'ಬಿಗ್ ಬಾಸ್ ಕನ್ನಡ ಸೀಸನ್ 11' ಫಿನಾಲೆಯ ಹೊಸ್ತಿಲಲ್ಲಿದೆ. ಜನವರಿ 26ರಂದು ಗ್ರ್ಯಾಂಡ್ ಫಿನಾಲೆ ನಡೆಯೋದು ಖಚಿತ. ಬಿಗ್ ಬಾಸ್ ಮನೆಯ ವಾತಾವರಣ ಬಹುತೇಕ ಬದಲಾಗಿದೆ. ಇಂದಿನ ಸಂಚಿಕೆಯಲ್ಲಿ ಖಳನಾಯಕನಾಗಿ ವೈಲ್ಡ್ ಕಾರ್ಡ್ ಸ್ಪರ್ಧಿ ರಜತ್ ಕಿಶನ್ ಅಬ್ಬರಿಸಲಿದ್ದು, ಮತ್ತೊಮ್ಮೆ ಚೈತ್ರಾ ಕುಂದಾಪುರ vs ರಜತ್ ಮಾತಿನ ಚಕಮಕಿ ಜೋರಾಗಿರಲಿದೆ.
ಚೈತ್ರಾ ಕುಂದಾಪುರ vs ರಜತ್ ಕಿಶನ್ ವಾದ-ವಿವಾದದ ಒಂದು ಸುಳಿವನ್ನು ಬಿಗ್ ಬಾಸ್ ಒದಗಿಸಿದ್ದಾರೆ. ''ಮನೆಯ ಖಳನಾಯಕ ಕೊಟ್ಟ ಟಿಕೆಟ್ಗೆ ಉರುಳೋ ವಿಕೆಟ್ ಯಾವುದು?'' ಬಿಗ್ ಬಾಸ್ ಕನ್ನಡ ಸೀಸನ್ 11, ಸೋಮ-ಶುಕ್ರ ರಾತ್ರಿ 9:30ಕ್ಕೆ ಪ್ರಸಾರ ಎಂಬ ಕ್ಯಾಪ್ಷನ್ ಅಡಿ ಅನಾವರಣಗೊಂಡಿರುವ ಪ್ರೋಮೋದಲ್ಲಿ ಚೈತ್ರಾ ಕುಂದಾಪುರ ಅವರನ್ನು ರಜತ್ "ಸುಳ್ಳಿ, ಸುಳ್ಳಿ" ಎಂದು ಕರೆದಿರೋದನ್ನು ಕಾಣಬಹುದು.
ಬ್ಲ್ಯಾಕ್ ಔಟ್ಫಿಟ್, ಕ್ಯಾಪ್ ಧರಿಸಿ ಥೇಟ್ ಖಳನಾಯಕನಾಗಿ ರಜತ್ ಕಿಶನ್ ಆಗಮನವಾಗಿದ್ದು, ತಮ್ಮ ಆಸನದ ಮೇಲೆ ಕುಳಿತಿದ್ದಾರೆ. ಮನೆಯ ಖಳನಾಯಕ ರಜತ್, ಫಿನಾಲೆ ತಲುಪಲು ಅರ್ಹತೆ ಇಲ್ಲದ ಐದು ಸದಸ್ಯರರಿಗೆ ಟಿಕೆಟ್ ಟು ಹೋಮ್ ಫಲಕಗಳನ್ನು ತೊಡಿಸಬೇಕು ಎಂದು ಬಿಗ್ ಬಾಸ್ ಸೂಚಿಸಿದ್ದಾರೆ. ಅದರಂತೆ ರಜತ್ ಐದು ಮಂದಿಗೆ ಈ ಫಲಕವನ್ನು ತೊಡಿಸಿದ್ದಾರೆ. ಅದರಲ್ಲಿ ಚೈತ್ರಾ ಕುಂದಾಪುರ ಕೂಡಾ ಓರ್ವರು.
