ಈ ಸಿನಿಮಾ ಎಂಬ ಬಣ್ಣದ ಲೋಕದಲ್ಲಿ ಯಶಸ್ವಿ ನಟ - ನಟಿ ಹಾಗೂ ನಿರ್ದೇಶಕರಾಗಬೇಕಾದರೆ ಒಂದೊಳ್ಳೆ ಕಥೆ, ಮೇಕಿಂಗ್, ಪ್ರೆಸೆಂಟೇಶನ್, ಪರಿಶ್ರಮದ ಜೊತೆಗೆ ಅದೃಷ್ಟ ಕೂಡ ಇರಬೇಕು. ಈ ಮಾತು ಕಾಮಿಡಿ ಮಾಡುತ್ತಾ ಹೀರೋ ಆದ ಗಣೇಶ್ ಅವರ ವಿಚಾರದಲ್ಲಿ ನಿಜವಾಗಿದೆ.
ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಹಿಟ್ ಚಿತ್ರಗಳನ್ನು ಕೊಟ್ಟಿರುವ ಗೋಲ್ಡನ್ ಸ್ಟಾರ್ ಗಣೇಶ್ ಅವರೀಗ ತಮ್ಮ ಬಹುನಿರೀಕ್ಷಿತ 'ಕೃಷ್ಣಂ ಪ್ರಣಯ ಸಖಿ' ಚಿತ್ರದ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಈ ಸಿನಿಮಾ ಬಗ್ಗೆ ಈಟಿವಿ ಭಾರತದ ಜೊತೆ ಮಾತನಾಡುವ ವೇಳೆ ಯಾರಿಗೂ ಗೊತ್ತಿಲ್ಲದ ಒಂದು ಎಕ್ಸ್ಕ್ಲ್ಯೂಸಿವ್ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ 18 ವರ್ಷಗಳನ್ನು ಪೂರೈಸಿರುವ ನಟ ಗಣೇಶ್ ಅವರ ಹೊಸ ಚಿತ್ರ ಆಗಸ್ಟ್ 15ರಂದು ಬಿಡುಗಡೆಯಾಗುತ್ತಿದೆ. ಅವರು ತಮ್ಮ ಹಿಟ್ ಚಿತ್ರ 'ಮುಂಗಾರು ಮಳೆ'ಗೆ ಪಡೆದ ಸಂಭಾವನೆ ಕೇಳಿದರೆ ನಿಜಕ್ಕೂ ಆಶ್ಚರ್ಯ ಆಗುತ್ತದೆ. ಮುಂಗಾರು ಮಳೆ ನನಗೆ ಸ್ಟಾರ್ ಪಟ್ಟ ತಂದುಕೊಟ್ಟಿತು. ಆದರೆ, ನಾನು ಈ ಸಿನಿಮಾಗೆ ಪಟ್ಟ ಕಷ್ಟ ಅಷ್ಟಿಷ್ಟಲ್ಲ ಎಂಬುದಾಗಿ ಗಣೇಶ್ ತಿಳಿಸಿದ್ದಾರೆ.
ಗಣೇಶ್, ಮೊದಲು ಕಿರುತೆರೆಯಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ನಿರ್ವಹಿಸುತ್ತಾ, ಕಾಮಿಡಿ ಟೈಮ್ ಎಂಬ ಶೋ ಮೂಲಕ ಜನಪ್ರಿಯತೆ ಗಳಿಸಿದವರು. ಈ ಖ್ಯಾತಿಯಿಂದಲೇ 'ಚೆಲ್ಲಾಟ' ಶೀರ್ಷಿಕೆಯ ಸಿನಿಮಾ ಮಾಡುತ್ತಾರೆ. ಸಿನಿಮಾ ಯಶ ಕಂಡರೂ ಗಣೇಶ್ ಅವರಿಗೆ ದೊಡ್ಡ ಮಟ್ಟದ ಹೆಸರು ತಂದು ಕೊಡಲ್ಲ. ಆಗ ಗಾಂಧಿನಗರದಲ್ಲಿ ಕಾಮಿಡಿ ನಟನನ್ನು ಹೀರೋ ಮಾಡಿದ್ರೆ ಹೇಗೆ ಹಿಟ್ ಆಗುತ್ತೆ? ಎಂಬ ಮಾತುಗಳು ಕೇಳಿ ಬಂದವು.
ಯೋಗರಾಜ್ ಭಟ್ ಜೊತೆ ಗಣೇಶ್ (ETV Bharat) ಆದರೆ, ಗಣೇಶ್ ಮಾತ್ರ ಸೀರಿಯಲ್, ಸಿನಿಮಾಗಳಲ್ಲಿ ಸಣ್ಣ ಪಾತ್ರಗಳನ್ನು ಮಾಡುತ್ತಾ ಮುಂದುವರಿಯುತ್ತಾರೆ. ಆಗ ಬಂದ ಆಫರ್ ''ಮುಂಗಾರು ಮಳೆ''. ಈ ಸಿನಿಮಾದ ಕಥೆಯನ್ನು ಪ್ರೀತಂ ಗುಬ್ಬಿ ಹಾಗೂ ಯೋಗರಾಜ್ ಭಟ್ ಸೇರಿ ಬರೆಯುತ್ತಾರೆ. ಗಣೇಶ್ ಅವರಿಗೆ ಭಟ್ರು ಕಥೆ ಹೇಳ್ತಾರೆ. ಈ ಕಥೆ ಗಣೇಶ್ ಅವರಿಗೆ ಇಷ್ಟ ಆಗುತ್ತದೆ.
