ಕರ್ನಾಟಕ

karnataka

ETV Bharat / entertainment

ದುಬೈನಲ್ಲಿ CCL ಪ್ರೋಮೋ ರಿಲೀಸ್‌, ಬುರ್ಜ್ ಖಲೀಫಾ ಮೇಲೆ ರಾರಾಜಿಸಿದ ಸ್ಟಾರ್ಸ್ - ಬುರ್ಜ್ ಖಲೀಫಾ

ಸಿನಿಮಾ ಸ್ಟಾರ್ಸ್​ಗಳ ಕ್ರಿಕೆಟ್ ಟೂರ್ನಿ ಸಿಸಿಎಲ್​ ಇದೇ 23 ರಿಂದ ಆರಂಭವಾಗುತ್ತಿದೆ. ಶುಕ್ರವಾರ ದುಬೈನ ಬುರ್ಜ್ ಖಲೀಫಾದಲ್ಲಿ ಸಿಸಿಎಲ್ ಪ್ರೋಮೋ ಬಿಡುಗಡೆ ಮಾಡಲಾಯಿತು.

Etv Bharat
Etv Bharat

By ETV Bharat Karnataka Team

Published : Feb 3, 2024, 11:05 AM IST

Updated : Feb 3, 2024, 1:05 PM IST

ದುಬೈನಲ್ಲಿ CCL ಪ್ರೋಮೋ ರಿಲೀಸ್‌

ಭಾರತ ಚಿತ್ರರಂಗದ ದಿಗ್ಗಜರನ್ನು ಒಂದೇ ವೇದಿಕೆಯಲ್ಲಿ ಕಣ್ತುಂಬಿಕೊಳ್ಳುವ ಸುವರ್ಣಾವಕಾಶ ಅಭಿಮಾನಿಗಳಿಗೆ ಮತ್ತೊಮ್ಮೆ ಒದಗಿ ಬಂದಿದೆ. 10ನೇ ಆವೃತ್ತಿಯ ಸೆಲೆಬ್ರಿಟಿ ಕ್ರಿಕೆಟ್ ಲೀಗ್​ಗೆ ದಿನಗಣನೆ ಆರಂಭವಾಗಿದ್ದು, ದೇಶದ ಸ್ಟಾರ್ ನಟರು ಇದೇ ಫೆಬ್ರವರಿ 23 ರಿಂದ ಕ್ರಿಕೆಟ್ ಅಖಾಡಕ್ಕಿಳಿಯಲು ಸಜ್ಜಾಗಿದ್ದಾರೆ. ಅದರ ಭಾಗವಾಗಿ ಶುಕ್ರವಾರ ದುಬೈನಲ್ಲಿ ಪ್ರೋಮೋ ಬಿಡುಗಡೆ ಮಾಡುವ ಮೂಲಕ ಸಿಸಿಎಲ್​​ಗೆ ಚಾಲನೆ ನೀಡಲಾಗಿದೆ. ಬುರ್ಜ್ ಖಲೀಫಾದಲ್ಲಿ ಕಟ್ಟಡದ ಮೇಲೆ ಸಿಸಿಎಲ್ ಪ್ರೋಮೋ ಝಲಕ್ ಪ್ರದರ್ಶಿಸಲಾಯಿತು. ಈ ದೃಶ್ಯವನ್ನು ಕಣ್ತುಂಬಿಕೊಂಡ ಸ್ಟಾರ್ಟ್ ರೋಮಾಂಚನಗೊಂಡರು.

ಪ್ರೋಮೋ ಬಿಡುಗಡೆ ಕಾರ್ಯಕ್ರಮದಲ್ಲಿ ಕನ್ನಡದಿಂದ ಕಿಚ್ಚ ಸುದೀಪ್, ಹಿಂದಿಯಿಂದ ಸೊಹೈಲ್ ಖಾನ್, ತಮಿಳು ಚಿತ್ರರಂಗದಿಂದ ಆರ್ಯ ಮತ್ತು ಜೀವಾ , ತೆಲುಗಿನಿಂದ ತಮನ್ ಮತ್ತು ಸುಧೀರ್ ಬಾಬು, ಬಂಗಾಳಿಯಿಂದ ಜಿಸ್ಸು ಸೇನ್‌ಗುಪ್ತಾ, ಪಂಜಾಬಿಯಿಂದ ಬುನ್ನು ಧಿಲ್ಲೋನ್ ಮತ್ತು ಸೋನು ಸೂದ್, ಮಲಯಾಳಂನಿಂದ ಇಂದ್ರಜಿತ್ ಸುಕುಮಾರನ್ ಮತ್ತು ಉನ್ನಿ ಮುಕುಂದನ್ ಸೇರಿದಂತೆ CCL ನ ಎಲ್ಲಾ 8 ತಂಡಗಳ ನಾಯಕರು ಹಾಗೂ ಸೂಪರ್ ಸ್ಟಾರ್ಸ್ ಭಾಗಿಯಾಗಿದ್ದರು.

