ಕಾಟೇರ ಚಿತ್ರತಂಡದ ಮೂವರಿಗೆ ಕಾರು ಉಡುಗೊರೆ (ETV Bharat Kannada) ಕನ್ನಡ ಚಿತ್ರರಂಗದಲ್ಲಿ 2023ನೇ ವರ್ಷದ ಕೊನೆಯ ವಾರದಲ್ಲಿ ಬಿಡುಗಡೆ ಆಗಿ ಯಶಸ್ವಿ ಪ್ರದರ್ಶನ ಕಂಡ ಚಿತ್ರ ಕಾಟೇರ. ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡುವ ಮೂಲಕ ಸಿನಿ ಪ್ರೇಕ್ಷಕರನ್ನು ಮನಗೆದ್ದಿದೆ. ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಔಟ್ ಅಂಡ್ ಔಟ್ ಪಕ್ಕಾ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದರು. 50ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ನೂರು ದಿನ ಕಂಪ್ಲೀಟ್ ಮಾಡಿತ್ತು.
ಈ ಸಂತೋಷಕ್ಕೆ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ನಟ ದರ್ಶನ್ ಹಾಗೂ ನಿರ್ದೇಶಕ ತರುಣ್ ಸಮ್ಮುಖದಲ್ಲಿ ಚಿತ್ರದ ಕತೆಗಾರ ಜಡೇಶ್ ಹಂಪಿ, ಸಂಭಾಷಣೆಗಾರ ಮಾಸ್ತಿ, ನಟ ಸೂರಜ್ಗೆ ಕಾರು ಗಿಫ್ಟ್ ಕೊಟ್ಟಿದ್ದಾರೆ.
ಈ ಚಿತ್ರದಲ್ಲಿ ನಟಿಸಿರುವ ಸೂರಜ್ ಸಿನಿಮಾ ರಿಲೀಸ್ ಮುನ್ನ ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದರು. ಹೀಗಾಗಿ ಇವರಿಗೂ ಭರ್ಜರಿಯಾಗಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ನಟ ದರ್ಶನ್, ನಿರ್ದೇಶಕ ತರುಣ್ ಸುಧೀರ್ ಈ ಖುಷಿ ಸಂದರ್ಭದಲ್ಲಿ ಭಾಗಿಯಾಗಿದ್ದರು.
ಕಾಟೇರ 2 ?: ಕಾಟೇರ 2 ಚಿತ್ರ ಬರುತ್ತಾ ಎಂಬ ಪ್ರಶ್ನೆಗೆ ದರ್ಶನ್, "ನಾನು ಯಾವುದೇ ಕಾರಣಕ್ಕೂ ಸೀಕ್ವೆಲ್ ಸಿನಿಮಾಗಳನ್ನು ಮಾಡಲ್ಲ. ಕಾಟೇರ 2 ಬರುವುದು ಬೇಡ, ಅದು ಮಾಸ್ಟರ್ ಪೀಸ್. ಗೆದ್ದ ಎತ್ತಿನ ಬಾಲ ಹಿಡಿಯೋದು ನನಗೆ ಇಷ್ಟ ಇಲ್ಲ. ನಮ್ಮ ಟೀ ಮುಂದಿನ ದಿನಗಳಲ್ಲಿ ಬೇರೆ ಸಿನಿಮಾ ಮಾಡುತ್ತೇವೆ ಅಂದರು.
ಕಾಟೇರ ಕಂಪ್ಲೀಟ್ ಮಾಸ್ ಎಂಟರ್ಟೈನ್ಮೆಂಟ್ ಸಿನಿಮಾ. ಜಾತಿ ವ್ಯವಸ್ಥೆ, ಅಸ್ಪೃಶ್ಯತೆ, ಮೇಲು ಕೀಳು ಎಂಬ ಅನ್ಯಾಯ ಹಾಗೂ ಉಳುವವನೇ ಭೂಮಿಯ ಒಡೆಯ ಕಾಯ್ದೆ ದೇಶದಲ್ಲಿ ಎಂಥ ಬದಲಾವಣೆ ತಂದಿತ್ತು ಎಂಬುದರ ಬಗ್ಗೆ ಕಾಟೇರ ಚಿತ್ರ ಕಥೆಯನ್ನು ಒಳಗೊಂಡಿದೆ. ಈ ಸಿನಿಮಾದಲ್ಲಿ ದರ್ಶನ್ಗೆ ಜೋಡಿಯಾಗಿ ರಾಮ್ ಹಾಗೂ ಮಾಲಾಶ್ರೀ ಮಗಳು ಆರಾಧನಾ ರಾಮ್ ಬಹಳ ಚೆನ್ನಾಗಿ ನಟಿಸುವ ಮೂಲಕ ಭರವಸೆ ನಟಿಯಾಗಿದ್ದಾರೆ.
ಇದರ ಜೊತೆಗೆ ತೆಲುಗು ನಟ ಜಗಪತಿ ಬಾಬು, ವಿನೋದ್ ಆಳ್ವಾ, ಅವಿನಾಶ್, ಕುಮಾರ ಗೋವಿಂದ್, ವೈಜನಾಥ್ ಬಿರಾದಾರ್, ಶ್ರುತಿ ಪದ್ಮಾವಸಂತಿ, ಮಾಸ್ಟರ್ ಲೋಹಿತ್ ಮುಂತಾದವರು ಅಭಿನಯಿಸಿದ್ದಾರೆ.
ಇದನ್ನೂ ಓದಿ:ಟೀಸರ್ನಲ್ಲೇ ಕುತೂಹಲ ಕೆರಳಿಸಿದ ರವಿಚಂದ್ರನ್ ಅಭಿನಯದ 'ದಿ ಜಡ್ಜ್ಮೆಂಟ್' - The Judgement Teaser