ಕರ್ನಾಟಕ

karnataka

ETV Bharat / entertainment

ಕರಾವಳಿಯಲ್ಲಿ ಎರಡು ದಿನ ಸ್ಟಾರ್ ನಟರ ಪ್ರವಾಸ; ಕೊಲ್ಲೂರು ಮೂಕಾಂಬಿಕೆಗೆ ವಿಶೇಷ ಪೂಜೆ ಸಲ್ಲಿಸಿದ ಜೂ. ಎನ್​ಟಿಆರ್ - Jr NTR offered special pooja - JR NTR OFFERED SPECIAL POOJA

ಜೂನಿಯರ್ ಎನ್​ಟಿಆರ್ ಎರಡು ದಿನದಿಂದ ಕುಟುಂಬದ ಜೊತೆ ಉಡುಪಿಯಲ್ಲಿ ಟೆಂಪಲ್ ಟೂರ್​ನಲ್ಲಿದ್ದಾರೆ. ಇಂದು ಕೊಲ್ಲೂರು ಮೂಕಾಂಬಿಕೆ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಇವರೊಂದಿಗೆ ನಟ ರಿಷಬ್ ಶೆಟ್ಟಿ ಹಾಗೂ ನಿರ್ದೇಶಕ ಪ್ರಶಾಂತ್ ನೀಲ್ ಫ್ಯಾಮಿಲಿ ಜೊತೆಯಾಗಿದ್ದಾರೆ.

jr-ntr-offered-special-pooja-to-kollur-mookambika-today
ಕೊಲ್ಲೂರು ಮೂಕಾಂಬಿಕೆಗೆ ವಿಶೇಷ ಪೂಜೆ ಸಲ್ಲಿಸಿದ ಜೂ. ಎನ್​ಟಿಆರ್ (ETV Bharat)

By ETV Bharat Entertainment Team

Published : Sep 1, 2024, 7:24 PM IST

Updated : Sep 1, 2024, 8:24 PM IST

ಕೊಲ್ಲೂರು ಮೂಕಾಂಬಿಕೆಗೆ ವಿಶೇಷ ಪೂಜೆ ಸಲ್ಲಿಸಿದ ಜೂ. ಎನ್​ಟಿಆರ್ (ETV Bharat)

ಉಡುಪಿ :ಬಹುನಿರೀಕ್ಷಿತ ದೇವರ ಚಿತ್ರದ ರಿಲೀಸ್ ಬ್ಯುಸಿಯ ನಡುವೆ ಆರ್​ಆರ್​ಆರ್​ ಸ್ಟಾರ್​ ಜೂನಿಯರ್ ಎನ್​ಟಿಆರ್ ಎರಡು ದಿನದಿಂದ ಕುಟುಂಬದ ಜೊತೆ ಉಡುಪಿ ಜಿಲ್ಲೆಯಲ್ಲಿ ಟೆಂಪಲ್ ಟೂರ್ ಮುಂದುವರೆಸಿದ್ದಾರೆ. ಕೊಲ್ಲೂರಮ್ಮನ ದರ್ಶನ ಪಡೆದರು. ಸಿನಿ ಗೆಳೆಯರ ಜೊತೆ ಸುತ್ತಾಡಿ, ಮಾತುಕತೆ ನಡೆಸಿದ್ದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಇದರಿಂದಾಗಿ ಅಭಿಮಾನಿಗಳಲ್ಲಿ ಕೆಲ ಪ್ರಶ್ನೆಗಳನ್ನೂ ಹುಟ್ಟುಹಾಕಿದೆ.

ದೇವಸ್ಥಾನದಲ್ಲಿ ನಟ ರಿಷಬ್ ಶೆಟ್ಟಿ ಹಾಗೂ ಜೂ ಎನ್​ಟಿಆರ್ ಫ್ಯಾಮಿಲಿ (ETV Bharat)

ಟಾಲಿವುಡ್​ನ ಬಹು ಬೇಡಿಕೆಯ ನಟ, ನಂದಮೂರಿ ತಾರಕ ರಾಮ್/ ಜೂ. ಎನ್​ಟಿಆರ್ ಎರಡನೇ ದಿನ ಉಡುಪಿ ಪ್ರವಾಸ ಮಾಡಿದರು. ಪ್ರೈವೇಟ್ ಜೆಟ್​ನಲ್ಲಿ ಮಂಗಳೂರು ವಿಮಾನ ನಿಲ್ದಾಣ ಮೂಲಕ ಉಡುಪಿಗೆ ಆಗಮಿಸಿದ ಅವರು, ಕೃಷ್ಣಮಠಕ್ಕೆ ಬಂದು ಕುಂದಾಪುರದಲ್ಲಿ ಸ್ಟೇ ಆಗಿದ್ದರು.