ಸಿಸಿಎಲ್ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕರು ಆಗಿರುವ ವಿಷ್ಣು ವರ್ಧನ್ ಇಂದೂರಿ ಮಾತನಾಡಿ, ಸಿಸಿಎಲ್ ಮನರಂಜನಾತ್ಮಕ ಕ್ರೀಡೆಯಾಗಿದ್ದು, ಎಲ್ಲ ಸ್ಟಾರ್ ಅವರ ಬ್ಯುಸಿ ಶೆಡ್ಯುಲ್ಡ್ ನಡುವೆ ಕ್ರಿಕೆಟ್​​ನಲ್ಲಿ ಭಾಗಿಯಾಗಿಯಾಗುತ್ತಾರೆ ಎಂದರು.

ಕಿಚ್ಚ ಸುದೀಪ್ ಮಾತಾನಾಡಿ, ನಾನು ಈ ಹಿಂದೆ ಸಿನಿಮಾಗಾಗಿ ಬುರ್ಜ್ ಖಲೀಫಾದಲ್ಲಿದ್ದೆ. ಆದರೆ ಈಗ ಕ್ರಿಕೆಟ್​​ಗಾಗಿ ಇಲ್ಲಿರುವುದು ವಿಶೇಷ ಹಾಗೂ ಮರೆಯಲಾಗದ ಸಂಗತಿ ಎಂದು ಸಂತಸ ಹಂಚಿಕೊಂಡರು.

ದುಬೈನಲ್ಲಿ ಸಿಸಿಎಲ್ ಪ್ರೋಮೋ ರಿಲೀಸ್‌

ಫೆಬ್ರವರಿ 23 ರಿಂದ ಆರಂಭವಾಗುವ ಸಿಸಿಎಲ್ 10ನೇ ಸೀಸನ್ ಮಾರ್ಚ್ 17 ರವರೆಗೆ ನಡೆಯಲಿದೆ. ಲೀಗ್ ಸುತ್ತು ಮಾರ್ಚ್ 10 ರವರೆಗೆ ನಡೆಯಲಿದ್ದು, ಈ ಸುತ್ತಿನಲ್ಲಿ 16 ಪಂದ್ಯಗಳು ನಡೆಯಲಿವೆ. ಆ ಬಳಿಕ ಪ್ಲೇ ಆಫ್ ಸುತ್ತು ಆರಂಭವಾಗಲಿದೆ. ಟೂರ್ನಿಯ ಮೊದಲ ಪಂದ್ಯ ಯುನೈಟೆಡ್ ಅರಬ್ ಎಮಿರೇಟ್ಸ್​ (United Arab Emirates) ಶಾರ್ಜಾದಲ್ಲಿ ನಡೆಯಲ್ಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಹೀರೋಸ್ ಮತ್ತು ಕೇರಳ ಸ್ಟ್ರೈಕರ್ಸ್ ತಂಡಗಳು ಮುಖಾಮುಖಿಯಾಗಲಿವೆ.

ಭಾರತದ ಜನಪ್ರಿಯ ಒಟಿಟಿ ವೇದಿಕೆಯಾಗಿರುವ ಜಿಯೋ ಸಿನಿಮಾ, ಸೆಲೆಬ್ರಿಟಿ ಕ್ರಿಕೆಟ್ ಲೀಗ್ (ಸಿಸಿಎಲ್) ಜೊತೆಗೆ ಸಹಭಾಗಿತ್ವ ಘೋಷಿಸಿದೆ. ಇದರ ಭಾಗವಾಗಿ, ಸೆಲೆಬ್ರಿಟಿ ಕ್ರಿಕೆಟ್ ಲೀಗ್​​ನ 10ನೇ ಸೀಸನ್ ಅನ್ನು ಜಿಯೋ ಸಿನಿಮಾ ನೇರಪ್ರಸಾರ ಮಾಡಲಿದೆ. ಕ್ರೀಡೆ ಮತ್ತು ಮನರಂಜನೆಗಳನ್ನು ಒಂದುಗೂಡಿಸಿ ಭಾರತದಲ್ಲಿ ರೂಪಿಸಿರುವ ಏಕಮಾತ್ರ ಪ್ರಯತ್ನ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಇದಾಗಿದೆ.

