ಕರ್ನಾಟಕ

karnataka

ETV Bharat / entertainment

ನಾಳೆ ಶಿವ ರಾಜ್​ಕುಮಾರ್​​ ಬರ್ತ್​ಡೇ: ಅಭಿಮಾನಿಗಳಿಗೆ '45' ಪ್ರೇಮದ ಕಾಣಿಕೆ - 45 Cinema First Look - 45 CINEMA FIRST LOOK

ನಾಳೆ ನಟ ಶಿವ ರಾಜ್​​ಕುಮಾರ್​ ಅವರ ಜನ್ಮದಿನ. ಈ ಪ್ರಯುಕ್ತ '45' ಚಿತ್ರತಂಡ ಫಸ್ಟ್ ಲುಕ್ ಬಿಡುಗಡೆಗೊಳಿಸಿದೆ.

Shiva Rajkumar
ನಟ ಡಾ.ಶಿವ ರಾಜ್​​ಕುಮಾರ್ (ETV Bharat)

By ETV Bharat Karnataka Team

Published : Jul 11, 2024, 9:29 AM IST

ನಟ ಡಾ.ಶಿವ ರಾಜ್​​ಕುಮಾರ್ (ETV Bharat)

ಹ್ಯಾಟ್ರಿಕ್ ಹೀರೋ, ಸೆಂಚುರಿ ಸ್ಟಾರ್ ಹೀಗೆ ಹಲವು ಬಿರುದಾವಳಿ ಹೊಂದಿರುವ ನಟ ಡಾ.ಶಿವರಾಜ್​​ಕುಮಾರ್. ಕನ್ನಡ ಚಿತ್ರರಂಗದ ನಿರ್ಮಾಪಕರ ಅಚ್ಚುಮೆಚ್ಚಿನ ಶಿವಣ್ಣನಿಗೆ ನಾಳೆ ಹುಟ್ಟುಹಬ್ಬದ ಸಂಭ್ರಮ. ನಾಳೆ, (ಜುಲೈ 12) 62ನೇ ವಸಂತಕ್ಕೆ ಕಾಲಿಡುತ್ತಿರುವ ನಟನ ಬರ್ತ್‌ಡೇಗೆ 'ಭೈರತಿ ರಣಗಲ್' ಹಾಗೂ '45' ಸಿನಿಮಾ ತಂಡಗಳಿಂದ ಸ್ಪೆಷಲ್ ಗಿಫ್ಟ್ ಸಿದ್ಧವಾಗಿದೆ.

ಈಗಾಗಲೇ 'ಭೈರತಿ ರಣಗಲ್' ಚಿತ್ರತಂಡ ಸ್ಪೆಷಲ್ ಟೀಸರ್ ರಿಲೀಸ್‌ ಮಾಡಲು ಯೋಜಿಸಿದೆ. ಈ ಮಧ್ಯೆ ಅರ್ಜುನ್ ಜನ್ಯ ಇದೇ ಮೊದಲ ಬಾರಿಗೆ ನಿರ್ದೇಶಿಸುತ್ತಿರುವ ಹಾಗೂ ನಿರ್ಮಾಪಕ ಎಂ.ರಮೇಶ್ ರೆಡ್ಡಿ ನಿರ್ಮಾಣದ '45' ಸಿನಿಮಾದಲ್ಲಿ ಶಿವಣ್ಣನ ಖದರ್ ಹೇಗಿರಲಿದೆ ಎಂಬುದರ ಬಗ್ಗೆ ಫಸ್ಟ್ ಲುಕ್ ರಿಲೀಸ್ ಮಾಡಲು ಸಿದ್ಧತೆಯೂ ನಡೆದಿದೆ.

ತಮ್ಮ ಹುಟ್ಟುಹಬ್ಬದ ಕುರಿತು ಶಿವ ರಾಜ್‌ಕುಮಾರ್ ಪ್ರತಿಕ್ರಿಯಿಸಿ, ಹುಟ್ಟುಹಬ್ಬ ಅನ್ನೋದೇ ಗಿಫ್ಟ್. ಅದು ತಂದೆ-ತಾಯಿಯಿಂದ ಪಡೆಯುವಂಥದ್ದು. ಅಂಥ ಪೋಷಕರನ್ನು ಪಡೆದಿದ್ದೇ ನನಗೆ ದೊಡ್ಡ ಗಿಫ್ಟ್. ಪ್ರತೀ ವರ್ಷ ಅಭಿಮಾನಿಗಳು ತಮ್ಮ ಹಣದಲ್ಲಿ ಕೇಕ್ ತಂದು ಕಟ್ ಮಾಡಿಸಿ ಸಂತೋಷ ಪಡುತ್ತೀರಿ. ಅಭಿಮಾನಿ ದೇವರುಗಳಿಗೆ ಈ ಬಾರಿ ನನ್ನ ಹುಟ್ಟುಹಬ್ಬಕ್ಕೆ '45' ಚಿತ್ರದ ಫಸ್ಟ್ ಲುಕ್ ಅನ್ನು ಉಡುಗೊರೆಯಾಗಿ ಕೊಡುತ್ತೇನೆ.

