ಕರ್ನಾಟಕ

karnataka

ETV Bharat / entertainment

ಭೈರತಿ ರಣಗಲ್ ಟೀಸರ್​ನಲ್ಲಿ ಕರುನಾಡ ಚಕ್ರವರ್ತಿ ದರ್ಬಾರ್, ಅಭಿಮಾನಿಗಳು ದಿಲ್ ಖುಷ್ - Shivaraj kumar Birthday - SHIVARAJ KUMAR BIRTHDAY

ಭೈರತಿ ರಣಗಲ್ ಟೀಸರ್​ ಬಿಡುಗಡೆಯಾಗಿದ್ದು, ಕರುನಾಡ ಚಕ್ರವರ್ತಿ ದರ್ಬಾರ್​ಗೆ ಅಭಿಮಾನಿಗಳು ದಿಲ್ ಖುಷ್ ಆಗಿದ್ದಾರೆ.

BHAIRATHI RANGAL TEASER  BHAIRATHI RANGAL MOVIE RELEASE DATE  GEETHA SHIVARAJ KUMAR  BIRTHDAY CELEBRATION
ಶಿವರಾಜ್​ ಕುಮಾರ್​ ಜನ್ಮದಿನ ಆಚರಣೆ (ETV Bharat)

By ETV Bharat Karnataka Team

Published : Jul 12, 2024, 6:12 PM IST

Bhairathi Rangal Teaser: ದೊಡ್ಮನೆ ಮಗ ಹಾಗೂ ಅಭಿಮಾನಿಗಳ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್​ಗೆ ಇಂದು 62ನೇ ಜನ್ಮದಿನದ ಸಂಭ್ರಮ. ಕೆಲವು ಕಾರಣಗಳಿಂದ ಶಿವರಾಜ್ ಕುಮಾರ್ ಅಭಿಮಾನಿಗಳ ಜೊತೆ ಈ ವರ್ಷ ಹುಟ್ಟು ಹಬ್ಬ ಆಚರಿಸಿಕೊಂಡಿಲ್ಲ. ಆದರೆ ಭೈರತಿ ರಣಗಲ್ ಚಿತ್ರತಂಡದಿಂದ ಹ್ಯಾಟ್ರಿಕ್ ಹೀರೋಗೆ ಟೀಸರ್ ರಿವೀಲ್ ಮೂಲಕ ಭರ್ಜರಿ ಗಿಫ್ಟ್ ನೀಡಿದ್ದಾರೆ.

ಕರುನಾಡ ಚಕ್ರವರ್ತಿ ಅಭಿನಯದ ಹಾಗೂ ನರ್ತನ್ ನಿರ್ದೇಶನದ ಭೈರತಿ ರಣಗಲ್ ಚಿತ್ರದ ಆಫೀಶಿಯಲ್ ಟೀಸರ್ ಬಿಡುಗಡೆ ಆಗಿದ್ದು, ಟೀಸರ್​ನಲ್ಲಿ ಸೆಂಚುರಿ ಸ್ಟಾರ್ ಅಬ್ಬರಿಸಿದ್ದಾರೆ. ಟೀಸರ್ ಅದ್ದೂರಿಯಾಗಿ ಮೂಡಿ ಬಂದಿದ್ದು ಶಿವರಾಜ್ ಕುಮಾರ್ ಎರಡೂ ಶೇಡ್​ನಲ್ಲಿ ಕಾಣಿಸಿಕೊಂಡಿದ್ದು, ಭೈರತಿ ರಣಗಲ್ ಚಿತ್ರದ ಬಿಡುಗಡೆ ದಿನಾಂಕವನ್ನ ಅನೌನ್ಸ್​ ಮಾಡಲಾಗಿದೆ.

ಅಂದಹಾಗೆ ಭೈರತಿ ರಣಗಲ್ ಮಫ್ತಿ ಸಿನಿಮಾದ ಪ್ರೀಕ್ವೆಲ್ ಆಗಿದ್ದು, ನರ್ತನ್ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ. ಈ ಚಿತ್ರದ ಟೀಸರ್​ನಲ್ಲಿ ಶಿವರಾಜ್ ಹೊಡೆಯುವ ಡೈಲಾಗ್ ಅವರ ಅಭಿಮಾನಿಗಳಿಗೆ ಸಖತ್ ಕಿಕ್ ನೀಡುತ್ತಿದೆ. ನಾನು ತಾಳ್ಮೆ ಕಳೆದುಕೊಂಡಾಗಲೆಲ್ಲ ತುಂಬಾ ಜನ ತಲೆಗಳನ್ನ ಕಳೆದುಕೊಂಡಿದ್ದಾರೆ ಎಂಬ ಡೈಲಾಗ್ ಒಂದೇ ಸಾಕು ಭೈರತಿ ರಣಗಲ್ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದೆ.

