'ಬಿಗ್ ಬಾಸ್'. ಇದು ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ. ಸೀಸನ್ 10ರ ಗ್ರ್ಯಾಂಡ್ ಫಿನಾಲೆ ಭಾನುವಾರ ಸಂಜೆ ಪ್ರಸಾರವಾಗಿತ್ತು. ಕಾರ್ತಿಕ್ ಮಹೇಶ್ ಈ ಸೀಸನ್ನ ವಿಜೇತರಾಗಿ ಹೊರಹೊಮ್ಮಿದ್ದಾರೆ. ಅತಿ ಹೆಚ್ಚು ಕನ್ನಡಿಗರ ಮತ ಸಂಪಾದಿಸಿದ ಇವರು ಗೆಲುವಿನ ನಗೆ ಬೀರಿದ್ದಾರೆ. ಬಿಗ್ ಬಾಸ್ ಟ್ರೋಫಿ, 50 ಲಕ್ಷ ರೂಪಾಯಿ, ಒಂದು ಮಾರುತಿ ಬ್ರೀಝಾ ಕಾರು, ಸ್ಕೂಟರ್ ಅನ್ನು ಬಹುಮಾನವಾಗಿ ಪಡೆದಿದ್ದಾರೆ. ಇದೀಗ ನಟ ತಮ್ಮ ಅಭಿಮಾನಿಗಳೊಂದಿಗೆ ವಿಶೇಷ ಮನವಿ ಮಾಡಿಕೊಂಡಿದ್ದಾರೆ.
ಕಾರ್ತಿಕ್ ಮಹೇಶ್ ಮಾತು: ''ಪ್ರೀತಿಯ ಅಭಿಮಾನಿಗಳಲ್ಲಿ ಒಂದು ಕೋರಿಕೆ. ಯಾರೆಲ್ಲಾ ಶುಭ ಕೋರಲು ನನಗೆ ಕರೆ ಮಾಡ್ತಿದ್ದೀರಾ ಹಾಗೂ ಮೆಸೇಜ್ ಮಾಡ್ತಿದ್ದೀರೋ ಎಲ್ಲರ ಮೆಸೇಜ್ ನೋಡ್ತಿದ್ದೇನೆ. ಆದರೆ ಬಹಳ ಮೆಸೇಜ್ ಮತ್ತು ಕರೆ ಬರುತ್ತಿರುವ ಕಾರಣಕ್ಕೆ ಎಲ್ಲರಿಗೂ ಉತ್ತರಿಸಲು ಆಗುತ್ತಿಲ್ಲ. ನಿಮ್ಮ ಪ್ರೀತಿ, ಅಭಿಮಾನಕ್ಕೆ ನಾನು ಎಂದೆಂದೂ ಚಿರಋಣಿ. ಶುಭ ಕೋರಿದ ಎಲ್ಲಾ ಜನತೆಗೆ ಹೃದಯಪೂರ್ವಕ ಧನ್ಯವಾದಗಳು'' ಎಂದು ಕಾರ್ತಿಕ್ ಮಹೇಶ್ ಬರೆದುಕೊಂಡಿದ್ದಾರೆ.
ವಿಡಿಯೋದಲ್ಲೇನಿದೆ?: ''ಹಾಯ್, ಎಲ್ಲರಿಗೂ ನಮಸ್ಕಾರ. ವಿಷಯ ಏನಂದ್ರೆ, ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಾಗಿನಿಂದ, ರಿಸಲ್ಟ್ ಅನೌನ್ಸ್ ಆದಾಗಿನಿಂದಲೂ ಸಾಕಷ್ಟು ಕಾಲ್ಸ್, ಮೆಸೇಜ್‌ಗಳು ಬರುತ್ತಿವೆ. ನಿರಂತರವಾಗಿ ಕರೆ, ಮೆಸೇಜ್ಗಳನ್ನು ರಿಸೀವ್ ಮಾಡುತ್ತಿದ್ದೇನೆ. ಆದಾಗ್ಯೂ, ಎಲ್ಲರಿಗೂ ಉತ್ತರ ಕೊಡಲು ಸಾಧ್ಯವಾಗುತ್ತಿಲ್ಲ. ವಾಟ್ಸ್‌ಆ್ಯಪ್, ಇನ್ಸ್ಟಾಗ್ರಾಮ್ಗಳು ಮೆಸೇಜ್ಗಳಿಂದ ತುಂಬಿ ತುಳುಕುತ್ತಿವೆ. ಮೊಬೈಲ್ ಹಿಡಿದಷ್ಟು ಸಮಯ, ರಿಪ್ಲೈ ಮಾಡಲು ಪ್ರಯತ್ನಿಸಿದ್ದೇನೆ. ವೈಯಕ್ತಿಕವಾಗಿ ನನಗೆ ಕರೆ ಮಾಡುತ್ತಿರುವ, ಸಂದೇಶ ಕಳುಹಿಸುತ್ತಿರುವ ಎಲ್ಲರಿಗೂ ಧನ್ಯವಾದಗಳು. ವಿಶೇಷವಾಗಿ ನನ್ನ ಅಭಿಮಾನಿಗಳಿಗೆ ನನ್ನ ಕೃತಜ್ಞತೆಗಳು. ತುಂಬಾ ಅಂದ್ರೆ ತುಂಬಾನೇ ಕಷ್ಟಪಟ್ಟಿದ್ದೀರಾ. ಒಳಗೆ ನಾನ್ ಕಷ್ಟಪಡುತ್ತಿದ್ದರೆ, ಹೊರಗಡೆ ನನ್ನ ಫ್ಯಾನ್ ಪೇಜ್ ನಿರ್ವಹಿಸುತ್ತಿದ್ದವರು ಕಷ್ಟಪಟ್ಟಿದ್ದಾರೆ. ನನ್ನ ಗೆಲುವಿಗಾಗಿ ಅನೇಕರು ಕಷ್ಟ ಪಟ್ಟಿದ್ದಾರೆ. ಎಲ್ಲರಿಗೂ ವಿಶೇಷವಾಗಿ ಧನ್ಯವಾದ ಅರ್ಪಿಸಲು ನಾನು ಫ್ಯಾನ್ಸ್ ಮೀಟ್ ಆಯೋಜನೆ ಮಾಡಲಿದ್ದೇನೆ. ತುಂಬಾನೇ ಬ್ಯುಸಿ ಶೆಡ್ಯೂಲ್ ಇದೆ. ನಿಮ್ಮ ಕರೆ, ಸಂದೇಶ ಸ್ವೀಕರಿಸದಿದ್ದರೆ ದಯವಿಟ್ಟು ಬೇಸರ ಮಾಡಿಕೊಳ್ಳಬೇಡಿ. ಸರಿಸುಮಾರು 3 ಕೋಟಿ ಮತಗಳು ಬಂದಿವೆ. ಇದು ಸಣ್ಣ ವಿಚಾರವಂತೂ ಅಲ್ಲ. ಇಡೀ ಕರ್ನಾಟಕದ ಜನತೆಗೆ ಕೃತಜ್ಞ. ನನ್ನ ಗೆಲುವಿಗೆ ವೀಕ್ಷಕರು, ಅಭಿಮಾನಿಗಳು, ಕುಟುಂಬಸ್ಥರು, ಸ್ನೇಹಿತರು ಕಾರಣ. ಶೀಘ್ರವೇ ಸಿಗೋಣ. ಧನ್ಯವಾದಗಳು''-ಕಾರ್ತಿಕ್ ಮಹೇಶ್.