ಕರ್ನಾಟಕ

karnataka

ETV Bharat / entertainment

ಸೂಪರ್ ಸ್ಟಾರ್ ಸೂರ್ಯ ಜೊತೆ ಪೂಜಾ ಹೆಗ್ಡೆ ಸ್ಕ್ರೀನ್​ ಶೇರ್: ಪೋಸ್ಟರ್ ರಿಲೀಸ್​​ - Pooja Hegde

'ಸೂರ್ಯ 44' ಸಿನಿಮಾದಲ್ಲಿ ಸೌತ್ ಸೂಪರ್ ಸ್ಟಾರ್ ಸೂರ್ಯ ಜೊತೆ ಪೂಜಾ ಹೆಗ್ಡೆ ತೆರೆ ಹಂಚಿಕೊಳ್ಳುತ್ತಿದ್ದಾರೆ.

By ETV Bharat Karnataka Team

Published : Jun 2, 2024, 10:47 AM IST

Pooja Hegde
ಪೂಜಾ ಹೆಗ್ಡೆ (ETV Bharat Archives)

ಕರಾವಳಿ ಬೆಡಗಿ ಪೂಜಾ ಹೆಗ್ಡೆ ಸಿನಿರಂಗದಲ್ಲಿ ಮತ್ತೊಮ್ಮೆ ಶೈನ್​ ಆಗುವ ಕಾತರದಲ್ಲಿದ್ದಾರೆ. ಒಂದು ಕಾಲದಲ್ಲಿ ಸೂಪರ್​ ಹಿಟ್​​ ಸಿನಿಮಾಗಳನ್ನು ನೀಡಿದ ಈ ಚೆಲುವೆಯ ಕ್ರೇಜ್​​ ಕ್ರಮೇಣ ಕಡಿಮೆಯಾಗತೊಡಗಿತು. ನಟಿಯ 'ರಾಧೆ ಶ್ಯಾಮ್' ಮತ್ತು 'ಬೀಸ್ಟ್'ದಂತಹ ಕೆಲ ಚಿತ್ರಗಳು ನಿರೀಕ್ಷೆ ತಲುಪಲಿಲ್ಲ. ಸೂಪರ್ ಸ್ಟಾರ್​ ಸಲ್ಮಾನ್​​ ಖಾನ್​​​ ಜೊತೆಗಿನ ಕಿಸಿ ಕಾ ಭಾಯ್​, ಕಿಸಿ ಕಿ ಜಾನ್​​​ ಚಿತ್ರ ಯಶಸ್ವಿಯಾಯಿತಾದರೂ, ಬಾಕ್ಸ್​​​ ಆಫೀಸ್​ ಅಂಕಿ ಅಂಶಗಳು ಅಂದುಕೊಂಡಷ್ಟು ಲಾಭ ತರಲಿಲ್ಲ. ಹೀಗಾಗಿ ನಟಿಗೆ ಆಫರ್‌ಗಳೂ ಕಡಿಮೆಯಾದವು ಎಂಬ ಮಾತುಗಳು ಕೇಳಿಬಂದಿದ್ದವು. ಆದ್ರೀಗ ಯಶಸ್ಸಿನ ಗುರಿಯೊಂದಿಗೆ ಪೂಜಾ ಹೊಸ ಪ್ರೊಜೆಕ್ಟ್​ಗೆ ಕೈ ಹಾಕಿದ್ದಾರೆ. ಈ ಬಗ್ಗೆ ಅಫೀಶಿಯಲ್​​ ಅನೌನ್ಸ್​ಮೆಂಟ್​ ಕೂಡ ಹೊರಬಿದ್ದಿದೆ.

ದಕ್ಷಿಣದ ನಂತರ ಬಾಲಿವುಡ್ ಹಾದಿ ಹಿಡಿದ ಹೆಗ್ಡೆ, ಸಲ್ಮಾನ್ ಖಾನ್ ಅಲ್ಲದೇ ರಣ್​​ವೀರ್ ಸಿಂಗ್, ಹೃತಿಕ್​​ ರೋಷನ್​​ ಅವರಂತಹ ಸ್ಟಾರ್‌ ನಟರ ಜೊತೆಯೂ ನಟಿಸಿದರು. ಅವೆಲ್ಲವೂ ಬಿಗ್ ಬಜೆಟ್ ಸಿನಿಮಾಗಳೇ. ಆದರೆ ದಕ್ಷಿಣದ ಈ ಚೆಲುವೆ ಬಿಟೌನ್‌ನಲ್ಲಿ ಮಾಡಿದ ಚಿತ್ರಗಳು ಪ್ರೇಕ್ಷಕರನ್ನು ಮೆಚ್ಚಿಸಲು ಕೊಂಚ ಹಿನ್ನಡೆ ಕಂಡವು. ಇತ್ತೀಚೆಗೆ ನಟಿಯ ಯಾವುದೇ ಸಿನಿಮಾಗಳು ಘೋಷಣೆಯಾಗಲಿಲ್ಲ. ಹಾಗಾಗಿ ಅಭಿಮಾನಿಗಳು ಗೊಂದಲದಲ್ಲಿದ್ದರು.

