ಕರ್ನಾಟಕ

karnataka

ETV Bharat / entertainment

69ನೇ ಜನ್ಮದಿನದ ಸಂಭ್ರಮದಲ್ಲಿ ಚಿರಂಜೀವಿ: ತಿರುಮಲ ತಿಮ್ಮಪ್ಪನ ದರ್ಶನ ಪಡೆದ ಸೂಪರ್​ಸ್ಟಾರ್ - ವಿಡಿಯೋ - Mega Star Birthday

ತೆಲುಗು, ಹಿಂದಿ, ತಮಿಳು ಮತ್ತು ಕನ್ನಡ ಚಿತ್ರರಂಗಕ್ಕೆ ಮಹತ್ವದ ಕೊಡುಗೆಗಳನ್ನು ನೀಡೋ ಮೂಲಕ ಹೆಸರುವಾಸಿಯಾಗಿರುವ ಹಿರಿಯ ನಟ ಚಿರಂಜೀವಿ ಇಂದು ತಮ್ಮ 69ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಪತ್ನಿ ಸುರೇಖಾ ಕೊನಿಡೇಲಾ ಜೊತೆ ತಿರುಪತಿಗೆ ಭೇಟಿ ನೀಡಿ ವೆಂಕಟೇಶ್ವರ ಸ್ವಾಮಿಯ ಆಶೀರ್ವಾದ ಪಡೆದಿದ್ದಾರೆ.

Chiranjeevi visits Tirupati
ತಿರುಪತಿಗೆ ಭೇಟಿ ನೀಡಿದ ಚಿರಂಜಿವಿ ದಂಪತಿ (ETV Bharat)

By ETV Bharat Karnataka Team

Published : Aug 22, 2024, 1:52 PM IST

ತಿರುಪತಿಗೆ ಭೇಟಿ ನೀಡಿದ ಚಿರಂಜಿವಿ ದಂಪತಿ (ETV Bharat)

ತಿರುಪತಿ (ಆಂಧ್ರಪ್ರದೇಶ): ದಕ್ಷಿಣ ಚಿತ್ರರಂಗದ ಜನಪ್ರಿಯ ನಟ ಚಿರಂಜೀವಿ ಅವರಿಂದು ಜನ್ಮದಿನದ ಸಂಭ್ರಮದಲ್ಲಿದ್ದಾರೆ. 69ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಹೆಸರಾಂತ ನಟನಿಗೆ ಕುಟುಂಬಸ್ಥರು, ಸಿನಿಸ್ನೇಹಿತರೂ ಸೇರಿದಂತೆ ಅಪಾರ ಸಂಖ್ಯೆಯ ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ. ಜನ್ಮದಿನ ಹಿನ್ನೆಲೆ ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರಿಂದು ಪ್ರಸಿದ್ಧ ಧಾರ್ಮಿಕ ಕ್ಷೇತ್ರ ತಿರುಪತಿಗೆ ಭೇಟಿ ಕೊಟ್ಟಿದ್ದಾರೆ.

ಹೆಚ್ಚಿನ ಸಂಖ್ಯೆಯ ಭಕ್ತರು ಭೇಟಿ ಕೊಡುವ ತಿರುಮಲ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕಿಂದು ಚಿರಂಜೀವಿ ಭೇಟಿ ಕೊಟ್ಟು, ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಮೆಗಾಸ್ಟಾರ್​​ಗೆ ಪತ್ನಿ ಸುರೇಖಾ ಕೊನಿಡೇಲಾ ಸಾಥ್​ ನೀಡಿದರು. ಚಿರಂಜೀವಿ ಬಿಳಿ ರೇಷ್ಮೆ ಮುಂಡು, ಕುರ್ತಾ, ಕಸವು ಬಾರ್ಡರ್​​ ಶಾಲ್​​​ ಧರಿಸಿ ಸಾಂಪ್ರದಾಯಿಕವಾಗಿ ಕಾಣಿಸಿಕೊಂಡರು. ಪತ್ನಿ ಕೂಡಾ ಸೀರೆಯಲ್ಲಿ ಟ್ರೆಡಿಶನಲ್​​ ಲುಕ್​​ ಕೊಟ್ರು.