ಇದನ್ನೂ ಓದಿ:ಧನರಾಜ್ ಆಚಾರ್ ಮನೆಗೆ ಗೋಲ್ಡ್ ಸುರೇಶ್ ಭೇಟಿ:ಮಾವನಾಗಿ ಕಂದಮ್ಮನಿಗೆ ತೊಟ್ಟಿಲು ಉಡುಗೊರೆ ಕೊಟ್ಟ ಮಾಜಿ ಸ್ಪರ್ಧಿ
ನಮ್ ಬಾಸ್ ಎಂದು ಮಾತು ಆರಂಭಿಸಿದ ರಜತ್, ಟಾಸ್ಕ್ ಅಲ್ಲಿ ಝೀರೋ. ಮಾತಾಡ್ಕೊಂಡೇ ಮನೆಗೋಗ್ರಿ. ಇಲ್ಲಿರೋರು ಆಡ್ಕೊಂಡ್ ಆದ್ರೂ ಗೆಲ್ಲಲಿ ಎಂದು ತಿಳಿಸಿದ್ದಾರೆ. ಅವರ ಮಾತಿಗೆ ತಿರುಗಿಸಿ ಕೊಟ್ಟ ಚೈತ್ರಾ, ಮೊದಲನೇ ದಿನ ಬಂದಿದ್ರೆ ಐದೇ ದಿನಕ್ಕೆ ಲಗೇಜ್ ಇಡ್ಕೊಂಡು ಹೋಗ್ತಿದ್ರು. 50 ದಿನ ಕಳ್ದ್ಮೇಲೆ ಬಂದಿದ್ದೀರಿ, ಅದೃಷ್ಟ ಮಾಡಿದ್ದೀರಿ ಎಂದಿದ್ದಾರೆ. ಇತ್ತ ರಜತ್ ಕೂಡಾ ಸುಮ್ಮನೆ ಕೂರಲಿಲ್ಲ. 50 ದಿನಗಳಾದ ಮೇಲೆ ನಾನು ಬಂದಿದ್ದಕ್ಕೆ ನೀವು ಅದೃಷ್ಟ ಮಾಡಿದ್ದೀರಿ. ಶುರುವಲ್ಲೇ ಬಂದಿದ್ರೆ ನಾಲ್ಕನೇ ವಾರಕ್ಕೇನೆ ಕಳ್ಸ್ ಬಿಡ್ತಿದ್ದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ತನ್ನೂರಿನ ಶಾಲೆಗೆ ಹೊಸ ರೂಪ ಕೊಟ್ಟ ಡಾಲಿ ಧನಂಜಯ್: ಮದುವೆ ಸಂದರ್ಭವನ್ನು ಸಾರ್ಥಕಗೊಳಿಸಿದ ನಟ
ನಂತರ ಮಾತನಾಡಿದ ಚೈತ್ರಾ, ನೀವ್ ಹೇಳ್ದಂಗೆ ಟಾಸ್ಕ್ ಆಡೋರ್ ಮಾತ್ರ ಬರ್ಬೇಕು ಅಲ್ವಾ ಅಂತಾ ಪ್ರಶ್ನಿಸಿದ್ದಾರೆ. ಇದರಿಂದ ಅಸಮಾಧಾನಗೊಂಡ ರಜತ್, ಟಾಸ್ಕ್ ಆಡೋರ್ ಮಾತ್ರ ಬರ್ಬೇಕು ಅಂತಾ ನಾನೆಲ್ಲೇಳ್ದೆ, ಸುಳ್ಳಿ ಎಂದು ಕಿರುಚಿದ್ದಾರೆ. ಯಾಕ್ ಅಫೆಂಡ್ ಆಗ್ತಿದ್ದೀರಾ ಎಂದು ಚೈತ್ರಾ ಪ್ರಶ್ನಿಸಿದ್ದಾರೆ. ಸುಳ್ಳಿ ನೀನ್ ಅದಕ್ಕೇನೆ ಎಂದು ರಜತ್ ಮತ್ತೆ ಮತ್ತೆ ತಿಳಿಸಿದ್ದಾರೆ. ನಿಜ ಮಾತಾಡು ಎಂದ ರಜತ್ ಚೈತ್ರಾ ವೇದಿಕೆಯಿಂದ ಹೊರಡುವಾಗ್ಲೂ ಸುಳ್ಳೀ ಸುಳ್ಳೀ ಎಂದು ತಿಳಿಸಿದ್ದಾರೆ. ಈ ಮಾತುಕತೆ ಕೇಳಿಸಿಕೊಂಡ ಇತರೆ ಕೆಲ ಸ್ಪರ್ಧಿಗಳು ನಗು ಬೀರಿದರು.