ಆದರೆ ಈ ಚಿತ್ರಕ್ಕೆ ನಿರ್ಮಾಪಕರಿರಲಿಲ್ಲ. ಈ ಸಿನಿಮಾ ಮಾಡಿದ್ರೆ ಒಳ್ಳೆ ಹೆಸರು ಬರುತ್ತೆ ಎಂಬ ವಿಶ್ವಾಸ ಗಣೇಶ್ ಅವರಲ್ಲಿ ಮೂಡಿತ್ತು. ಹಾಗಾಗಿ ಈ ಕಥೆ ಬಿಟ್ರೆ ಹೋಗುತ್ತೆ ಅಂತಾ ಗಣೇಶ್ ನಿರ್ಮಾಪಕರನ್ನು ಹುಡುಕಲು ಶುರು ಮಾಡ್ತಾರೆ. ಈ ಕಥೆ ತೆಗೆದುಕೊಂಡು ಕೆಲ ಸಿನಿಮಾ ನಿರ್ಮಾಪಕರ ಬಳಿ ಹೋಗ್ತಾರೆ. ಕಥೆ ಕೇಳಿದ ನಿರ್ಮಾಪರೊಬ್ಬರು ಮೊಲ ಆಪಶಕುನ, ಮೊಲದ ಬದಲು ಪಾರಿವಾಳ ಬಳಸಿ ಅಂತಾರೆ. ಇದು ಗಣೇಶ್ ಹಾಗೂ ನಿರ್ದೇಶಕ ಯೋಗರಾಜ್ ಭಟ್ ಅವರಿಗೆ ಸರಿ ಅನಿಸುವುದಿಲ್ಲ. ಹೀಗೆ ಗಣೇಶ್ ಸಿನಿಮಾ ಕಥೆ ಹಿಡಿದು ಆ ಕಾಲದ 5 ಪ್ರೊಡಕ್ಷನ್ ಹೌಸ್ಗಳನ್ನು ಭೇಟಿ ಮಾಡ್ತಾರೆ. ಆಗ ಯಾವುದೂ ವರ್ಕ್ ಔಟ್ ಆಗದೇ ಆ ಸಿನಿಮಾ ಕೈ ಬಿಟ್ಟಿರುತ್ತಾರೆ.
ಗೋಲ್ಡನ್ ಸ್ಟಾರ್ ಗಣೇಶ್ (ETV Bharat) ಒಂದು ದಿನ ಗಣೇಶ್ ತಮ್ಮ ಹುಟ್ಟೂರು ಅಡಕಮಾರನಹಳ್ಳಿಗೆ ಬಂದಾಗ ಸಿಕ್ಕವರೇ ಇ ಕೃಷ್ಣಪ್ಪ. ಆಗ ಗಣೇಶ್ ಮುಂಗಾರು ಮಳೆ ಕಥೆ ಕೃಷ್ಣಪ್ಪ ಅವರಿಗೆ ಹೇಳಿ ಒಪ್ಪಿಸುತ್ತಾರೆ. ಕೃಷ್ಣಪ್ಪ ಅವರು ಕೂಡ ಕಥೆ ಕೇಳಿ ಬಜೆಟ್ ಎಷ್ಟಾಗಬಹುದು ಅಂತಾ ಕೇಳ್ತಾರೆ. ಗಣೇಶ್ ಅವರು ಎಲ್ಲಾ ಸೇರಿ 70 ಲಕ್ಷ ಆಗಬಹುದು ಅಂತಾ ಹೇಳ್ತಾರೆ. ಕೃಷ್ಣಪ್ಪ ಕಥೆ ಚೆನ್ನಾಗಿದೆ ಅಂತಾ ಹೇಳಿ ಸಿನಿಮಾ ಶುರು ಮಾಡ್ತಾರೆ. ಸಿನಿಮಾ ಮುಗಿಯೋ ಹೊತ್ತಿಗೆ ಬಜೆಟ್ ಒಂದೂವರೆ ಕೋಟಿ ರೂಪಾಯಿ ಆಗುತ್ತದೆ. ವಿತರಕ ಜಯಣ್ಣ ಅವರ ಸಹಾಯ ಪಡೆದು ಗಣೇಶ್ ಮುಂಗಾರು ಮಳೆ ಸಿನಿಮಾವನ್ನು ಬಿಡುಗಡೆ ಮಾಡುತ್ತಾರೆ.
