ಕರ್ನಾಟಕ

karnataka

ETV Bharat / entertainment

ಹಂಪಿ ಉತ್ಸವದಲ್ಲಿ ನೃತ್ಯ ಪ್ರದರ್ಶನ ನೀಡಲಿದ್ದಾರೆ 'ಪುಷ್ಪವತಿ' ನಿಮಿಕಾ ರತ್ನಾಕರ್ - Nimika Ratnakar

ಮೂರು ದಿನಗಳ ಹಂಪಿ ಉತ್ಸವಕ್ಕೆ ನಾಳೆ ಚಾಲನೆ ಸಿಗಲಿದೆ. 'ಶೇಕ್‌ ಇಟ್ ಪುಷ್ಪವತಿ' ಖ್ಯಾತಿಯ ನಿಮಿಕಾ ರತ್ನಾಕರ್ ನೃತ್ಯ ಪ್ರದರ್ಶನ ನೀಡಲಿದ್ದಾರೆ.

Nimika Ratnakar will perform at Hampi Utsava
ಹಂಪಿ ಉತ್ಸವದಲ್ಲಿ ನೃತ್ಯ ಪ್ರದರ್ಶನ ನೀಡಲಿದ್ದಾರೆ ನಿಮಿಕಾ ರತ್ನಾಕರ್

By ETV Bharat Karnataka Team

Published : Feb 3, 2024, 3:22 PM IST

ಕನ್ನಡ ಚಿತ್ರರಂಗದಲ್ಲಿ 'ಪುಷ್ಪವತಿ' ಎಂದೇ ಗುರುತಿಸಿಕೊಳ್ಳುವ ನಟಿ ನಿಮಿಕಾ ರತ್ನಾಕರ್. 'ಶೇಕ್‌ ಇಟ್ ಪುಷ್ಪವತಿ' ಹಾಡು ಇಂದಿಗೂ ಜನರನ್ನು ಹುಚ್ಚೆದ್ದು ಕುಣಿಯುವಂತೆ ಮಾಡುತ್ತದೆ. ಸದ್ಯ ಸ್ಯಾಂಡಲ್​ವುಡ್​ನಲ್ಲಿ ಬ್ಯುಸಿಯಾಗಿರೋ ನಿಮಿಕಾ ರತ್ನಾಕರ್ ಅವರು ಹಂಪಿ ಉತ್ಸವದಲ್ಲಿ ಮಿಂಚಲು ರೆಡಿಯಾಗಿದ್ದಾರೆ.

ಹೌದು, ವಿಜಯನಗರ ಸಾಮ್ರಾಜ್ಯದ ಗತವೈಭವವನ್ನು ಸ್ಮರಿಸಿಕೊಳ್ಳುವ ಈ ವರ್ಷದ ಹಂಪಿ ಉತ್ಸವಕ್ಕೆ ರಾಜ್ಯ ಸರ್ಕಾರ ಮುಹೂರ್ತ ನಿಗದಿ ಮಾಡಿದೆ. ನಾಳೆ (ಫೆ. 4)ಯಿಂದ ಮೂರು ದಿನಗಳ ಹಂಪಿ ಉತ್ಸವಕ್ಕೆ ಚಾಲನೆ ಸಿಗಲಿದೆ. ನಾನಾ ಪ್ರಕಾರಗಳ ಕಲಾ ಪ್ರದರ್ಶನ, ಕಾರ್ಯಕ್ರಮಗಳು ಈ ಉತ್ಸವದ ಪ್ರಧಾನ ಆಕರ್ಷಣೆಯಾಗಿರಲಿವೆ. ಇಷ್ಟೂ ವರ್ಷಗಳಲ್ಲಿ, ಕನ್ನಡ ಚಿತ್ರರಂಗದ ಅನೇಕ ನಟ ನಟಿಯರು ಈ ಉತ್ಸವದಲ್ಲಿ ಭಾಗಿಯಾಗಿ ಮೆರುಗು ನೀಡಿದ್ದಾರೆ. ಈ ಬಾರಿ ಅಂಥಾದ್ದೊಂದು ಸುವರ್ಣಾವಕಾಶ 'ಶೇಕ್ ಇಟ್ ಪುಷ್ಪವತಿ' ಖ್ಯಾತಿಯ ನಿಮಿಕಾ ರತ್ನಾಕರ್ ಅವರಿಗೆ ಲಭಿಸಿದೆ.

'ಪುಷ್ಪವತಿ' ನಿಮಿಕಾ ರತ್ನಾಕರ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಶೇಕ್ ಇಟ್ ಪುಷ್ಪವತಿ ಎಂಬ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಪ್ರಸಿದ್ಧಿ ಪಡೆದುಕೊಂಡಿರುವವರು ನಿಮಿಕಾ ರತ್ನಾಕರ್. ವಿಶೇಷವೆಂದರೆ, ಈ ಹಾಡೇ ಅವರನ್ನು ಹಂಪಿ ಉತ್ಸವದಲ್ಲಿ ಭಾಗಿಯಾಗಿ ನೃತ್ಯ ಪ್ರದರ್ಶನ ನೀಡುವ ಅವಕಾಶ ಕಲ್ಪಿಸಿದೆ. ಈಗಾಗಲೇ ಅದಕ್ಕೆ ಬೇಕಾದ ತಯಾರಿಗಳನ್ನು ಮಾಡಿಕೊಂಡಿರುವ ನಿಮಿಕಾ, ಆ ಕ್ಷಣಕ್ಕಾಗಿ ಕಾಯುತ್ತಿದ್ದಾರೆ.

