ಕರ್ನಾಟಕ

karnataka

ETV Bharat / entertainment

ಶ್ರೀಮುರಳಿ ಬರ್ತಡೇಗೆ ಮತ್ತೊಂದು ಸಿನಿಮಾ ಅನೌನ್ಸ್​: 'ಪರಾಕ್' ಬಿಡುಗಡೆ ದಿನಾಂಕವೂ ರಿವೀಲ್​ - SRIMURALI PARAAK MOVIE

ರೋರಿಂಗ್​​ ಸ್ಟಾರ್ ಖ್ಯಾತಿಯ ಶ್ರೀಮುರಳಿ ಜನ್ಮದಿನಕ್ಕೆ 'ಪರಾಕ್' ಶೀರ್ಷಿಕೆಯ ಹೊಸ ಸಿನಿಮಾ ಘೋಷಣೆಯಾಗಿದೆ.

Srimurali Paraak movie
ಶ್ರೀಮುರಳಿ ಜನ್ಮದಿನಕ್ಕೆ 'ಪರಾಕ್' ಸಿನಿಮಾ ಘೋಷಣೆ (Photo: Film Poster, ETV Bharat)

By ETV Bharat Entertainment Team

Published : Dec 17, 2024, 3:52 PM IST

ಸ್ಯಾಂಡಲ್​ವುಡ್​ನ ರೋರಿಂಗ್​​ ಸ್ಟಾರ್ ಖ್ಯಾತಿಯ ಶ್ರೀಮುರಳಿ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಜನ್ಮದಿನದ ವಿಶೇಷವಾಗಿ ಬರ್ತ್​ಡೇ ಬಾಯ್​​​ನ ಮುಂದಿನ ಸಿನಿಮಾಗಳು ಅನೌನ್ಸ್​ ಆಗಿವೆ. ತೆಲುಗಿನ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆಯೊಂದಿಗೆ ಕೈಜೋಡಿಸಿದ್ದು ಒಂದು ಸಿನಿಮಾವಾದ್ರೆ, 'ಪರಾಕ್' ಮತ್ತೊಂದು ಚಿತ್ರ.

ಕನ್ನಡ ಚಿತ್ರರಂಗದ ಬಹುಬೇಡಿಕೆ ನಟನಾಗಿ ತಮ್ಮದೇ ಆದ ಛಾಪು ಮೂಡಿಸಿರುವ ಶ್ರೀಮುರಳಿ ಅವರು ಇಂದು 43ನೇ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ಜನಪ್ರಿಯ ತಾರೆಗೆ ಕುಟುಂಬಸ್ಥರು, ಆಪ್ತರು, ಚಿತ್ರರಂಗದವರೂ ಸೇರಿ ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ. ಅಭಿಮಾನಿಗಳಿಗೆ ನಟನ ಕಡೆಯಿಂದ ಅವರ ಮುಂದಿನ ಚಿತ್ರಗಳು ಘೋಷಣೆಯಾಗಿವೆ.

ಅಕ್ಟೋಬರ್​​ ಕೊನೆಗೆ ತೆರೆಕಂಡ 'ಬಘೀರ' ನಿರೀಕ್ಷೆಯಂತೆ ಅಭೂತಪೂರ್ವ ಯಶಸ್ಸು ಕಂಡಿದೆ. ಎರಡೂವರೆ ವರ್ಷಗಳ ಗ್ಯಾಪ್​​ ಬಳಿಕ ಬಂದ ರೋರಿಂಗ್ ಸ್ಟಾರ್​ನ ಚಿತ್ರವಿದು. ಬಘೀರನ ಬಳಿಕ ಶ್ರೀಮುರಳಿ ಯಾವ ಸಿನಿಮಾ ಕೈಗೆತ್ತಿಕೊಳ್ಳುತ್ತಾರೆ ಅನ್ನೋ ಕುತೂಹಲ ಅಭಿಮಾನಿಗಳ ಬಳಗದಲ್ಲಿತ್ತು. ಫೈನಲಿ ಇಂದು ಉತ್ತರ ಸಿಕ್ಕಿದೆ. ಎರಡು ಹೊಸ ಸಿನಿಮಾಗಳು ಅಧಿಕೃತವಾಗಿ ಘೋಷಣೆಯಾಗಿವೆ.

'ಪರಾಕ್' ಎಂಬ ಶೀರ್ಷಿಕೆಯ ಹೊಸ ಚಿತ್ರ ಅನೌನ್ಸ್​​ ಆಗಿದೆ. ಅಲ್ಲದೇ ಬಿಡುಗಡೆ ದಿನಾಂಕ ಕೂಡಾ ರಿವೀಲ್​ ಆಗಿದೆ. ಪೋಸ್ಟರ್​ನಲ್ಲಿ ಒಂದು ಕೈಯಲ್ಲಿ ಗನ್ ಹಿಡಿದಿದ್ದಾರೆ, ಬೆನ್ನು ತೋರಿಸಿರುವ ಚಿತ್ರದಲ್ಲಿ ನಟ ಬೆನ್ನಿಗೆ ರೈಫಲ್​ ಹಾಕಿ ಕಾಣಿಸಿಕೊಂಡಿದ್ದಾರೆ. 2025ರ ಡಿಸೆಂಬರ್​ನಲ್ಲಿ ಸಿನಿಮಾ ತೆರೆಗಪ್ಪಳಿಸಲಿದೆ.

