ಕರ್ನಾಟಕ

karnataka

ETV Bharat / entertainment

ಖುಷಿ ರವಿ ನೆನಪಿಸಿಕೊಂಡ ತಕ್ಷಣ ಯಾವ ಖಾದ್ಯ ನೆನಪಾಗುತ್ತದೆ? 'ಫುಲ್ ಮೀಲ್ಸ್' ಸ್ಪೆಷಲ್​ ವಿಡಿಯೋ - ಲಿಖಿತ್ ಶೆಟ್ಟಿ

'ಖುಷಿ ರವಿ ಅವರನ್ನು ನೆನಪಿಸಿಕೊಂಡ ತಕ್ಷಣ ಯಾವ ಖಾದ್ಯ ನೆನಪಾಗುತ್ತದೆ? ಯಾಕೆ?' ಎಂಬ ವಿಭಿನ್ನ ಪ್ರಶ್ನೆಗೆ 'ಫುಲ್ ಮೀಲ್ಸ್' ಚಿತ್ರತಂಡ ಉತ್ತರಿಸಿದ್ದು, ಸ್ಪೆಷಲ್​ ವಿಡಿಯೋ ಹಂಚಿಕೊಂಡಿದೆ.

khushi ravi
ಫುಲ್ ಮೀಲ್ಸ್ ಚಿತ್ರತಂಡ

By ETV Bharat Karnataka Team

Published : Jan 25, 2024, 12:55 PM IST

'ದಿಯಾ' ಅಪಾರ ಸಂಖ್ಯೆಯ ಸಿನಿಪ್ರಿಯರನ್ನು ಮೆಚ್ಚಿಸಿದ ಕನ್ನಡದ ಸೂಪರ್ ಹಿಟ್​​ ಸಿನಿಮಾ. ವಿಭಿನ್ನ ಪ್ರೇಮಕಥೆಯೊಂದಿಗೆ ತೆರೆಗೆ ಬಂದ ಈ ಚಿತ್ರ ಹೆಚ್ಚಿನ ಪ್ರೇಕ್ಷಕರನ್ನು ಆಕರ್ಷಿಸುವಲ್ಲಿ ಯಶ ಕಂಡಿತು. ಈ ಚಿತ್ರ ಮೂಲಕ ಮನೆಮಾತಾದ ಖುಷಿ ರವಿ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 'ಫುಲ್ ಮೀಲ್ಸ್' ನಟಿಯ ಮುಂಬರುವ ಬಹುನಿರೀಕ್ಷಿತ ಚಿತ್ರಗಳಲ್ಲೊಂದು.

ಖುಷಿ ರವಿ ಜನ್ಮದಿನ: ಖುಷಿ ರವಿ ಹಾಗೂ ಲಿಖಿತ್ ಶೆಟ್ಟಿ ಮುಖ್ಯಭೂಮಿಕೆಯ ಬಹುನಿರೀಕ್ಷಿತ ಸಿನಿಮಾ 'ಫುಲ್ ಮೀಲ್ಸ್'. ಸಂಕಷ್ಟಕರ ಗಣಪತಿ, ಫ್ಯಾಮಿಲಿ ಪ್ಯಾಕ್‌ನಂತಹ ಸಿನಿಮಾಗಳಿಂದ ಕನ್ನಡ ಚಿತ್ರರಂಗದಲ್ಲಿ ತನ್ನದೇ ಐಡೆಂಟಿಟಿ ಕ್ರಿಯೇಟ್ ಮಾಡಿಕೊಳ್ಳುತ್ತಿರುವ ಲಿಖಿತ್ ಶೆಟ್ಟಿ ಅವರೀಗ ದಿಯಾ ಚೆಲುವೆಯೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಮಂಗಳವಾರದಂದು ಖುಷಿ ರವಿ ತಮ್ಮ 31ನೇ ಜನ್ಮದಿನ ಆಚರಿಸಿಕೊಂಡರು. ಹುಟ್ಟುಹಬ್ಬದ ಅಂಗವಾಗಿ ಚಿತ್ರತಂಡ ಬರ್ತ್ ಡೇ ಪೋಸ್ಟರ್ ಅನಾವರಣಗೊಳಿಸಿತ್ತು. ಜೊತೆಗೆ, ಸ್ಪೆಷಲ್​ ವಿಡಿಯೋ ಕೂಡ ಬಿಡುಗಡೆ ಮಾಡೋ ಮುಖೇನ ನಾಯಕ ನಟಿಗೆ ಚಿತ್ರತಂಡ ಸ್ಪೆಷಲ್ ಗಿಫ್ಟ್ ಕೊಟ್ಟಿದೆ.

'ಫುಲ್ ಮೀಲ್ಸ್' ಸ್ಪೆಷಲ್​ ವಿಡಿಯೋ: ಇತ್ತೀಚೆಗಷ್ಟೇ 'ಫುಲ್ ಮೀಲ್ಸ್' ಚಿತ್ರೀಕರಣ ಪೂರ್ಣಗೊಂಡಿದ್ದು, ಚಿತ್ರತಂಡ ಕುಂಬಳಕಾಯಿ ಶಾಸ್ತ್ರ ಮುಗಿಸಿದೆ. ಚಿತ್ರೀಕರಣದ ಕೊನೆಯ ದಿನ, 'ಖುಷಿ ರವಿ ಅವರನ್ನು ನೆನಪಿಸಿಕೊಂಡ ತಕ್ಷಣ ಯಾವ ಖಾದ್ಯ ನೆನಪಾಗುತ್ತದೆ? ಯಾಕೆ?' ಎಂಬ ವಿಭಿನ್ನ ಪ್ರಶ್ನೆಗೆ ಉತ್ತರಿಸಿ ಎಂದು ಚಿತ್ರತಂಡದವರಲ್ಲಿ ಕೇಳಲಾಗಿದೆ. ಈ ವಿಡಿಯೋವನ್ನು ಖುಷಿ ರವಿ ಅವರಿಗೆ ಉಡುಗೊರೆಯಾಗಿ ಚಿತ್ರತಂಡ ನೀಡಿದೆ. ಮತ್ತೋರ್ವ ನಾಯಕಿ ತೇಜಸ್ವಿನಿ ಶರ್ಮಾ ಈ ವಿಡಿಯೋದ ರೂವಾರಿಯಾಗಿದ್ದು, ತಮ್ಮ ಸಹನಟಿ ಮತ್ತು ಸ್ನೇಹಿತೆಯ ಹುಟ್ಟುಹಬ್ಬಕ್ಕೆ ವಿಶೇಷ ಉಡುಗೊರೆ ನೀಡಿದ್ದಾರೆ.

