ಹೈದರಾಬಾದ್: 'ಆರ್ಆರ್ಆರ್' ಸಿನಿಮಾ ಯಶಸ್ಸಿನ ಬಳಿಕ 'ದೇವರ: ಪಾರ್ಟ್ 1'ನಲ್ಲಿ ಜೂ.ಎನ್‌ಟಿಆರ್ ಕಾಣಿಸಿಕೊಳ್ಳುತ್ತಿದ್ದಾರೆ. ಬಹುನಿರೀಕ್ಷಿತ ಚಿತ್ರ 'ದೇವರ: ಪಾರ್ಟ್ 1'ಗೆ ಕೊರಟಾಲಾ ಶಿವ ನಿರ್ದೇಶಿಸಿದ್ದು ಬಾಲಿವುಡ್ ನಟಿ ಜಾಹ್ನವಿ ಕಪೂರ್ ಮತ್ತು ಸೈಫ್ ಆಲಿ ಖಾನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಈ ಚಿತ್ರದ ಹಿಂದಿ ಥಿಯೇಟರಿಕಲ್ ಹಕ್ಕು ಮಾರಾಟವಾಗಿದ್ದು, ಹುಬ್ಬೇರಿಸುವಂತೆ ಮಾಡಿದೆ.
ಕರಣ್ ಜೋಹರ್ ಅವರ ಧರ್ಮ ಮೂವೀಸ್ ಪ್ರಸ್ತುತಪಡಿಸುತ್ತಿರುವ 'ದೇವರ: ಭಾಗ 1'ರ ಹಿಂದಿ ಥಿಯೇಟರಿಕಲ್ ಹಕ್ಕನ್ನು ಎಎ ಫಿಲ್ಮ್ಸ್ ಪಡೆದುಕೊಂಡಿದೆ. ಈ ಥಿಯೇಟರಿಕಲ್ ಮಾರಾಟದ ಹಕ್ಕು 45 ಕೋಟಿ ರೂ.ಗೆ ಸೇಲ್ ಆಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಈ ಡೀಲ್ ಹಿಂದಿ ಭಾಷಿಕ ಪ್ರೇಕ್ಷಕರನ್ನು ಸೆಳೆಯುವಲ್ಲಿ ಸಹಾಯವಾಗಲಿದೆ ಎಂದು ಸಿನಿಮಾ ಪಂಡಿತರು ಹೇಳುತ್ತಿದ್ದಾರೆ. ಹಿಂದಿ ಸಿನಿಮಾ ಮಾರುಕಟ್ಟೆಯಲ್ಲಿ ಚಿತ್ರ 100 ಕೋಟಿ ರೂ ಗಳಿಕೆ ಮಾಡಿದ್ದಲ್ಲಿ ಜೂ.ಎನ್‌ಟಿಆರ್ ಮತ್ತು ಅವರ ತಂಡ ಕೂಡ ಈ ಗಳಿಕೆಯಲ್ಲಿ ಕೆಲವು ಪರ್ಸೆಂಟೇಜ್ ಹಣ ಪಡೆಯುವುದು ನಿಶ್ಚಿತ ಎನ್ನುತ್ತಿವೆ ಮೂಲಗಳು.