ನಿರ್ದೇಶಕ ಹಾಲೇಶ್ ಕೋಗುಂಡಿ ರೋರಿಂಗ್​ ಸ್ಟಾರ್​ಗೆ ಆ್ಯಕ್ಷನ್​ ಕಟ್​​ ಹೇಳುತ್ತಿದ್ದಾರೆ. ಒಂದಷ್ಟು ಕಿರು ಚಿತ್ರಗಳನ್ನು ನಿರ್ದೇಶಿಸಿರುವ ಅನುಭವ ಹೊಂದಿರುವ ಹಾಲೇಶ್, ಪರಾಕ್ ಸಿನಿಮಾ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ.

ಇದನ್ನೂ ಓದಿ:ಚಂದನ್‌ ಶೆಟ್ಟಿ-ನಿವೇದಿತಾ ಗೌಡ TO ರೆಹಮಾನ್​​​, ಧನುಷ್​: 2024ರಲ್ಲಿ ಅಭಿಮಾನಿಗಳಿಗೆ ಶಾಕ್ ಕೊಟ್ಟ ಸೆಲೆಬ್ರಿಟಿಗಳ ಡಿವೋರ್ಸ್ ಲಿಸ್ಟ್

ಮಾರ್ಚ್​​ನಲ್ಲಿ ಶೂಟಿಂಗ್ ಶುರುವಾಗಲಿದೆ. ಬಿಗ್​ ಬಜೆಟ್, ಬಿಗ್ ಸ್ಟಾರ್​ ಕಾಸ್ಟ್​ನ ಸಿನಿಮಾ ಬ್ರ್ಯಾಂಡ್ ಸ್ಟುಡಿಯೋಸ್ ಬ್ಯಾನರ್ ಅಡಿ ನಿರ್ಮಾಣಗೊಳ್ಳುತ್ತಿದೆ. ಸಿನಿಮಾ ಮುಂದಿನ ಡಿಸೆಂಬರ್​ಗೆ ಚಿತ್ರಮಂದಿರ ಪ್ರವೇಶಿಸಲಿದೆ.

ಮತ್ತೊಂದು ಹೊಸ ಸಿನಿಮಾ:ಟಾಲಿವುಡ್​ನ ಜನಪ್ರಿಯ ಸಿನಿಮಾ ಪ್ರೊಡಕ್ಷನ್​ ಹೌಸ್ ಪೀಪಲ್ ಮೀಡಿಯಾ ಫ್ಯಾಕ್ಟರಿ ಜತೆ ರೋರಿಂಗ್​​ ಸ್ಟಾರ್​ ಕೈ ಜೋಡಿಸಿದ್ದಾರೆ.​ ಶ್ರೀಮುರಳಿ ಜನ್ಮದಿನ ಹಿನ್ನೆಲೆ ಅಧಿಕೃತವಾಗಿ ಘೋಷಣೆಯಾದ ಸಿನಿಮಾಗಳಲ್ಲಿ ಇದೂ ಕೂಡಾ ಒಂದು. ಪೀಪಲ್ ಮೀಡಿಯಾ ಫ್ಯಾಕ್ಟರಿ ಮುಂದಿನ ದಿನಗಳಲ್ಲಿ ಸಿನಿಮಾ ಟೈಟಲ್​, ಡೈರೆಕ್ಟರ್, ಸ್ಟಾರ್ ಕಾಸ್ಟಿಂಗ್​​, ತಾಂತ್ರಿಕ ವರ್ಗವನ್ನು ಪರಿಚಯಿಸಲಿದೆ.

ಇದನ್ನೂ ಓದಿ:ಹುಸಿಯಾಯ್ತು ಅಭಿಮಾನಿಗಳ ನಿರೀಕ್ಷೆ! 2024ರಲ್ಲಿ ಸಿನಿಮಾ ಮಾಡದ ಸ್ಯಾಂಡಲ್​​ವುಡ್​ ಸೂಪರ್​​ಸ್ಟಾರ್​ಗಳಿವರು

ಇನ್ನು ಡಾ.ಸೂರಿ ನಿರ್ದೇಶನದ ಬಘೀರ ಸಿನಿಮಾ ಅಕ್ಟೋಬರ್​ 31ರಂದು ಅದ್ಧೂರಿಯಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ರುಕ್ಮಿಣಿ ವಸಂತ್ ಜೊತೆ ತೆರೆಹಂಚಿಕೊಂಡ ಶ್ರೀಮುರಳಿ ಅವರ ಈ ಸಿನಿಮಾ ಸೂಪರ್​ ಹಿಟ್​ ಆಗಿದೆ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಈ ಚಿತ್ರ ಶ್ರೀಮುರಳಿಗೆ ದೊಡ್ಡ ಯಶಸ್ಸು ತಂದುಕೊಟ್ಟಿದೆ. ನಟನ ಮುಂದಿನ ಸಿನಿಮಾಗಳ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ.

ABOUT THE AUTHOR

...view details