ಕೆಲ ದಿನಗಳಿಂದ ಒಂದೊಳ್ಳೆ ಆಫರ್​ಗಾಗಿ ಕಾಯುತ್ತಿದ್ದ ಪೂಜಾಗೆ ಕಾಲಿವುಡ್​ನಲ್ಲಿ ಕ್ರೇಜಿ ಆಫರ್​ ಸಿಕ್ಕಿದೆ. ತಮಿಳಿನ ಸ್ಟಾರ್ ಹೀರೋ ಸೂರ್ಯ ಹಾಗೂ ಕಾರ್ತಿಕ್ ಸುಬ್ಬರಾಜ್ ಕಾಂಬಿನೇಶನ್​ನ 'ಸೂರ್ಯ 44' ಸಿನಿಮಾದಲ್ಲಿ ನಾಯಕಿಯಾಗಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಚಿತ್ರ ತಯಾರಕರು ಪೂಜಾ ಫಸ್ಟ್ ಲುಕ್ ಪೋಸ್ಟರ್ ಅನಾವರಣಗೊಳಿಸಿದ್ದಾರೆ. ಪೋಸ್ಟರ್ ಸ್ಪಷ್ಟವಾಗಿಲ್ಲವಾದರೂ, ಆಭರಣಗಳಿಂದ ಸಾಂಪ್ರದಾಯಿಕ ನೋಟದಲ್ಲಿ ಕಾಣಿಸಿಕೊಂಡಿದ್ದಾರೆ. ಪೋಸ್ಟರ್ ನೋಡಿದ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದಾರೆ. ಈ ಸಿನಿಮಾ ನಟಿಗೆ ಅದೃಷ್ಟ ತರಲಿದೆ ಎಂದು ನಂಬಿದ್ದಾರೆ.

ಇದನ್ನೂ ಓದಿ:ಸಾಗರೋತ್ತರ ಪ್ರದೇಶದಲ್ಲಿ ಸಾರಾ ಅಲಿ ಖಾನ್​​; ಫೋಟೋಗಳನ್ನು ನೋಡಿ - Sara Ali Khan

ಈ ಹಿಂದೆ ಸೌತ್ ಸೂಪರ್ ಸ್ಟಾರ್ ಮಹೇಶ್​​ ಬಾಬು ಅವರ ತೆಲುಗಿನ ಗುಂಟೂರು ಖಾರಂನಲ್ಲಿ ಪೂಜಾ ಹೆಗ್ಡೆ ನಾಯಕ ನಟಿಯಾಗಿ ಆಯ್ಕೆಯಾಗಿದ್ದರು. ಆದ್ರೆ ಅನಿರೀಕ್ಷಿತವಾಗಿ ಯೋಜನೆಯಿಂದ ಹೊರಬಂದರು. ಶೂಟಿಂಗ್​​ ಡೇಟ್ಸ್ ಕೊರತೆ ಎನ್ನಲಾಗಿತ್ತು. ಈ ಚಿತ್ರದಲ್ಲಿ ಪೂಜಾ ಬದಲು ಶ್ರೀಲೀಲಾ ನಟಿಸಿ, ತಮ್ಮ ಜನಪ್ರಿಯತೆ ಹೆಚ್ಚಿಸಿಕೊಂಡರು. ಗುಂಟೂರು ಖಾರಂ ಸೂಪರ್ ಹಿಟ್ ಆಯಿತು. ಇದೀಗ ಪೂಜಾ ಅವರು ಸೂರ್ಯ ಜೊತೆ ನಟಿಸಲು ಸಜ್ಜಾಗಿದ್ದು, ಈ 'ಸೂರ್ಯ 44' ಪ್ರೊಜೆಕ್ಟ್​​ ನಟಿಗೆ ಯಶಸ್ಸು ತಂದು ಕೊಡಲಿದೆಯೇ ಇಲ್ಲವೇ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ:ಸ್ಪೇನ್‌ನಲ್ಲಿ ಶಾರುಖ್ ಖಾನ್ 'ಕಿಂಗ್' ಶೂಟಿಂಗ್​? ಫೋಟೋ ವೈರಲ್​ - SRK King Shooting

ABOUT THE AUTHOR

...view details