ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಜೋಡಿಯ ಎರಡನೇ ಪ್ರೀ ವೆಡ್ಡಿಂಗ್ ಪ್ರೋಗ್ರಾಮ್ಗೆ ಕ್ಷಣಗಣನೆ ಆರಂಭವಾಗಿದೆ. ಸಿನಿಮಾ, ಉದ್ಯಮ, ರಾಜಕೀಯ ಮತ್ತು ಕ್ರೀಡಾ ಲೋಕದ ಗಣ್ಯಾತಿಗಣ್ಯರು ಈ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ವೈಭವೋಪೇತ ಸಂಭ್ರಮಕ್ಕೆ ಅಂಬಾನಿ ಫ್ಯಾಮಿಲಿ ಸಜ್ಜಾಗಿದೆ.
ಬಾಲಿವುಡ್ ತಾರೆಯರು ಸಮಾರಂಭದ ಕೇಂದ್ರಬಿಂದು ಎಂದೇ ಹೇಳಬಹುದು. ಹೌದು, ಹೆಚ್ಚಿನ ಸಂಖ್ಯೆಯ ಕಲಾವಿದರು ಸಮಾರಂಭಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಎರಡನೇ ವಿವಾಹಪೂರ್ವ ಸಂಭ್ರಮಾಚರಣೆ ಐಷಾರಾಮಿ ಕ್ರೂಸ್ನಲ್ಲಿ ನಡೆಯಲಿದೆ ಎಂಬುದು ವಿಶೇಷ. ಇಟಲಿಯಲ್ಲಿ ಆರಂಭಗೊಳ್ಳುವ ಈ ಕಾರ್ಯಕ್ರಮ ಜೂನ್ 1ರಂದು ಫ್ರಾನ್ಸ್‌ನಲ್ಲಿ ಕೊನೆಗೊಳ್ಳಲಿದೆ. ಜಾಗತಿಕ ಗಣ್ಯರೂ ಭಾಗವಹಿಸಲಿದ್ದಾರೆ.
ಈ ಸಡಗರದಲ್ಲಿ ಭಾಗಿಯಾಗಲು ಹೊರಟಿರುವ ನಟಿಯರಾದ ಸಾರಾ ಅಲಿ ಖಾನ್, ಜಾಹ್ನವಿ ಕಪೂರ್ ಮತ್ತು ಅನನ್ಯಾ ಪಾಂಡೆ, ಕರೀನಾ ಕಪೂರ್ ಖಾನ್, ರಶ್ಮಿಕಾ ಮಂದಣ್ಣ, ಕರೀಷ್ಮಾ ಕಪೂರ್ ಸೇರಿದಂತೆ ಹಲವರು ಏರ್ಪೋರ್ಟ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಕರೀನಾ ಇಂದು ಬೆಳಗ್ಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಡೆನಿಮ್, ಬಿಳಿ ಟೀ ಶರ್ಟ್, ವೈಟ್ ಆ್ಯಂಡ್ ಬ್ಲ್ಯೂ ಶರ್ಟ್ನಲ್ಲಿ ಕಾಣಿಸಿಕೊಂಡರು. ಹ್ಯಾಂಡ್ಬ್ಯಾಗ್, ಸನ್ಗ್ಲಾಸ್, ಜೊತೆಗೊಂದು ಕಪ್ ಹಿಡಿದು ಕ್ಯಾಶುವಲ್ ಆಗಿ ಕಾಣಿಸಿಕೊಂಡರು. ಫ್ಯಾಶನ್ ಸೆನ್ಸ್‌ಗೆ ಹೆಸರುವಾಸಿಯಾಗಿರುವ ಕರೀನಾ ಸಹೋದರಿ ಕರೀಷ್ಮಾ ಕಪೂರ್, ಬ್ಲ್ಯಾಕ್ ಪ್ಯಾಂಟ್ ಶರ್ಟ್, ಬ್ಲೂ ಬ್ಲೇಜರ್, ಕ್ಯಾಪ್ ಧರಿಸಿ ಕೂಲ್ ಲುಕ್ ಕೊಟ್ಟರು.