ಇದನ್ನೂ ಓದಿ:'I am alive': ನಾನು ಜೀವಂತವಾಗಿದ್ದೇನೆಂದು ಹೇಳಿಕೊಂಡ ನಟಿ ಪೂನಂ ಪಾಂಡೆ

ಹಂಪಿ ಎಂದರೇನೇ ಅದೇನೋ ಆಕರ್ಷಣೆ. ನಿಮಿಕಾ ರತ್ನಾಕರ್ ಪಾಲಿಗೂ ಅಂಥಾದ್ದೊಂದು ಸೆಳೆತವಿದೆಯಂತೆ. ಆದರೆ ಈವರೆಗೆ ಅಲ್ಲಿಗೆ ಭೇಟಿ ಕೊಡುವ ಅವಕಾಶ ಕೂಡಿ ಬಂದಿರಲಿಲ್ಲ. ಕೆಲ ಹಾಡುಗಳ ಮೂಲಕವಷ್ಟೇ ಹಂಪಿಯನ್ನು ಕಣ್ತುಂಬಿಕೊಂಡಿದ್ದ ತಮ್ಮ ಪಾಲಿಗೆ ಆ ಪರಿಸರದಲ್ಲಿ ಬೆರೆಯುವ ಅವಕಾಶ ಸಿಕ್ಕಿದ್ದು ಖುಷಿ ಕೊಟ್ಟಿದೆ ಎಂಬುದು ನಿಮಿಕಾ ಮನದ ಮಾತು. ಈ ಹಿಂದೆ ನಿಮಿಕಾ ದಸರಾ ಉತ್ಸವದಲ್ಲಿಯೂ ಭಾಗಿಯಾಗಿದ್ದರು. ಆ ಸಂದರ್ಭದಲ್ಲಿ ಅವರ ಪೋಷಕರು ಹಾಜರಿದ್ದು ಬಹಳ ಸಂತಸ ವ್ಯಕ್ತಪಡಿಸಿದ್ದರು. ಈ ಬಾರಿಯೂ ಪೋಷಕರೊಂದಿಗೆ ಹಂಪಿ ಉತ್ಸವದಲ್ಲಿ ಭಾಗಿಯಾಗುವ ಇಂಗಿತ ನಿಮಿಕಾ ಅವರದ್ದಾಗಿದೆ.

ಹಂಪಿ ಉತ್ಸವದಲ್ಲಿ ನೃತ್ಯ ಪ್ರದರ್ಶನ ನೀಡಲಿದ್ದಾರೆ ನಿಮಿಕಾ ರತ್ನಾಕರ್

ಇದನ್ನೂ ಓದಿ:'ಕೆರೆಬೇಟೆ'ಯ 'ಮಲೆನಾಡ ಗೊಂಬೆ' ಹಾಡಿಗೆ ಮನಸೋತ ರಿಯಲ್ ಸ್ಟಾರ್ ಉಪ್ಪಿ

ಅಷ್ಟಕ್ಕೂ ಶೇಕ್ ಇಟ್ ಪುಷ್ಪವತಿ ಎಂಬ ಹಾಡು ನಿಮಿಕಾಗೆ ಒಂದಿಡೀ ಕರ್ನಾಟಕಕ್ಕೆ ಪ್ರದಕ್ಷಿಣೆ ಹಾಕುವ ಅವಕಾಶ ಕಲ್ಪಿಸುತ್ತಿದೆ. ಈಗಾಗಲೇ ಅವರು ರಾಜ್ಯದ ನಾನಾ ಪ್ರದೇಶಗಳಲ್ಲಿ ಈ ನೃತ್ಯ ಪ್ರದರ್ಶನ ನೀಡಿದ್ದಾರೆ. ಇದೀಗ ಹಂಪಿ ಉತ್ಸವದಲ್ಲಿ ಪಾಲ್ಗೊಳ್ಳುತ್ತಿರೋದು ಅವರ ಪಾಲಿಗೆ ವಿಶೇಷ ಘಳಿಗೆ. ಯಾಕೆಂದರೆ, ಉತ್ತರ ಕರ್ನಾಟಕದ ಮಂದಿಯ ಪ್ರೀತಿ, ಅಭಿಮಾನ ಪಡೆದುಕೊಂಡಿರುವ ಅವರಿಗೆ, ಅಭಿಮಾನಿಗಳ ಸಮ್ಮುಖದಲ್ಲಿ ನೃತ್ಯ ಪ್ರದರ್ಶನ ನೀಡುವ ಸುಯೋಗ ಕೂಡಿಬಂದಿದೆ. ಇದು ನಟಿಯ ಅಭಿಮಾನಿಗಲ್ಲೂ ಖುಷಿ ತಂದಿದೆ.

ABOUT THE AUTHOR

...view details