ಕೆಜಿಎಫ್ ಸ್ಟಾರ್ ಯಶ್ ಮುಖ್ಯಭೂಮಿಕೆಯ ಬಹುನಿರೀಕ್ಷಿತ ಚಿತ್ರ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್ ಅಪ್ಸ್' ಈಗಾಗಲೇ ಸಿನಿಪ್ರಿಯರಲ್ಲಿ ಸಾಕಷ್ಟು ಕುತೂಹಲ ಹುಟ್ಟುಹಾಕಿದೆ. ವಿಶೇಷವಾಗಿ ನಾಯಕಿ ಪಾತ್ರದ ಸಲುವಾಗಿ ಸಿನಿಮಾ ಸುದ್ದಿಯಲ್ಲಿದೆ. ಆರಂಭದಲ್ಲಿ, ಬಾಲಿವುಡ್ ಬೇಬೋ ಕರೀನಾ ಕಪೂರ್ ಖಾನ್ ಅವರು ಯಶ್ ಜೊತೆಗೆ ನಟಿಸುತ್ತಾರೆ ಎಂದು ಹೇಳಲಾಗಿತ್ತು. ಆದರೆ, ಇತ್ತೀಚಿನ ವರದಿಗಳು ಶೂಟಿಂಗ್ ಶೆಡ್ಯೂಲ್ನ ಡೇಟ್ಸ್ ಕೊರತೆಯಿಂದಾಗಿ ಸಿನಿಮಾವನ್ನು ಬಿಡಬೇಕಾಯಿತು ಎಂಬುದಾಗಿ ಸೂಚಿಸಿದೆ.
ಅಲ್ಲದೇ ಈ ಹಿಂದೆ ಕರೀನಾ ಕಪೂರ್ ಖಾನ್ಗೆ ಆಫರ್ ಮಾಡಲಾಗಿದ್ದ ಪಾತ್ರವನ್ನು ನಯನತಾರಾ ವಹಿಸಿಕೊಳ್ಳಬಹುದು ಎಂಬ ಗುಸುಗುಸು ಕೂಡ ಇದೆ. ನಿರ್ದೇಶಕಿ ಗೀತು ಮೋಹನ್‌ದಾಸ್ ಅವರು ನಯನತಾರ ಅವರೊಂದಿಗೆ ಚರ್ಚಿಸಿದ್ದಾರೆ ಎಂದು ವರದಿಗಳು ಸೂಚಿಸಿದೆ. ನಯನತಾರ ಚಿತ್ರಕಥೆ ಮತ್ತು ಅವರ ಪಾತ್ರದಿಂದ ಪ್ರಭಾವಿತರಾಗಿದ್ದಾರೆಂದು ಕೂಡ ಹೇಳಲಾಗಿದೆ. ಸಿನಿಮಾ ಸಂಬಂಧ ಈ ಮಾತುಕತೆಗಳು ಸುಸೂತ್ರವಾಗಿ ನಡೆದರೆ, ನಯನತಾರ ಶೀಘ್ರದಲ್ಲೇ ಚಿತ್ರತಂಡದ ಭಾಗವಾಗಬಹುದು.
ಕರೀನಾ ಅವರು ಇತರ ಪ್ರೊಜೆಕ್ಟ್ಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿರುವ ಹಿನ್ನೆಲೆ, ಶೂಟಿಂಗ್ ಡೇಟ್ಸ್ ಸಮಸ್ಯೆ ಕಾರಣವೆಂದು ಹೇಳಲಾಗಿದೆ. ಟಾಕ್ಸಿಕ್ ಒಡಹುಟ್ಟಿದವರ ಬಂಧವನ್ನು ಒಳಗಗೊಂಡ ಚಿತ್ರವೆಂದೂ ಹೇಳಲಾಗಿದೆ. ಹಾಗಾಗಿ, ನಿರ್ಮಾಪಕರು ಭಾರತದಾದ್ಯಂತ ವ್ಯಾಪಕ ಜನಪ್ರಿಯತೆ ಹೊಂದಿರುವ ನಟಿಯ ಹುಡುಕಾಟದಲ್ಲಿದ್ದಾರೆ. ಅದಾಗ್ಯೂ, ಈ ಕಾಸ್ಟಿಂಗ್ ಬದಲಾವಣೆಗಳ ಕುರಿತು ಇನ್ನೂ ಯಾವುದೇ ಅಧಿಕೃತ ದೃಢೀಕರಣವಿಲ್ಲ.