ಕೇಂಜ ಚೇತನ್ ಕುಮಾರ್ ಆ್ಯಕ್ಷನ್ ಕಟ್ ಹೇಳಿದ್ದ 'ಚೌ ಚೌ ಬಾತ್' ಈ ವರ್ಷ ಬಿಡುಗಡೆಗೊಂಡಿರುವ ಎಂಟರ್ಟೈನ್ಮೆಂಟ್ ಸಿನಿಮಾ. ಒಂದಷ್ಟು ಪ್ರಯೋಗಾತ್ಮಕ ಅಂಶಗಳನ್ನು ಒಳಗೊಂಡ ಈ ಚಿತ್ರಕ್ಕೆ ಸಿನಿಪ್ರಿಯರು ಫಿದಾ ಆಗಿದ್ದಾರೆ. ಮಾರ್ಚ್ 15ಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಅತ್ಯುತ್ತಮ ವಿಮರ್ಶೆ ಪಡೆದಿದ್ದ ಈ ಸಿನಿಮಾವನ್ನು ನೋಡಿದ ಪ್ರೇಕ್ಷಕರೆಲ್ಲ ಥ್ರಿಲ್ ಆಗಿದ್ದರು.
ಅಷ್ಟೇ ಅಲ್ಲ, ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿಯೂ ಪ್ರದರ್ಶನಗೊಂಡಿದ್ದ ಚೌ ಚೌ ಬಾತ್ ಇದೀಗ ಸಿನಿ ಬಜಾರ್ ಎಂಬ ಓಟಿಟಿಯಲ್ಲಿ ಬಿಡುಗಡೆಗೊಂಡು ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಿಸದವರೀಗ ಒಟಿಟಿಗೆ ಲಗ್ಗೆ ಇಡುತ್ತಿದ್ದಾರೆ.
ಸಿನಿ ಬಜಾರ್ನಲ್ಲಿ ಬಿಡುಗಡೆಗೊಂಡ ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಣೆ ಪಡೆದುಕೊಳ್ಳುತ್ತಿದೆ. ಆರಂಭದಿಂದಲೂ ಚೌ ಚೌ ಬಾತ್ ಬಗ್ಗೆ ಉತ್ತಮ ಅಭಿಪ್ರಾಯ ಮೂಡಿತ್ತು. ಈ ಕಾರಣದಿಂದಲೇ ಈ ಸಿನಿಮಾ ಯಶಸ್ಸು ಕಾಣುತ್ತಿದೆ. ನಿರ್ದೇಶಕ ಕೇಂಜ ಚೇತನ್ ಕುಮಾರ್ ಅಂಥಾದ್ದೊಂದು ಸಮ್ಮೋಹಕ ಶೈಲಿಯಲ್ಲಿ ಈ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ. ಅವರ ನಿರ್ದೇಶನ ಶೈಲಿಯನ್ನು ಅಭಿಮಾನಿಗಳು ಗುಣಗಾನ ಮಾಡುತ್ತಿದ್ದಾರೆ.
ಚಿತ್ರದಲ್ಲಿ ಯುವ ಪ್ರತಿಭೆಗಳಾದ ಸಾಗರ್ ಗೌಡ, ಸಂಕಲ್ಪ್ ಶರ್ಮಾ, ಸುಶ್ಮಿತಾ ಭಟ್, ಅರುಣಾ ಬಾಲರಾಜ್, ಧನುಶ್ ಬೈಕಂಪಾಡಿ, ಗೀತಾ ಬಂಗೇರ, ಪ್ರಕರ್ಷ ಶಾಸ್ತ್ರಿ ಮುಂತಾದವರು ಅಭಿನಯಿಸಿದ್ದಾರೆ. ಇದು ಹೈಪರ್ ಲಿಂಕ್ ರೊಮ್ಯಾಂಟಿಕ್ ಜಾನರ್ನ ಚಿತ್ರ. ಕನ್ನಡ ಸಿನಿಮಾ ಪ್ರೇಕ್ಷಕರು ಮೆಚ್ಚಿದ ಅಪರೂಪದ ಜಾನರ್. ಮೂರು ವಿಭಿನ್ನ ಪ್ರೇಮ ಕಥನಗಳನ್ನು ತೆರೆದಿಡುವ ಚೌ ಚೌ ಬಾತ್ ಎಲ್ಲ ವರ್ಗದ ಪ್ರೇಕ್ಷಕರನ್ನೂ ಸೆಳೆಯುವಂತಿದೆ. ಹೀಗೊಂದು ಅಭಿಪ್ರಾಯ ಸಿನಿಮಾ ನೋಡಿದವರಿಂದಲೇ ಮೂಡಿಕೊಂಡಿದೆ.
ಇದನ್ನೂ ಓದಿ:ಕಾಲೇಜು ದಿನಗಳನ್ನು ನೆನಪಿಸಲಿದೆ 'ಬ್ಯಾಕ್ ಬೆಂಚರ್ಸ್'; ಸಿನಿಮಾ ಸಾಂಗ್ ರಿಲೀಸ್ - Back Benchers
ಸನಾತನಯ್ ಪಿಕ್ಚರ್ಸ್ ಮತ್ತು ಕಾಮಧೇನು ಫಿಲಂಸ್ ಅರ್ಪಿಸುವ ಈ ಚಿತ್ರ ಹಾರಿಜಾನ್ ಮೂವೀಸ್ ಬ್ಯಾನರ್ ಅಡಿ ನಿರ್ಮಾಣಗೊಂಡಿದೆ. ಹೇಮಂತ್ ಜೋಯಿಸ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ರುದ್ರಮುನಿ ಬೆಳಗೆರೆ ಛಾಯಾಗ್ರಹಣ ನಿರ್ವಹಿಸಿದ್ದಾರೆ. ಪ್ರಮೋದ್ ಮರವಂತೆ ಅವರ ಗೀತ ಸಾಹಿತ್ಯವಿದೆ. ಸತೀಶ್ ಎಸ್.ಬಿ, ಸಂಕಲ್ಪ್ ಶರ್ಮಾ, ಪೂರ್ಣಚಂದ್ರ, ದ ಜೋಯ್ಸ್ ಪ್ರಾಜೆಕ್ಟ್, ಅಶೋಕ್ ಡಿ ಶೆಟ್ಟಿ, ಓಂ ಸ್ಟುಡಿಯೋ ಸಹ ನಿರ್ಮಾಣದ ಚಿತ್ರವಿದು. ಚಿತ್ರಮಂದಿರದಲ್ಲಿ ಮಿಸ್ ಮಾಡಿಕೊಂಡವರು ಈಗ ಫ್ಯಾಮಿಲಿ ಸಮೇತ ಮನೆಯಲ್ಲಿ ಕುಳಿತು ಈ ಚಿತ್ರವನ್ನು ನೋಡಬಹುದು.
ಇದನ್ನೂ ಓದಿ:ಅರ್ಜುನ್ ಜೊತೆ ಬ್ರೇಕ್ಅಪ್ ವದಂತಿ: ಪ್ರೀತಿ, ಬೆಂಬಲದ ಬಗ್ಗೆ ಮಾತನಾಡಿದ ಮಲೈಕಾ ಅರೋರಾ - Malaika Arjun