ಈ ವಿಭಿನ್ನ ಪ್ರಶ್ನೆಗೆ ಉತ್ತರಿಸಿದ ಚಿತ್ರತಂಡದವರು ಹೆಚ್ಚಾಗಿ ಸಿಹಿ ತಿಂಡಿಗಳ ಹೆಸರುಗಳನ್ನೇ ಹೇಳಿದ್ದಾರೆ. ಖುಷಿ ರವಿ ಮನಸ್ಸು ನಿಷ್ಕಲ್ಮಶ, ಮೃದು ಎಂದಿದ್ದಾರೆ. ಅಂತಿಮವಾಗಿ ಈ ಪ್ರಶ್ನೆಗೆ ಉತ್ತರಿಸಿದ ಖುಷಿ ರವಿ ಬಿರಿಯಾನಿ ಎಂದು ತಿಳಿಸಿದ್ದಾರೆ.

ವೆಡ್ಡಿಂಗ್ ಫೋಟೋಗ್ರಾಫರ್ ಸುತ್ತ ಸುತ್ತುವ ಕಥಾಹಂದರ ಹೊಂದಿರುವ 'ಫುಲ್ ಮೀಲ್ಸ್'ನಲ್ಲಿ ಖುಷಿ ರವಿ 'ಪೂಜಾ' ಹೆಸರಿನ ಪಾತ್ರ ನಿರ್ವಹಿಸುತ್ತಿದ್ದಾರೆ. ಈವರೆಗಿನ ಅವರ ಎಲ್ಲಾ ಪಾತ್ರಗಳಿಗಿಂತ ವಿಭಿನ್ನ ರೀತಿಯ ಪಾತ್ರ ಇದಾಗಿದ್ದು, ವೀಕ್ಷಕರು ಪಾತ್ರವನ್ನು ಖಂಡಿತ ಇಷ್ಟಪಡುತ್ತಾರೆಂಬ ವಿಶ್ವಾಸದಲ್ಲಿದ್ದಾರೆ.

ಇದನ್ನೂ ಓದಿ:'S/O ಮುತ್ತಣ್ಣ' ಪ್ರಣಂ ದೇವರಾಜ್​​ಗೆ ಸಿಕ್ಕಳು ಖುಷಿ ರವಿ: 'ದಿಯಾ' ನಟಿಗೆ ಸ್ಪೆಷಲ್​​ ಬರ್ತ್​​ಡೇ ಗಿಫ್ಟ್​​

ಯುವ ಪ್ರತಿಭೆ ಎನ್.ವಿನಾಯಕ ಇದೇ ಮೊದಲ ಬಾರಿಗೆ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಹರೀಶ್ ಗೌಡ ಸಂಭಾಷಣೆ ಬರೆದಿದ್ದಾರೆ. ಮನೋಹರ್ ಜೋಷಿ ಛಾಯಾಗ್ರಹಣ, ಗುರು ಕಿರಣ್ ಸಂಗೀತ, ದೀಪು ಎಸ್.ಕುಮಾರ್ ಸಂಕಲನ ನಿರ್ವಹಿಸಿದ್ದಾರೆ.

ಇದನ್ನೂ ಓದಿ:ಬಿಗ್‌ ಬಾಸ್ ಮನೆಯಲ್ಲಿ ರೇಡಿಯೋ ಸ್ಟೇಷನ್; ಯಾರು 'ಬೆಸ್ಟ್ ಜಾಕಿ'?

ತಾರಾಗಣದಲ್ಲಿ ರಂಗಾಯಣ ರಘು, ವಿಜಯ್ ಚಂಡೂರ್, ರವಿ ಶಂಕರ್ ಗೌಡ, ರಾಜೇಶ್ ನಟರಂಗ, ಸುಜಯ್ ಶಾಸ್ತ್ರಿ, ಚಂದ್ರಕಲಾ ಮೋಹನ್, ಸೂರಜ್ ಲೋಕ್ರೆ, ಹೂನ್ನವಳ್ಳಿ ಕೃಷ್ಣ, ರಮೇಶ್ ಪಂಡಿತ್, ನಾಗೇಂದ್ರ ಅರಸ್, ಸುರೇಶ್ ಸೇರಿದಂತೆ ದೊಡ್ಡ ತಾರಾಬಳಗವೇ ಚಿತ್ರದಲ್ಲಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಆದಷ್ಟು ಬೇಗ ಮುಗಿಸಿ, ಶೀಘ್ರದಲ್ಲೇ ಚಿತ್ರವನ್ನು ತೆರೆಗೆ ತರುವ ಉತ್ಸಾಹದಲ್ಲಿದೆ ಚಿತ್ರತಂಡ.

ABOUT THE AUTHOR

...view details