ಇದನ್ನೂ ಓದಿ:ದುನಿಯಾ ವಿಜಯ್ ಮುಖ್ಯಭೂಮಿಕೆಯ 'ಭೀಮ' ಟ್ರೇಲರ್ ಅನಾವರಣಕ್ಕೆ ಮುಹೂರ್ತ ಫಿಕ್ಸ್ - Bheema Trailer
2006ರಲ್ಲಿ ಡಿಸೆಂಬರ್ 29ರಂದು ಬಿಡುಗಡೆಯಾದ ಯೋಗರಾಜ್ ಭಟ್ ನಿರ್ದೇಶನದ ಹಾಗೂ ಗಣೇಶ್ ಅಭಿನಯದ ಮುಂಗಾರು ಮಳೆ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿತ್ತು. ಯೋಗರಾಜ್ ಭಟ್ ಈ ಸಿನಿಮಾಗೂ ಮೊದಲು ಮಣಿ, ರಂಗ ಎಸ್ಎಸ್ಎಲ್ಸಿ ಸಿನಿಮಾ ಮಾಡಿದ್ದರೂ ಕೂಡ ಆ ಸಿನಿಮಾಗಳು ಅಷ್ಟಾಗಿ ಯಶಸ್ಸು ಗಳಿಸಿರಲಿಲ್ಲ. ಆದರೆ, ಮುಂಗಾರು ಮಳೆ ಸಿನಿಮಾ ಅವರಿಗೆ ದೊಡ್ಡ ಯಶಸ್ಸು ತಂದುಕೊಡ್ತು. ಮುಂಗಾರು ಮಳೆ ಸಿನಿಮಾ ಫಸ್ಟ್ ವೀಕ್ ಎಲ್ಲೆಡೆ ಹೌಸ್ ಪ್ರದರ್ಶನ ಕಂಡಿದೆ. ನಂತರ ಈ ಕ್ರೇಜ್ ಸತತ ನಾಲ್ಕು ವಾರಗಳು ಮುಂದುವರಿಯಿತು. ಒಂದು ವರ್ಷಗಳ ಕಾಲ ಚಿತ್ರಮದಿರಗಳಲ್ಲಿ ಈ ಸಿನಿಮಾ ಪ್ರದರ್ಶನ ಕಂಡು ದಾಖಲೆ ಬರೆಯಿತು. ಒಂದೂವರೆ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಆದ ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಬರೋಬ್ಬರಿ 75 ಕೋಟಿ ರೂ. ಕಲೆಕ್ಷನ್ ಮಾಡಿತ್ತು.
ಗೋಲ್ಡನ್ ಸ್ಟಾರ್ ಗಣೇಶ್ (ETV Bharat) ಈ ಚಿತ್ರ ಗಣೇಶ್ ಅವರಿಗೆ ಸ್ಟಾರ್ ಪಟ್ಟ ತಂದು ಕೊಡುತ್ತದೆ. ಆದರೆ, ಗಣೇಶ್ ಹೇಳುವ ಹಾಗೇ ಮುಂಗಾರು ಮಳೆ ಸಿನಿಮಾ ನನಗೆ ಸ್ಟಾರ್ ವ್ಯಾಲ್ಯೂ ತಂದು ಕೊಟ್ಟಿತು. ಆದರೆ, ನನಗೆ ಒಂದು ರೂಪಾಯಿ ಸಂಭಾವನೆ ಸಿಗಲಿಲ್ಲ ಎಂಬ ರೋಚಕ ವಿಚಾರವೊಂದನ್ನು ಹಂಚಿಕೊಂಡರು. ಸಿನಿಮಾ ಇಂಡಸ್ಟ್ರಿಯಲ್ಲಿ ಸಾಕಷ್ಟು ಏರಿಳಿತಗಳನ್ನು ನೋಡಿದ್ದೇನೆ ಎಂದು ಬಹಿರಂಗಪಡಿಸಿದರು.
ಇದನ್ನೂ ಓದಿ:ನನ್ನ ಹೆಸರ ಮುಂದೆ ಪತಿ ಅಮಿತಾಭ್ ಹೆಸರೇಕೆ? ಪಾರ್ಲಿಮೆಂಟ್ನಲ್ಲಿ ಜಯಾ ಬಚ್ಚನ್ ಗರಂ - Jaya Bachchan
ಏಕೆ ಈ ವಿಚಾರ ಹೇಳಿದೆ ಅಂದ್ರೆ, 'ಕೃಷ್ಣಂ ಪ್ರಣಯ ಸಖಿ' ಮುಂಗಾರು ಮಳೆ ಚಿತ್ರದ ರೀತಿಯೇ ಒಂದು ಕಥೆ. ನಿರ್ದೇಶಕ ಶ್ರೀನಿವಾಸರಾಜು ಆ್ಯಕ್ಷನ್ ಕಟ್ ಹೇಳಿದ್ದಾರೆ. ತ್ರಿಶೂಲ್ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಪ್ರಶಾಂತ್ ಜಿ ರುದ್ರಪ್ಪ ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ. ನಮ್ಮ ಈ ಸಿನಿಮಾ ಯಶಸ್ವಿಯಾಗಲಿದೆ ಎಂದು ಗಣೇಶ್ ವಿಶ್ವಾಸ ವ್ಯಕ್ತಪಡಿಸಿದರು.