ಇದು ನನ್ನ ಅತ್ಯಂತ ಮೆಚ್ಚಿನ ಚಿತ್ರ. ಅರ್ಜುನ್​ ಜನ್ಯ ನಿರ್ದೇಶನದ ಚೊಚ್ಚಲ ಚಿತ್ರವೂ ಹೌದು. ಸಿನಿಮಾ ಮಾಡುವ ಸಂದರ್ಭವೇ ಬಹಳ ಖುಷಿ ಇತ್ತು. ಏಕೆಂದರೆ, ಉಪೇಂದ್ರ ಮತ್ತು ರಾಜ್​ ಬಿ.ಶೆಟ್ಟಿ ಅವರೂ ಇದ್ದಾರೆ. ಇದೊಂದು ಅದ್ಭುತ ಕಾಂಬಿನೇಶನ್​. ಭಾರತೀಯ ಚಿತ್ರರಂಗದಲ್ಲೇ ಅದ್ಭುತ ಸಿನಿಮಾ ಆಗಲಿದೆ ಎಂಬ ನಂಬಿಕೆಯಿದೆ. ಮಿಕ್ಕಿದ್ದು ದೇವರಿಗೆ ಬಿಟ್ಟಿದ್ದು. ಅಭಿಮಾನಿಗಳೇ ದೇವರು ಎಂದು ಅಪ್ಪಾಜಿ ಹೇಳಿದ್ರಲ್ವೇ?. ಜುಲೈ 12ರಂದು 45ರ ಫಸ್ಟ್ ಲುಕ್​ ನೋಡಿ ಎಂದು ಹೇಳಿದ್ದಾರೆ. ವಿಡಿಯೋ ಕೊನೆಗೆ ಶಿವ ರಾಜ್​​ಕುಮಾರ್ ಅವರಿಂದ 45ರ ಪ್ರೇಮದ ಕಾಣಿಕೆ ಎಂದು ಬರೆಯಲಾಗಿದೆ.

ರಿಯಲ್​ ಸ್ಟಾರ್ ಉಪೇಂದ್ರ ಹಾಗು ರಾಜ್ ಬಿ.ಶೆಟ್ಟಿ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ಬಹುನಿರೀಕ್ಷಿತ ಚಿತ್ರವೇ '45'. ಇದೊಂದು ಫಿಲಾಸಫಿಕಲ್ ಎಂಟರ್​ಟೈನ್​ಮೆಂಟ್. ನಟಿ ಕೌಸ್ತುಭ ಮಣಿ ಸೇರಿದಂತೆ ದೊಡ್ಡ ತಾರಾಬಳಗ ಚಿತ್ರದಲ್ಲಿದೆ.

ಇದನ್ನೂ ಓದಿ:ಹಾರರ್ ಅವತಾರದಲ್ಲಿ ಅನು ಪ್ರಭಾಕರ್! 'ಹಗ್ಗ' ಚಿತ್ರದ ಮೋಷನ್​ ಪೋಸ್ಟರ್ ರಿಲೀಸ್ - Anu Prabhakar

ಸದ್ಯ ಸ್ಯಾಂಡಲ್​ವುಡ್​ನ ಬೇಡಿಕೆಯ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ '45' ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುವ ಮೂಲಕ ನಿರ್ದೇಶಕರಾಗುತ್ತಿದ್ದಾರೆ. ಈ ಚಿತ್ರಕ್ಕೆ ಅವರೇ ಕಥೆ-ಚಿತ್ರಕಥೆಯನ್ನೂ ಬರೆದು ಸಂಗೀತವನ್ನೂ ಸಂಯೋಜಿಸಿದ್ದಾರೆ. ಸತ್ಯ ಹೆಗಡೆ ಛಾಯಾಗ್ರಹಣವಿದೆ. ಸಂಭಾಷಣೆ ಅನಿಲ್ ಕುಮಾರ್ ಅವರದ್ದು. ಕೆ.ಎಂ.ಪ್ರಕಾಶ್ ಸಂಕಲನದ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ:'ಅಪ್ಪಾಜಿ ಈ ರೀತಿಯ ಪಾತ್ರಗಳನ್ನು ಮಾಡುತ್ತಿದ್ದರು': ಭೈರವನ ಕೊನೆ ಪಾಠದ ಬಗ್ಗೆ ಶಿವಣ್ಣ ಹೀಗಂದ್ರು - Bhairavana Kone PaaTa

ಬೆಂಗಳೂರು, ಮೈಸೂರು ಸೇರಿದಂತೆ ಹಲವೆಡೆ ಚಿತ್ರೀಕರಣ (80 ದಿನಗಳ ಕಾಲ) ಆಗುತ್ತಿರುವ '45' ಸಿನಿಮಾ ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲೂ ಬಿಡುಗಡೆ ಆಗಲಿದೆ. ಸೂರಜ್ ಪ್ರೊಡಕ್ಷನ್ ಅಡಿಯಲ್ಲಿ ಉಮಾ ರಮೇಶ್ ರೆಡ್ಡಿ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾ ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಈ ವರ್ಷವೇ ಬಿಡುಗಡೆಯಾಗುವ ಸಾಧ್ಯತೆ ಇದೆ.

ABOUT THE AUTHOR

...view details