ಬರೋಬ್ಬರಿ 50 ಕೋಟಿ ರೂಪಾಯಿ ಬಜೆಟ್​ನ ಸಿನಿಮಾವೆಂದು ವರದಿಯಾಗಿದೆ. ​ಸುದೀಪ್​ ಅವರು ನಟನೆ ಜೊತೆ ನಿರ್ಮಾಣದಲ್ಲೂ ಕೈ ಜೋಡಿಸಿದ್ದಾರೆ. ಇದೇ ಡಿಸೆಂಬರ್ 25ರಂದು ಕನ್ನಡ ಮಾತ್ರವಲ್ಲದೇ ಐದು ಭಾಷೆಗಳಲ್ಲಿ ಅಂದರೆ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಅದ್ದೂರಿಯಾಗಿ ಚಿತ್ರಮಂದಿರ ಪ್ರವೇಶಿಸುತ್ತಿರುವ 'ಮ್ಯಾಕ್ಸ್​​​'ನಲ್ಲಿ ಸುದೀಪ್ ಜೊತೆ ವರಲಕ್ಷ್ಮೀ ಶರತ್‌ಕುಮಾರ್, ತೆಲುಗು ನಟ ಸುನೀಲ್, ಶರತ್ ಲೋಹಿತಾಶ್ವ, 'ಕಾಲಕೇಯ' ಪ್ರಭಾಕರ್, ಪ್ರಮೊದ್ ಶೆಟ್ಟಿ, ನರೇನ್, ಸಂಯಕ್ತಾ ಹೊರನಾಡು ಸೇರಿ ಹಲವರು ನಟಿಸಿದ್ದಾರೆ. ಈ ವರ್ಷಾಂತ್ಯ ತೆರೆಕಾಣುತ್ತಿರುವ ಸಿನಿಮಾ ಮೇಲೆ ಅಪಾರ ಸಂಖ್ಯೆಯ ಅಭಿಮಾನಿಗಳು ಸೇರಿದಂತೆ ಸಿನಿಪ್ರಿಯರು ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ.

ಇದನ್ನೂ ಓದಿ:ಮಹಿಳಾ ಅಭಿಮಾನಿ ಸಾವು; ಮೃತಳ ಕುಟುಂಬಕ್ಕೆ ಅಗತ್ಯ ನೆರವಿನ ಭರವಸೆ ನೀಡಿದ ಅಲ್ಲು ಅರ್ಜುನ್​​ ತಂಡ

ಕಿಚ್ಚ VS ಉಪ್ಪಿ:ಈ ವರ್ಷಾಂತ್ಯ ಸೂಪರ್​​ ಸ್ಟಾರ್ಸ್​​ ಸಿನಿಮಾ ವಾರ್​​ಗೆ ಸ್ಯಾಂಡಲ್​ವುಡ್​ ಸಾಕ್ಷಿಯಾಗಲಿದೆ. ಕನ್ನಡ ಚಿತ್ರರಂಗದ ಬುದ್ಧಿವಂತ ನಟ ನಿರ್ದೇಶಕ ಖ್ಯಾತಿಯ ರಿಯಲ್ ಸ್ಟಾರ್ ಉಪೇಂದ್ರ ಮತ್ತು ಅಭಿನಯ ಚಕ್ರವರ್ತಿ ಸುದೀಪ್​​ ಮುಖ್ಯಭೂಮಿಕೆಯ ಸಿನಿಮಾಗಳು ಕೇವಲ ಐದೇ ದಿನಗಳ ಅಂತರದಲ್ಲಿ ಚಿತ್ರಮಂದಿರ ಪ್ರವೇಶಿಲು ಸಜ್ಜಾಗಿದೆ. ಹೌದು, ಉಪೇಂದ್ರ ನಟನೆಯ ಯು ಐ ಡಿಸೆಂಬರ್ 20ರಂದು ಬಿಡುಗಡೆ ಆದರೆ, ಸುದೀಪ್​ ಮುಖ್ಯಭೂಮಿಕೆಯ ಮ್ಯಾಕ್ಸ್​​ ಡಿಸೆಂಬರ್ 25ಕ್ಕೆ ಚಿತ್ರಮಂದಿರ ಪ್ರವೇಶಿಸಲಿದೆ. ಹಾಗಾಗಿ ಬಾಕ್ಸ್​ ಆಫೀಸ್​ ಘರ್ಷಣೆ ಪಕ್ಕಾ ಆಗಿದೆ.

ABOUT THE AUTHOR

...view details