ರಿಪ್ಪನ್ ಸ್ವಾಮಿ ಸ್ಯಾಂಡಲ್ವುಡ್ನಲ್ಲಿ ಫಸ್ಟ್ ಲುಕ್ ಪೋಸ್ಟರ್ ಮೂಲಕ ಕುತೂಹಲ ಮೂಡಿಸಿರುವ ಸಿನಿಮಾ. ಯುವ ನಿರ್ದೇಶಕ ಕಿಶೋರ್ ಮೂಡುಬಿದ್ರೆ ವಿಭಿನ್ನ ಕಂಟೆಂಟ್ನೊಂದಿಗೆ ಚಂದನವನದ ಅಂಗಳದಲ್ಲಿ ಚೆಂದದ ಚಿತ್ರ ಬಿಡಿಸಲು ಸಜ್ಜಾಗಿದ್ದಾರೆ. ವಿಜಯ್ ರಾಘವೇಂದ್ರ ಮುಖ್ಯಭೂಮಿಕೆಯಲ್ಲಿ ನಟಿಸಿರುವ 'ರಿಪ್ಪನ್ ಸ್ವಾಮಿ' ಸಿನಿಮಾದಲ್ಲಿ ಅಶ್ವಿನಿ ಚಂದ್ರಶೇಖರ್ ಎಂಬ ಮಲೆನಾಡಿನ ಕುವರಿ ಕೂಡಾ ಅಷ್ಟೇ ತೂಕದ ಪಾತ್ರ ನಿರ್ವಹಿಸಿದ್ದಾರೆ.
ನಟಿ ಅಶ್ವಿನಿ ಚಂದ್ರಶೇಖರ್ ಮೂಲತಃ ಶಿವಮೊಗ್ಗದವರು. ವಿದ್ಯಾಭ್ಯಾಸ ಪಡೆದಿದ್ದು ಬೆಂಗಳೂರಿನಲ್ಲಿ. ಇಂಜಿನಿಯರಿಂಗ್ ಮುಗಿಸಿರುವ ಅಶ್ವಿನಿ ಅವರಿಗೆ ಸೆಳೆದಿದ್ದು ಚಿತ್ರೋದ್ಯಮ. ಸೀದಾ ಈ ಕಡೆ ಬಂದ ಇಂಜಿನಿಯರ್ ತಮ್ಮ ನಟನಾ ಕೌಶಲ್ಯದಿಂದ ಕನ್ನಡ, ತಮಿಳು, ತೆಲುಗು ಇಂಡಸ್ಟ್ರಿಯಲ್ಲಿ ತಮ್ಮದೇ ಸ್ಥಾನ ಪಡೆದರು. ಅಶ್ವಿನಿ ಅವರು ಒಳ್ಳೆಯ ಡ್ಯಾನ್ಸರ್ ಕೂಡಾ ಹೌದು.
ಅಶ್ವಿನಿ ಚಂದ್ರಶೇಖರ್ (Photo: film poster) ಈಗಾಗಲೇ ನಟಿ ಅಶ್ವಿನಿ ಚಂದ್ರಶೇಖರ್ ಕನ್ನಡದಲ್ಲಿ ಪ್ರೇಮ ಪಲ್ಲಕ್ಕಿ, ಒಂದು ರೊಮ್ಯಾಂಟಿಕ್ ಪ್ರೇಮ ಕಥೆ, ಆಕ್ಟೋಪಸ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ತೆಲುಗಿನಲ್ಲಿ ಪ್ರೇಮ್ ಕಹಾನಿ, ಆವು ಪುಳಿ ಮಧ್ಯಲೋ ಪ್ರಭಾಸ್ ಪೆಳ್ಳಿ ಸೇರಿದಂತೆ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮಿಳಿನಲ್ಲೂ ಮೆರ್ಲಿನ್, ಪರಂಜು ಸೆಲ್ಲವ, ಕಾಲ್ ಟ್ಯಾಕ್ಸಿ, ಜಿವಿ2 ಸಿನಿಮಾದಲ್ಲಿ ನಟಿಸಿದ್ದಾರೆ. ಜಿವಿ2ಗೆ ಬೆಸ್ಟ್ ಡೆಬ್ಯೂ ಅವಾರ್ಡ್ ಕೂಡಾ ಬಂದಿದೆ. ಜಿ3 ಸಿನಿಮಾದ ಕೆಲಸದಲ್ಲೀಗ ಬ್ಯುಸಿಯಾಗಿದ್ದಾರೆ.
