ಹೈದರಾಬಾದ್: ಸ್ಟಾರ್ ಜೂನಿಯರ್ ಎನ್ ಟಿಆರ್ - ಸೆನ್ಸೇಷನಲ್ ಡೈರೆಕ್ಟರ್ ಪ್ರಶಾಂತ್ ನೀಲ್ ಕಾಂಬಿನೇಷನ್ನಲ್ಲಿ 'ಎನ್‌ಟಿಆರ್ 31' (ವರ್ಕಿಂಗ್ ಟೈಟಲ್) ಸಿನಿಮಾ ತಯಾರಾಗುತ್ತಿದೆ. ಇವರಿಬ್ಬರ ಕಾಂಬಿನೇಷನ್ನಲ್ಲಿ ಸಿನಿಮಾ ಘೋಷಣೆಯಾಗಿ ಹಲವು ದಿನಗಳು ಕಳೆದರೂ ಯಾವುದೇ ಅಪ್ ಡೇಟ್ ಸಿಕ್ಕಿರಲಿಲ್ಲ. ಆದರೆ, ಸೋಮವಾರ (ಮೇ 20) ಎನ್‌ಟಿಆರ್ ಹುಟ್ಟುಹಬ್ಬದ ಸಂದರ್ಭದಲ್ಲಿ ಚಿತ್ರ ನಿರ್ಮಾಪಕರು ಸಖತ್ ಅಪ್‌ಡೇಟ್ ನೀಡಿದ್ದಾರೆ.
ಹೌದು, ಎನ್‌ಟಿಆರ್ 31 ಚಿತ್ರದ ಶೂಟಿಂಗ್ ಆಗಸ್ಟ್ 2024 ರಲ್ಲಿ ಪ್ರಾರಂಭವಾಗಲಿದೆ ಎಂದು ನಿರ್ಮಾಣ ಸಂಸ್ಥೆ Mythri Moviemakers ಅಧಿಕೃತವಾಗಿ ಘೋಷಿಸಿದೆ. ತಾರಕ್ ಅವರಿಗೆ ಜನ್ಮದಿನದ ಶುಭಾಶಯಗಳು, ಆಗಸ್ಟ್ 2024 ರಲ್ಲಿ ಶೂಟಿಂಗ್ ಪ್ರಾರಂಭವಾಗಲಿದೆ. ಪವರ್ ಹೌಸ್ ಯೋಜನೆಗೆ ಸಿದ್ಧರಾಗಿ' ಎಂದು ಟ್ವಿಟರ್ನಲ್ಲಿ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಆದರೆ, ಈ ಸಿನಿಮಾದ ಶೀರ್ಷಿಕೆ ಇನ್ನೂ ಅಂತಿಮಗೊಂಡಿಲ್ಲ.
ಎನ್‌ಟಿಆರ್ ಸದ್ಯ ದೇವರ ಪಾರ್ಟ್ 1 ಮತ್ತು ವಾರ್ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಟಾಲಿವುಡ್ ಸ್ಟಾರ್ ಡೈರೆಕ್ಟರ್ ಕೊರಟಾಲ ಶಿವ ದೇವರ ಚಿತ್ರವನ್ನು ಎರಡು ಭಾಗಗಳಲ್ಲಿ ತಯಾರಿಸುತ್ತಿದ್ದಾರೆ. ಎನ್‌ಟಿಆರ್ ಹುಟ್ಟುಹಬ್ಬದ ಒಂದು ದಿನ ಮುಂಚಿತವಾಗಿ ಈ ಚಿತ್ರದ ಹಾಡು ಬಿಡುಗಡೆ ಮಾಡಲಾಗಿದೆ. ‘ಫಿಯರ್ ಸಾಂಗ್’ ಎಂಬ ಹೆಸರಿನೊಂದಿಗೆ ಬಿಡುಗಡೆಯಾಗಿರುವ ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಹಾಡು ತೆಲುಗು, ತಮಿಳು, ಮಲಯಾಳಂ, ಕನ್ನಡ ಮತ್ತು ಹಿಂದಿ ಸೇರಿ ಐದು ಭಾಷೆಗಳಲ್ಲಿ ಬಿಡುಗಡೆಯಾಗಿದೆ.