ಕರ್ನಾಟಕ

karnataka

ETV Bharat / entertainment

'ಸಂಜು ವೆಡ್ಸ್ ಗೀತಾ' ನಿರ್ದೇಶಕ ನಾಗಶೇಖರ್ ಕಾರು ಅಪಘಾತ: ಡಿಸಿಪಿ ಹೇಳಿದ್ದಿಷ್ಟು! - Director Nagashekar Car Accident - DIRECTOR NAGASHEKAR CAR ACCIDENT

ಕನ್ನಡ ಚಿತ್ರರಂಗದ ನಿರ್ದೇಶಕ ನಾಗಶೇಖರ್ ಅವರ ಕಾರು ಅಪಘಾತಕ್ಕೊಳಗಾಗಿದೆ. ಮಹಿಳೆಯೊಬ್ಬರಿಗೆ ಗಾಯವಾಗಿದೆ ಎಂಬ ಬಗ್ಗೆ ಮಾಹಿತಿಯಿದ್ದು, ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ಡಿಸಿಪಿ ಅನಿತಾ ಹದ್ದಣ್ಣನವರ್ ತಿಳಿಸಿದ್ದಾರೆ.

Director Nagashekar Car Accident
ನಿರ್ದೇಶಕ ನಾಗಶೇಖರ್ ಕಾರು ಅಪಘಾತ (ETV Bharat)

By ETV Bharat Karnataka Team

Published : Sep 6, 2024, 5:21 PM IST

ಬೆಂಗಳೂರು: ಮೈನಾ, ಸಂಜು ವೆಡ್ಸ್ ಗೀತಾ, ಅರಮನೆ, ಅಮರ್​​ ಹಾಗೂ ಮಾಸ್ತಿಗುಡಿ ಸೇರಿದಂತೆ ಹಲವು ಹಿಟ್​​ ಚಿತ್ರಗಳ ನಿರ್ದೇಶಕ ನಾಗಶೇಖರ್ ಅವರ ಕಾರು ಅಪಘಾತಕ್ಕೊಳಗಾಗಿದೆ. ಇದೊಂದು ಸೆಲ್ಫ್ ಆ್ಯಕ್ಸಿಡೆಂಟ್ ಆಗಿದೆ ಎಂದು ತಿಳಿದು ಬಂದಿದೆ.

ಜ್ಞಾನಭಾರತಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಮಧ್ಯಾಹ್ನ ಸುಮಾರು 1.30ರ ವೇಳೆಗೆ ನಾಗಶೇಖರ್ ಅವರು ಬೇಂಜ್ ಕಾರು ಚಲಾಯಿಸಿಕೊಂಡು ಹೋಗಿದ್ದಾರೆ. ದಾರಿ ಮಧ್ಯೆ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಕಾರು ಹಾನಿಗೊಳಗಾಗಿದೆ. ನಾಗಶೇಖರ್ ಅವರಿಗೂ ಸಣ್ಣಪುಟ್ಟ ಗಾಯವಾಗಿದೆ ಎಂಬ ಮಾಹಿತಿ ಸಿಕ್ಕಿದೆ.

ಅಪಘಾತದ ಬಗ್ಗೆ ಡಿಸಿಪಿ ಹದ್ದಣ್ಣನವರ್​ ಹೇಳಿದ್ದಿಷ್ಟು:ಈ ಬಗ್ಗೆ ಪ್ರತಿಕ್ರಿಯಿಸಿರುವ ಪಶ್ಚಿಮ ವಿಭಾಗದ ಸಂಚಾರ ಡಿಸಿಪಿ ಅನಿತಾ ಹದ್ದಣ್ಣನವರ್, ಇಂದು ಮಧ್ಯಾಹ್ನ ನಾಗಶೇಖರ್ ಓಡಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಕೂಡಲೇ ಅವರೇ ಸ್ಥಳದಿಂದ ಜ್ಞಾನಭಾರತಿ ಪೊಲೀಸ್ ಠಾಣೆಗೆ ತೆರಳಿ, ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಅಪಘಾತದ ವೇಳೆ‌ ಮಹಿಳೆಯೊಬ್ಬರಿಗೆ ಗಾಯವಾಗಿದೆ ಎಂಬುದರ ಮಾಹಿತಿಯಿದ್ದು, ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ಡಿಸಿಪಿ ತಿಳಿಸಿದ್ದಾರೆ.

ಇದನ್ನೂ ಓದಿ:'ನಟಿಯರ ಮೇಲಿನ ದೌರ್ಜನ್ಯದಂತಹ ಪ್ರಕರಣಗಳು ಕನ್ನಡ ಚಿತ್ರರಂಗದಲ್ಲಿಲ್ಲ': ತಾರಾ ಅನುರಾಧ - TARA ANURADHA REACTION

ABOUT THE AUTHOR

...view details