ಬಾಲಿವುಡ್ ತಾರೆಗಳಾದ ನಟ ರಣ್‌ವೀರ್ ಸಿಂಗ್ ಮತ್ತು ನಟಿ ಕೃತಿ ಸನೋನ್ ಪ್ರಸಿದ್ಧ ಆಧ್ಯಾತ್ಮಿಕ ತಾಣ ಉತ್ತರ ಪ್ರದೇಶದ ವಾರಣಾಸಿಯಲ್ಲಿ ಸುತ್ತಾಟ ನಡೆಸಿದ್ದಾರೆ. ಇದಕ್ಕೂ ಮುನ್ನ, ಖ್ಯಾತ ವಸ್ತ್ರವಿನ್ಯಾಸಕ ಮನೀಶ್ ಮಲ್ಹೋತ್ರಾ ಅವರ ಫ್ಯಾಷನ್ ಶೋನಲ್ಲಿ ಇಬ್ಬರು ಸ್ಟಾರ್ಗಳು ಬನಾರಸಿ ಬಟ್ಟೆ ಧರಿಸಿ ಮಿಂಚಿದ್ದರು. ಫ್ಯಾಷನ್ ಶೋ ಬಳಿಕ ವಿಶ್ವನಾಥ ದೇಗುಲಕ್ಕೆ ಭೇಟಿ ನೀಡಿ ದರ್ಶನ ಪಡೆದು, ಕಾಶಿಯ ವಿವಿಧ ತಾಣಗಳಲ್ಲಿ ಸುತ್ತಾಡಿದ್ದಾರೆ.
ಇದರ ಚಿತ್ರಗಳನ್ನು ಕೃತಿ ಸನೋನ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹಳದಿ ಬಣ್ಣದ ಉಡುಗೆಯಲ್ಲಿ ಕೃತಿ ಕಂಡುಬಂದರೆ, ರಣ್‌ವೀರ್ ಬಿಳಿ ಕುರ್ತಾ ಪೈಜಾಮ ಧರಿಸಿದ್ದರು. ಇವರ ಪ್ರಯಾಣಕ್ಕೆ ಮನೀಶ್ ಮಲ್ಹೋತ್ರಾ ಜೊತೆಯಾಗಿದ್ದರು. ಅವರು ಬಿಳಿ ಪೈಜಾಮ ಮತ್ತು ಗುಲಾಬಿ ಕುರ್ತಾದಲ್ಲಿ ಕಂಡುಬಂದಿದ್ದಾರೆ.