ಅಮ್ಮನ 4 ದಶಕದ ಆಸೆ ಈಡೇರಿಸಿದ ಪುತ್ರ; ಜೂನಿಯರ್ ಕುಟುಂಬ ಭಾನುವಾರ ಕೊಲ್ಲೂರಿಗೆ ಭೇಟಿ ನೀಡಿತ್ತು. ಮಧ್ಯಾಹ್ನದ ವೇಳೆಗೆ ದೇಗುಲಕ್ಕೆ ಆಗಮಿಸಿದ ಜೂ. ಎನ್​ಟಿಆರ್ ಕುಟುಂಬಕ್ಕೆ ನಟ ರಿಷಬ್ ಶೆಟ್ಟಿ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಫ್ಯಾಮಿಲಿ ಜೊತೆಯಾಗಿದೆ. ತಾಯಿ ಶಾಲಿನಿ ನಂದಮೂರಿ ಅವರ ಹುಟ್ಟುಹಬ್ಬದ ಹಿನ್ನೆಲೆ ಮಗ ನಂದಮೂರಿ ತಾರಕ ರಾಮ್ ಉಡುಪಿಯ ಪ್ರಮುಖ ದೇಗುಲಗಳ ದರ್ಶನ ಮಾಡಿಸಿದ್ದಾರೆ. ಈ ಮೂಲಕ 4 ದಶಕಗಳ ಅಮ್ಮನ ಆಸೆಯನ್ನು ಈಡೇರಿಸಿದ್ದಾರೆ. ಗೆಳೆಯರಿಗೆ ಥ್ಯಾಂಕ್ಸ್​ ಹೇಳಿದ್ದಾರೆ.

ಪರಮ ಪೂಜ್ಯ ಪರ್ಯಾಯ ಶ್ರೀಗಳಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರೊಂದಿಗೆ ಜೂ. ಎನ್​ಟಿಆರ್​ (ETV Bharat)

ಜೂನಿಯರ್ ಎನ್​ಟಿಆರ್ ಎರಡು ದಿನ ಉಡುಪಿಯಲ್ಲಿ ಬಂದು ಉಳಿದುಕೊಂಡಿರುವ ಬಗ್ಗೆ ಸಾಕಷ್ಟು ಕುತೂಹಲಗಳು, ಪ್ರಶ್ನೆಗಳು ಕೇಳಿಬರುತ್ತಿವೆ. ತನ್ನ ತಾಯಿಯ 40 ವರ್ಷದ ಕನಸನ್ನ ಈಡೇರಿಸಲು, ಅಮ್ಮನ ಆಸೆಯನ್ನು ಪೂರೈಸಲು ದೇಗುಲಗಳಿಗೆ ತೆರಳುತ್ತಿದ್ದೇನೆ ಎಂದು ನಂದಮೂರಿ ತಾರಕ ರಾಮ್ ಹೇಳಿಕೊಂಡಿದ್ದಾರೆ. ಜೊತೆಗೆ ರಿಷಬ್, ನೀಲ್ ಲಾಫಿಂಗ್ ಬುದ್ಧನೂ ಕಾಣಿಸಿಕೊಂಡಿದ್ದಾರೆ.

ಕೃಷ್ಣಮಠಕ್ಕೆ ಆಗಮಿಸಿದ ನಟ ರಿಷಬ್ ಶೆಟ್ಟಿ ಹಾಗೂ ಜೂ. ಎನ್​ಟಿಆರ್ (ETV Bharat)

ಕಾಂತಾರ ಫ್ರಿಕ್ವೆಲ್​ನಲ್ಲಿ ಜೂನಿಯರ್ ಎನ್​ಟಿಆರ್ ಸ್ಕ್ರೀನ್ ಶೇರ್ ಮಾಡುತ್ತಾರಾ?, ಕಾಂತಾರ ಶೂಟಿಂಗ್ ಸ್ಪಾಟ್​ಗೆ ಹೋಗಿ ಸೆಟ್ ನೋಡಿಕೊಂಡ ಬಂದಿದ್ದಾರಾ? ಎಂಬ ಪ್ರಶ್ನೆಗಳು ಸಮುದ್ರದ ಗಾಳಿ ಜೊತೆ ತೇಲಾಡುತ್ತಿವೆ. ಈ ಪ್ರಶ್ನೆಗೆ ಸ್ವತಃ ತಾರಕ ಉತ್ತರ ಕೊಟ್ಟಿದ್ದಾರೆ. ಪ್ರಶ್ನೆಯನ್ನು ರಿಷಬ್ ಕಡೆಗೆ ತಳ್ಳಿಬಿಟ್ಟಿದ್ದಾರೆ. ಪ್ರವಾಸದ ನಡುವೆ ಆಂಧ್ರದ ಮೀಟೂ ಚರ್ಚೆ, ದರ್ಶನ್ ಕುರಿತಾದ ಪ್ರಶ್ನೆಗೆ ತಾರಕ ಮೌನವಾದರು. ಲಾಫಿಂಗ್ ಬುದ್ಧನಿಗೆ ಶುಭ ಹಾರೈಸಿ ಪಿಕ್ಚರ್ ನೋಡ್ತೇನೆ ಎಂದು ತಮ್ಮ ಖುಷಿಯ ಅಭಿಪ್ರಾಯ ವ್ಯಕ್ತಪಡಿಸಿದರು.

ಇದನ್ನೂ ಓದಿ :ಉಡುಪಿ ಶ್ರೀ ಕೃಷ್ಣನ ಸನ್ನಿಧಿಯಲ್ಲಿ ಜೂ.​ಎನ್​​ಟಿಆರ್; ಅಮ್ಮನ ಆಸೆ ಈಡೇರಿಸಿದ ಆರ್​ಆರ್​ಆರ್​ ಸ್ಟಾರ್​ - Jr NTR Visits Udupi Temple

Last Updated : Sep 1, 2024, 8:24 PM IST

ABOUT THE AUTHOR

...view details