ಬಾಲಿವುಡ್ ಬೆಡಗಿ ಶ್ರದ್ಧಾ ಕಪೂರ್ ಬಹಳ ಸಮಯದಿಂದ ಸ್ಕ್ರೀನ್ ರೈಟರ್ ರಾಹುಲ್ ಮೋದಿ ಅವರೊಂದಿಗೆ ಡೇಟಿಂಗ್ ನಡೆಸುತ್ತಿದ್ದಾರೆಂಬ ವದಂತಿಗಳಿವೆ. ಯಶಸ್ವಿ ತಾರೆಯ ಮೊಬೈಲ್ ವಾಲ್‌ಪೇಪರ್ ನೋಡಿರುವ ಅಭಿಮಾನಿಗಳೀಗ ಅಂತೆಕಂತೆಗಳನ್ನು ಉಲ್ಭಣಗೊಳಿಸಿದ್ದಾರೆ. ಶ್ರದ್ಧಾ ಕಪೂರ್ ತಮ್ಮ ಲವ್ ಲೈಫ್ ಅನ್ನು ಖಾಸಗಿಯಾಗೇ ಇಟ್ಟುಕೊಂಡಿದ್ದರೂ, ಇತ್ತೀಚಿನ ವೈರಲ್ ವಿಡಿಯೋ ಆನ್‌ಲೈನ್‌ನಲ್ಲಿ ಸಖತ್ ಸದ್ದು ಮಾಡಿದೆ.
ಸ್ತ್ರೀ ಸಿನಿಮಾ ಖ್ಯಾತಿಯ ನಟಿ, ರಾಹುಲ್ ಮೋದಿ ಅವರೊಂದಿಗಿನ ಸಂಬಂಧವನ್ನು ಈವರೆಗೆ ಅಧಿಕೃತವಾಗಿ ದೃಢಪಡಿಸಿಲ್ಲ. ಆದರೆ ಅವರು ಆಗಾಗ್ಗೆ ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ಸುಳಿವು ನೀಡುತ್ತಾ ಬಂದಿದ್ದಾರೆ. ಒಮ್ಮೆ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿನಲ್ಲಿ ಸೆಲ್ಫಿ ಶೇರ್ ಮಾಡಿ, "ದಿಲ್ ಲೇಲೆ, ನೀಂದ್ ತೋ ದೇದೇ ಯಾರ್" (ಹೃದಯ ತೆಗೆದುಕೋ, ಆದರೆ ನನ್ನ ನಿದ್ದೆಯನ್ನು ವಾಪಸ್ ಕೊಡು) ಎಂದು ಬರೆದುಕೊಂಡಿದ್ದರು. ಇದು ಡೇಟಿಂಗ್ ವದಂತಿಗಳಿಗೆ ಕಾರಣವಾಗಿತ್ತು.
ಒಮ್ಮೆ ವಡಾ ಪಾವ್‌ನ ಫೋಟೋವನ್ನು ಪೋಸ್ಟ್ ಮಾಡಿ, ರಾಹುಲ್‌ಗೆ ಟ್ಯಾಗ್ ಮಾಡಿದ್ದರು. ಜೊತೆಗೆ, "ಯಾವಾಗಲೂ ವಡಾ ಪಾವ್ ತಂದುಕೊಡಲು ನಿಮನ್ನು ಕಾಡಿಸುವಂತಾಗಲಿ" ಎಂದು ಬರೆದುಕೊಂಡಿದ್ದರು. ಈ ಸ್ವೀಟ್ ಗೆಸ್ಚರ್ಗಳ ಹೊರತಾಗಿಯೂ, ಶ್ರದ್ಧಾ ಎಂದಿಗೂ ತಮ್ಮ ರಿಲೇಶನ್ಶಿಪ್ ಬಗ್ಗೆ ಬಹಿರಂಗವಾಗಿ ಮಾತನಾಡಿಲ್ಲ.
ಲೇಟೆಸ್ಟ್ ಸುದ್ದಿಯಂದ್ರೆ ಶ್ರದ್ಧಾ ಅವರ ಮೊಬೈಲ್ ವಾಲ್‌ಪೇಪರ್ ವೈರಲ್ ಆಗಿದೆ. ತಮ್ಮ ಕಾರಿನ ಕಡೆ ಧಾವಿಸಿದ ನಟಿಯ ವಾಲ್‌ಪೇಪರ್ ಅನ್ನು ಅಭಿಮಾನಿಗಳು ಗಮನಿಸಿದ್ದಾರೆ. ಪುರುಷನೊಂದಿಗೆ ಇರುವ ನಟಿಯ ಫೋಟೋ ಅದಾಗಿತ್ತು. ಫೋಟೋ ಝೂಮ್ ಮಾಡಿದ ಅಭಿಮಾನಿಗಳು ರಾಹುಲ್ ಮೋದಿ ಎಂದು ತಿಳಿಸಿದ್ದಾರೆ. ಇದು ಆನ್‌ಲೈನ್‌ನಲ್ಲಿ ಕಾಮೆಂಟ್‌ಗಳ ಮಳೆ ಸುರಿಯಲು ಕಾರಣವಾಯಿತು. ಫೋಟೋ ಕಂಡು ಉತ್ಸುಕನಾದ ಅಭಿಮಾನಿಯೊಬ್ಬರು "ಅವರಾರು?" ಎಂದು ಪ್ರಶ್ನಿಸಿದ್ದು, ಆ ಕೂಡಲೇ ಇತರರು "ರಾಹುಲ್ ಮೋದಿ" ಎಂದು ಉತ್ತರಿಸಲು ಪ್ರಾರಂಭಿಸಿದರು.