ಭಾರತದ ಎಂಟು ಚಲನಚಿತ್ರೋದ್ಯಮಗಳ ಸೂಪರ್​ ಸ್ಟಾರ್​​ಗಳನ್ನು ಒಳಗೊಂಡಿರುವ ಒಟ್ಟು ಎಂಟು ತಂಡಗಳು ಯುಎಇ ಸೇರಿದಂತೆ ಭಾರತದ ಐದು ಸ್ಥಳಗಳಲ್ಲಿ 24 ದಿನಗಳ ಕಾಲ ಕ್ರಿಕೆಟ್ ಅಂಗಳದಲ್ಲಿ ಪ್ರಶಸ್ತಿಗಾಗಿ ಕಾದಾಡಲಿವೆ. ಯುಎಇಯ ಶಾರ್ಜಾದಲ್ಲಿ ಲೀಗ್​ನ ಮೂರು ಪಂದ್ಯಗಳು ನಡೆಯಲ್ಲಿದ್ದು, ಆ ನಂತರ ಲೀಗ್ ಭಾರತಕ್ಕೆ ಕಾಲಿಡಲಿದೆ. ಭಾರತದ ಐದು ನಗರಗಳಾದ ಹೈದರಾಬಾದ್, ಬೆಂಗಳೂರು, ಚಂಡೀಗಢ, ತಿರುವನಂತಪುರ ಮತ್ತು ವಿಶಾಖಪಟ್ಟಣದಲ್ಲಿ ಉಳಿದ ಪಂದ್ಯಗಳು ನಡೆಯಲ್ಲಿವೆ. ವಾರಾಂತ್ಯದಲ್ಲಿ ಅಂದರೆ ಶನಿವಾರ ಹಾಗೂ ಭಾನುವಾರ ಡಬಲ್ ಹೆಡರ್ ಪಂದ್ಯಗಳಿರಲಿವೆ. ಅಂದರೆ ದಿನಕ್ಕೆ ಎರಡು ಪಂದ್ಯಗಳು ನಡೆಯಲ್ಲಿವೆ.

ತಂಡಗಳು ಯಾವುವು?

  • ಮುಂಬೈ ಹೀರೋಸ್
  • ಕೇರಳ ಸ್ಟ್ರೈಕರ್ಸ್
  • ತೆಲುಗು ವಾರಿಯರ್ಸ್
  • ಭೋಜ್ಪುರಿ ದಬಾಂಗ್ಸ್
  • ಕರ್ನಾಟಕ ಬುಲ್ಡೋಜರ್ಸ್
  • ಬೆಂಗಾಲ್ ಟೈಗರ್ಸ್
  • ಚೆನ್ನೈ ರೈನೋಸ್
  • ಪಂಜಾಬ್ ದಿ ಶೇರ್

ಮುಂಬೈ ಹೀರೋಸ್ ತಂಡಕ್ಕೆ ನಟ ಸಲ್ಮಾನ್ ಖಾನ್ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದು, ರಿತೇಶ್ ದೇಶಮುಖ್ ಕ್ಯಾಪ್ಟನ್ ಆಗಿದ್ದಾರೆ. ಸೋಹೈಲ್ ಖಾನ್ ಅವರು ಈ ತಂಡದ ಮಾಲೀಕ. ‘ತೆಲುಗು ವಾರಿಯರ್ಸ್’ ಟೀಮ್​ಗೆ ವೆಂಕಟೇಶ್ ಅವರು ಬ್ರ್ಯಾಂಡ್ ಅಂಬಾಸಿಡರ್. ಆ ತಂಡಕ್ಕೆ ಅಖಿಲ್ ಅಕ್ಕಿನೇನಿ ನಾಯಕನಾಗಿದ್ದಾರೆ. ‘ಕರ್ನಾಟಕ ಬುಲ್ಡೋಜರ್ಸ್’ ಟೀಮ್​ಗೆ ಕಿಚ್ಚ ಸುದೀಪ್ ಕ್ಯಾಪ್ಟನ್ ಆಗಿದ್ದಾರೆ. ಮೋಹನ್​ಲಾಲ್ ಸಹ - ಮಾಲೀಕರಾಗಿರುವ ‘ಕೇರಳ ಸ್ಟ್ರೈಕರ್ಸ್’ ತಂಡವನ್ನು ಕ್ಯಾಪ್ಟನ್ ಇಂದ್ರಜಿತ್ ಮುನ್ನಡೆಸಲಿದ್ದಾರೆ. ‘ಭೋಜಪುರಿ ದಬಾಂಗ್ಸ್’ ಟೀಮ್​​ಗೆ ಮನೋಜ್ ತಿವಾರಿ ನಾಯಕ. ಸೋನು ಸೂದ್ ಅವರು ‘ಪಂಜಾಬ್ ದೆ ಶೇರ್’ ತಂಡಕ್ಕೆ ನಾಯಕರಾಗಿದ್ದಾರೆ. ಬೋನಿ ಕಪೂರ್ ಒಡೆತನದ ‘ಬೆಂಗಾಲ್ ಟೈಗರ್ಸ್’ ಟೀಮ್​ಗೆ ಜಿಸ್ಸು ಸೇನ್ಸೇನ್ ಗುಪ್ತಾ ಕ್ಯಾಪ್ಟನ್ ಆಗಿದ್ದಾರೆ.

ಇದನ್ನೂ ಓದಿ:'ತಂದೆಯ ಬೆಲೆ ಅವರು ಇದ್ದಾಗ ಗೊತ್ತಾಗಲ್ಲ': ಅಭಿಷೇಕ್ ಅಂಬರೀಶ್ ಭಾವುಕ

Last Updated : Feb 3, 2024, 1:05 PM IST

ABOUT THE AUTHOR

...view details