ಕಾರ್ತಿಕ್ ಆರ್ಯನ್, ಬಾಲಿವುಡ್ನ ಯಂಗ್ ಸೂಪರ್ ಸ್ಟಾರ್. ಒಂದರ ಹಿಂದೆ ಒಂದರಂತೆ ಹಿಟ್ ಚಿತ್ರಗಳನ್ನು ನೀಡುತ್ತಿರುವ ನಟ ಸದ್ಯ ತಮ್ಮ ಮುಂದಿನ ಬಹುನಿರೀಕ್ಷಿತ ಚಿತ್ರ 'ಚಂದು ಚಾಂಪಿಯನ್' ಸಲುವಾಗಿ ಸುದ್ದಿಯಲ್ಲಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಿನಿಮಾ ಪ್ರಮೋಶನ್ನ ವಿಡಿಯೋಗಳು ಸಖತ್ ಸದ್ದು ಮಾಡುತ್ತಿವೆ.
ಫ್ರೀಸ್ಟೈಲ್ ಸ್ವಿಮ್ಮಿಂಗ್‌ನಲ್ಲಿ ಭಾರತದ ಮೊದಲ ಪ್ಯಾರಾಲಿಂಪಿಕ್ ಗೋಲ್ಡ್ ಚಾಂಪಿಯನ್ ಮುರಳಿಕಾಂತ್ ಪೇಟ್ಕರ್ ಅವರ ಜೀವನವನ್ನು ಆಧರಿಸಿದ ಚಿತ್ರವಿದು. ಕಬೀರ್ ಖಾನ್ ಆ್ಯಕ್ಷನ್ ಕಟ್ ಹೇಳಿರುವ ಚಿತ್ರದಲ್ಲಿ ಕಾರ್ತಿಕ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಚಿತ್ರತಂಡದವರು ಈಗಾಗಲೇ ಸಿನಿಮಾದ ಪ್ರಚಾರ ಪ್ರಾರಂಭಿಸಿದ್ದಾರೆ. ಪ್ರಸ್ತುತ, ನಾಯಕ ನಟ ಕಾರ್ತಿಕ್ ಅವರು ಲಂಡನ್‌ನಲ್ಲಿ ತಮ್ಮ ಬಹುನಿರೀಕ್ಷಿತ ಚಿತ್ರದ ಪ್ರಚಾರ ಮಾಡುತ್ತಿದ್ದಾರೆ. ಸಾಗರೋತ್ತರ ಪ್ರದೇಶದಲ್ಲಿ ಭಾರತೀಯ ನಟನನ್ನು ಕಂಡ ಮಹಿಳಾ ಅಭಿಮಾನಿಯೋರ್ವರು ಭಾವುಕರಾಗಿದ್ದಾರೆ.
ಚಂದು ಚಾಂಪಿಯನ್ ಪ್ರಮೋಷನ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ. ಯುವ ಅಭಿಮಾನಿಯೋರ್ವರು ಕಾರ್ತಿಕ್ ಆರ್ಯನ್ ಬಳಿ ನಿಂತು ಅಳುತ್ತಿರುವುದನ್ನು, ಕಾರ್ತಿಕ್ ಬೆಚ್ಚನೆಯ ಅಪ್ಪುಗೆ ಮೂಲಕ ತಮ್ಮ ಅಭಿಮಾನಿಯನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತಿರುವುದನ್ನು ನೀವು ವಿಡಿಯೋದಲ್ಲಿ ನೋಡಬಹುದು. ನಟನೆ ನಡೆಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ.
ಕಾರ್ತಿಕ್ ಲಂಡನ್‌ನಿಂದ ತಮ್ಮ ಫೋಟೋ ವಿಡಿಯೋವನ್ನು ಸಹ ಹಂಚಿಕೊಂಡಿದ್ದಾರೆ. ಚಂದು ಚಾಂಪಿಯನ್‌ನ ಶೂಟಿಂಗ್ ಲಂಡನ್‌ನಲ್ಲಿಯೇ ಪ್ರಾರಂಭವಾಯಿತು ಎಂಬುದನ್ನು ತಿಳಿಸಿದ್ದಾರೆ. ವಿಡಿಯೋ ಹಂಚಿಕೊಂಡ ಕಾರ್ತಿಕ್, ಚಂದು ಚಾಂಪಿಯನ್‌ನ ಪ್ರಯಾಣ ಪ್ರಾರಂಭವಾದ ನಗರ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋದಲ್ಲಿ, ಕಾರ್ತಿಕ್ ಬ್ಲ್ಯಾಕ್ ಪ್ಯಾಂಟ್, ಲೈಟ್ ಪಿಂಕ್ ಶರ್ಟ್, ವೈಟ್ ಜಾಕೆಟ್ ಧರಿಸಿ ಡ್ಯಾಶಿಂಗ್ ಲುಕ್ ಕೊಟ್ಟಿದ್ದಾರೆ.