ನಾಗ್ ಅಶ್ವಿನ್ ನಿರ್ದೇಶನದ ಮೈಥೋಲಾಜಿಕಲ್ ಸೈನ್ಸ್ ಫಿಕ್ಷನ್ 'ಕಲ್ಕಿ 2898 ಎಡಿ' ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಪ್ರಭಾಸ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಚಿತ್ರ ಪ್ರೇಕ್ಷಕರ ಮನ ಗೆಲ್ಲುವುದರ ಜತೆಗೆ ಭಾರತೀಯ ಚಿತ್ರರಂಗದ ಪ್ರಮುಖರಿಂದಲೂ ಪ್ರಶಂಸೆ ಗಳಿಸುತ್ತಿದೆ. ಕಲ್ಕಿ 2898 ಎಡಿ ಈಗಾಗಲೇ ತನ್ನ 'ಚೊಚ್ಚಲ ಪ್ರಶಸ್ತಿ'ಯನ್ನು ಪಡೆದುಕೊಂಡಿದೆ. ಚಿತ್ರದ ನಿರ್ದೇಶಕ ನಾಗ್ ಅಶ್ವಿನ್ ಒಂದು ವಿಶೇಷ ಕ್ಷಣವನ್ನು ಇನ್ಸ್ಟಾಗ್ರಾಮ್ ಸ್ಟೋರೀಸ್ನಲ್ಲಿ ಹಂಚಿಕೊಂಡಿದ್ದಾರೆ.
ನಾಗ್ ಅಶ್ವಿನ್ ತಮ್ಮ ಇನ್ಸ್ಟಾಗ್ರಾಮ್ ಸ್ಟೋರೀಸ್ನಲ್ಲಿ ಡಾರ್ತ್ ವಾಡರ್ ಪ್ರತಿಮೆಯ ಚಿತ್ರವನ್ನು ಹಂಚಿಕೊಂಡಿದ್ದಾರೆ. ಇದು ಸೂಪರ್ ಹಿಟ್ 'ಸ್ಟಾರ್ ವಾರ್ಸ್'ನ ಖಳನಾಯಕ ಪಾತ್ರ (fictional character in the Star Wars franchise). ಡಾರ್ತ್ ವಾಡೆರ್ ಕೈಯಲ್ಲಿ ಸರ್ಫ್ಬೋರ್ಡ್ ಅನ್ನೂ ಕಾಣಬಹುದು. ಫೋಟೋದ ಜೊತೆಗೆ ನಾಗ್ ಅಶ್ವಿನ್, "ಕಲ್ಕಿಯ ಮೊದಲ ಪ್ರಶಸ್ತಿ, ಫ್ರಂ ಒನ್ ಆ್ಯಂಡ್ ಓನ್ಲಿ ರಾಣಾ ದಗ್ಗುಬಾಟಿ" ಎಂದು ಬರೆದುಕೊಂಡಿದ್ದಾರೆ.
ನಾಗ್ ಅಶ್ವಿನ್ ಅವರ ಸ್ಟೋರಿಯನ್ನು ಮರುಹಂಚಿಕೊಂಡ ನಟ ರಾಣಾ ದಗ್ಗುಬಾಟಿ, ಫೈಯರ್ ಎಮೋಜಿಗಳೊಂದಿಗೆ "ಇನ್ನೂ ಬರಲಿದೆ" ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ರಾಣಾ ಮತ್ತು ನಾಗ್ ತಮ್ಮ ಬಾಂಧವ್ಯವನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರದರ್ಶಿಸಿದ್ದಾರೆ. ಸೋಷಿಯಲ್ ಮೀಡಿಯಾ ಪೋಸ್ಟ್ಗಳು ಪರಸ್ಪರ ಗೌರವ, ಮೆಚ್ಚುಗೆ, ಬಾಂಧವ್ಯವನ್ನು ಒತ್ತಿ ಹೇಳಿವೆ.