ಇನ್ನು ಶಿವರಾಜ್ ಕುಮಾರ್ ಜೊತೆ ರುಕ್ಮಿಣಿ ವಸಂತ್‍, ರಾಹುಲ್ ಬೋಸ್‍, ಅವಿನಾಶ್‍, ದೇವರಾಜ್‍, ಮಧು ಗುರುಸ್ವಾಮಿ, ಛಾಯಾ ಸಿಂಗ್‍, ಬಾಬು ಹಿರಣ್ಣಯ್ಯ ಸೇರಿದಂತೆ ಮುಂತಾದವರು ಅಭಿನಯಿಸುತ್ತಿದ್ದಾರೆ. ನವೀನ್ ಕುಮಾರ್ ಛಾಯಾಗ್ರಹಣ ನಿರ್ವಹಿಸುತ್ತಿದ್ದು, ರವಿ ಬಸ್ರೂರು ಸಂಗೀತವಿದೆ.

ಗೀತಾ ಪಿಕ್ಚರ್ಸ್ ಬ್ಯಾನರ್ ಅಡಿ, ಗೀತಾ ಶಿವ ರಾಜಕುಮಾರ್ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ವೇದ ಸಿನಿಮಾ ಯಶಸ್ಸಿನ ಬಳಿಕ ಗೀತಾ ಪಿಕ್ಚರ್ಸ್ ನಿರ್ಮಿಸುತ್ತಿರುವ ಎರಡನೇ ಸಿನಿಮಾವಿದು. ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಭೈರತಿ ರಣಗಲ್ ಚಿತ್ರ ಸೆಪ್ಟೆಂಬರ್ ತಿಂಗಳಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿಯೇ ರಿಲೀಸ್ ಆಗಲಿದೆ. ಇದರ ಜೊತೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ನಿರ್ದೇಶನದ ಹಾಗೂ ಎಂ ರಮೇಶ್ ರೆಡ್ಡಿ ನಿರ್ಮಾಣದ 45ನೇ ಚಿತ್ರದಲ್ಲಿ ಶಿವರಾಜ್ ಕುಮಾರ್ ಅವರ ಫಸ್ಟ್ ಲುಕ್ ಅನಾವರಣ ಮಾಡಲಾಗಿದೆ.

ಸದ್ಯ ಔಟ್ ಆಫ್ ಸ್ಟೇಷನ್​ನಲ್ಲಿರುವ ಶಿವರಾಜ್ ಕುಮಾರ್ ತಮ್ಮ ಪತ್ನಿ ಗೀತಾ ಶಿವರಾಜ್ ಕುಮರ್ ಮತ್ತು 45 ಸಿನಿಮಾ ನಿರ್ಮಾಪಕ ಎಂ ರಮೇಶ್ ರೆಡ್ಡಿ, ಟಗರು ಚಿತ್ರ ನಿರ್ಮಾಪಕ ಕೆ.ಪಿ ಶ್ರೀಕಾಂತ್ ಹಾಗೂ ಕೆಲ ಸ್ನೇಹಿತರ ಸಮ್ಮುಖದಲ್ಲಿ ಸರಳವಾಗಿ ಕೇಕ್ ಕತ್ತರಿಸಿ 62ನೇ ಬರ್ತ್ ಡೇಯನ್ನ ಕರುನಾಡ ಚಕ್ರವರ್ತಿ ಆಚರಿಸಿಕೊಂಡಿದ್ದಾರೆ.

ಓದಿ:ರಾಜವರ್ಧನ್​​ನ 'ಹಿರಣ್ಯ' ಸಿನಿಮಾಗೆ ಡಾಲಿ, ರಾಗಿಣಿ ಸಾಥ್: ಟ್ರೇಲರ್ ರಿಲೀಸ್​​ - Hiranya Trailer

ABOUT THE AUTHOR

...view details