ತೆಲುಗು, ಹಿಂದಿ, ತಮಿಳು ಮತ್ತು ಕನ್ನಡ ಚಿತ್ರರಂಗಕ್ಕೆ ಮಹತ್ವದ ಕೊಡುಗೆಗಳನ್ನು ನೀಡೋ ಮೂಲಕ ಹೆಸರುವಾಸಿಯಾಗಿರುವ ಹಿರಿಯ ನಟ ಇಂದು ದೇವಸ್ಥಾನ ಭೇಟಿ ಸಂದರ್ಭ ಭಕ್ತರೊಂದಿಗೆ ಆತ್ಮೀಯವಾಗಿ ಮಾತುಕತೆ ನಡೆಸಿದರು. ತಿರುಪತಿ ಭೇಟಿಯ ವಿಡಿಯೋಗಳು ಸೋಷಿಯಲ್​​ ಮೀಡಿಯಾದಲ್ಲಿ ಸಖತ್​ ಸದ್ದು ಮಾಡುತ್ತಿವೆ. ಅಪಾರ ಸಂಖ್ಯೆಯ ಅಭಿಮಾನಿಗಳು ತಮ್ಮ ಮೆಚ್ಚಿನ ನಟನಿಗೆ ಪ್ರೀತಿಯ ಧಾರೆಯೆರೆಯುತ್ತಿದ್ದಾರೆ.

ಚಿರಂಜೀವಿ ದಂಪತಿ ನಿನ್ನೆ ತಿರುಮಲಕ್ಕೆ ಆಗಮಿಸಿದರು. ನಟ ಕ್ಯಾಶುಯಲ್ ಟೀ ಶರ್ಟ್ ಮತ್ತು ಜೀನ್ಸ್ ಧರಿಸಿದ್ದರು. ನಟನ ತಾಯಿ ಮತ್ತು ಪತ್ನಿ ಕೂಡ ಈ ಧಾರ್ಮಿಕ ಕ್ಷೇತ್ರಕ್ಕೆ ಭೇಟಿ ಕೊಟ್ಟಿದ್ದಾರೆ. ಸ್ಥಳೀಯ ಹೋಟೆಲ್‌ನಲ್ಲಿ ಸೂಪರ್​​ಸ್ಟಾರ್​ನ ಕುಟುಂಬಕ್ಕೆ ಆತ್ಮೀಯ ಸ್ವಾಗತ ಕೋರಲಾಯಿತು.

ಇದನ್ನೂ ಓದಿ:ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ ಡಾಲಿ ಧನಂಜಯ್​​​ - Daali Dhananjay Apology

ಈ ವರ್ಷದ ಮೇ ತಿಂಗಳಲ್ಲಿ ಚಿರಂಜೀವಿ ಅವರಿಗೆ ಭಾರತದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮವಿಭೂಷಣವನ್ನು ನೀಡಿ ಗೌರವಿಸಲಾಯಿತು. ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಪ್ರತಿಷ್ಠಿತ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಮೇ 9 ರಂದು ರಾಷ್ಟ್ರ ರಾಜಧಾನಿಯ ರಾಷ್ಟ್ರಪತಿ ಭವನದಲ್ಲಿ ಈ ಸಮಾರಂಭ ನಡೆದಿತ್ತು.

ಇದನ್ನೂ ಓದಿ:'ಕಾಂತಾರ ಪ್ರೀಕ್ವೆಲ್'​ಗಾಗಿ ಕಳರಿಪಯಟ್ಟು ಕಲಿತ ಡಿವೈನ್​ ಸ್ಟಾರ್ ರಿಷಬ್​ ಶೆಟ್ಟಿ - Rishab Shetty Kalaripayattu

ನಟನಿಗೆ ಸಿಕ್ಕ ಪದ್ಮವಿಭೂಷಣ ಪ್ರಶಸ್ತಿಯು ಭಾರತೀಯ ಚಿತ್ರರಂಗದ ಮೇಲಿನ ಅವರ ಗಮನಾರ್ಹ ಪ್ರಭಾವವನ್ನು ಒತ್ತಿಹೇಳುತ್ತದೆ. ನಟ 1978ರಲ್ಲಿ 'ಪುನದಿರಲ್ಲು' ಮೂಲಕ ತಮ್ಮ, ಸಿನಿಮಾ ವೃತ್ತಿಜೀವನ ಆರಂಭಿಸಿದರರು. ತಮ್ಮ ಸುಧೀರ್ಘ ಸಿನಿಪಯಣದಲ್ಲಿ ಹಲವು ಯಶಸ್ವಿ ಚಿತ್ರಗಳನ್ನು ಮಜರಂಜನಾ ಕ್ಷೇತ್ರಕ್ಕೆ ಕೊಟ್ಟಿದ್ದಾರೆ. ಮುಂದಿನ ಸಿನಿಮಾಗಳಿಗಾಗಿ ಸಿನಿಪ್ರಿಯರು ಮತ್ತು ಅಭಿಮಾನಿಗಳು ಕಾತರರಾಗಿದ್ದಾರೆ.

ABOUT THE AUTHOR

...view details