ಅಶ್ವಿನಿ ಚಂದ್ರಶೇಖರ್ (Photo: ETV Bharat) ಇದನ್ನೂ ಓದಿ:ದಳಪತಿ ವಿಜಯ್ ಕೊನೆ ಚಿತ್ರದಲ್ಲಿ ಶಿವಣ್ಣ: ಸೌತ್ ಸೂಪರ್ಸ್ಟಾರ್ಸ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿರುವ ಸೆಂಚುರಿ ಸ್ಟಾರ್
ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿರುವ ಅಶ್ವಿನಿ ಬ್ಯುಸಿ ನಟಿಯರಲ್ಲೋರ್ವರು. ಸದ್ಯ ತಮಿಳಿನಲ್ಲಿ ಎರಡು ಸಿನಿಮಾ ರಿಲೀಸ್ಗೆ ರೆಡಿ ಇವೆ. ಮಲಯಾಳಂನಲ್ಲಿ ಎರಡು ಸಿನಿಮಾ ಮಾಡಿದ್ದಾರೆ. ಕನ್ನಡದಲ್ಲಿ ರಿಪ್ಪನ್ ಸ್ವಾಮಿ ರಿಲೀಸ್ ಆಗಬೇಕಿದೆ.
ಅಶ್ವಿನಿ ಚಂದ್ರಶೇಖರ್ (Photo: ETV Bharat) ಇದನ್ನೂ ಓದಿ:'ಇವರು ನಿಜವಾದ ನಟಿ': ತ್ರಿವಿಕ್ರಮ್‍ಗಾಗಿ ಶಿಶಿರ್ ಕೈಬಿಟ್ಟ ಚೈತ್ರಾ, ಬಿಗ್ ಬಾಸ್ ಮನೆಯಲ್ಲಿ ಕೋಲಾಹಲ
ರಿಪ್ಪನ್ ಸ್ವಾಮಿಯಲ್ಲಿ ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಅವರ ಪತ್ನಿ ಪಾತ್ರ ನಿರ್ವಹಿಸಿದ್ದಾರೆ. ಡಾಕ್ಟರ್ ಆಗಿ ಕಾಣಿಸಿಕೊಳ್ಳುತ್ತಿದ್ದು, ಕುಟುಂಬದ ಮಹತ್ವ ಸಾರುವಂಥ ಪಾತ್ರವದು. ಈ ಸಿನಿಮಾದಲ್ಲಿ ಹೀರೋಗೆ ಎಷ್ಟು ಮಹತ್ವವಿದೆಯೋ ಅಷ್ಟೇ ಮಹತ್ವ ಹೀರೋಯಿನ್ಗೂ ಇದೆ. ಸಮಾನವಾಗಿರುವಂಥ ಪಾತ್ರಗಳವು. ಹೀಗಾಗಿ ಅಶ್ವಿನಿ ಅವರ ಪಾತ್ರದ ಬಗ್ಗೆ ನಿರೀಕ್ಷೆಗಳು ಹೆಚ್ಚಿವೆ. ಪಂಚಾಂನನ ಬ್ಯಾನರ್ ಅಡಿಯಲ್ಲಿ ಸಮಾನ ಮನಸ್ಕರು ಸೇರಿ ನಿರ್ಮಾಣ ಮಾಡಿರುವಂತ ಸಿನಿಮಾ ಇದಾಗಿದೆ. ಸದ್ಯ ರಿಪ್ಪನ್ ಸ್ವಾಮಿ ಸಿನಿಮಾ ಸೆನ್ಸಾರ್ ಅಂಗಳದಲ್ಲಿದ್ದು, ಶೀಘ್ರವೇ ಪ್ರೇಕ್ಷಕರ ಮುಂದೆ ಬರಲಿದೆ. ಸಿನಿಮಾಗೆ ಪ್ರೇಕ್ಷಕರು ಯಾವ ರೀತಿ ಸ್ಪಂದಿಸುತ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ.
ಅಶ್ವಿನಿ ಚಂದ್ರಶೇಖರ್ (Photo: ETV Bharat)