ಕನ್ನಡದ ಬಹುನಿರೀಕ್ಷಿತ ಚಿತ್ರ 'ಬಘೀರ' ತೆರೆಕಂಡು ಈಗಾಗಲೇ ಒಂದು ವಾರ ಪೂರೈಸಿದೆ. ರೋರಿಂಗ್ ಸ್ಟಾರ್ ಶ್ರೀಮುರಳಿ ಮತ್ತು ಚಂದನವನದ ಚೆಂದುಳ್ಳಿ ಚೆಲುವೆ ರುಕ್ಮಿಣಿ ವಸಂತ್ ತೆರೆಹಂಚಿಕೊಂಡಿರುವ ಸಿನಿಮಾ ಪ್ರೇಕ್ಷಕರನ್ನು ತಲುಪುವಲ್ಲಿ ಯಶ ಕಂಡಿದೆ. ತೆರಕಂಡ ಒಂದು ವಾರದಲ್ಲಿ ದೇಶೀಯ ಮಾರುಕಟ್ಟೆಯಲ್ಲಿ 15.46 ಕೋಟಿ ರೂಪಾಯಿಯ ವ್ಯವಹಾರ ನಡೆಸುವಲ್ಲಿ ಯಶ ಕಂಡಿದೆ.
ಈವರೆಗೆ, ಅಂದರೆ 8 ದಿನಗಳಲ್ಲಿ ಸಿನಿಮಾ 16.3 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇದು ಗ್ರಾಸ್ ಕಲೆಕ್ಷನ್ ಆದ್ರೆ, ಇಂಡಿಯಾ ನೆಟ್ ಕಲೆಕ್ಷನ್ 15.94 ಕೋಟಿ ರೂಪಾಯಿ. ಈ ಅಂಕಿ-ಅಂಶಗಳು ಸಿನಿಮಾ ಇಂಡಸ್ಟ್ರಿ ಟ್ಯಾಕರ್ ಸ್ಯಾಕ್ನಿಲ್ಕ್ ವರದಿಯನ್ನು ಆಧರಿಸಿದೆ. ಚಿತ್ರತಂಡ ಸಕ್ಸಸ್ ಮೀಟ್ನಲ್ಲಿ ಒಂದು ವಾರದಲ್ಲಿ 18 ರಿಂದ 20 ಕೋಟಿ ರೂ. ಕಲೆಕ್ಷನ್ ಆಗಿದೆ ಎಂದು ಹೇಳಿಕೊಂಡಿದೆ.
'ಬಘೀರ' ಕಲೆಕ್ಷನ್: ಸೂರಿ ನಿರ್ದೇಶನದ ಬಹುನಿರೀಕ್ಷಿತ 'ಬಘೀರ' ಸಿನಿಮಾ ಕಳೆದ ಗುರುವಾರ ಅದ್ಧೂರಿಯಾಗಿ ತೆರೆಗಪ್ಪಳಿಸಿತು. ಅಕ್ಟೋಬರ್ 31, ದೀಪಾವಳಿ ಶುಭ ಸಂದರ್ಭದಲ್ಲಿ ಬಿಡುಗಡೆಯಾದ ಸಿನಿಮಾ ಈಗಲೂ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಮುಂದುವರಿಸಿದೆ. ಕೆಜಿಎಫ್, ಕಾಂತಾರದಂತಹ ಯಶಸ್ವಿ ಸಿನಿಮಾಗಳನ್ನು ನಿರ್ಮಿಸಿದ್ದ ದಕ್ಷಿಣ ಚಿತ್ರರಂಗದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ 'ಬಘೀರ' ಕಳೆದ 8 ದಿನಗಳಲ್ಲಿ 6.3 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇಂಡಿಯಾ ನೆಟ್ ಕಲೆಕ್ಷನ್ - 15.94 ಕೋಟಿ ರೂಪಾಯಿ.
'ಬಘೀರ' ಕಲೆಕ್ಷನ್ (ಕನ್ನಡ ಆವೃತ್ತಿ):ಸ್ಯಾಕ್ನಿಲ್ಕ್ ಮಾಹಿತಿ ಪ್ರಕಾರ, 'ಬಘೀರ' ಸಿನಿಮಾ 2.55 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಬಾಕ್ಸ್ ಆಫೀಸ್ ಅಂಕಿಅಂಶಗಳನ್ನು ಪ್ರಾರಂಭಿಸಿತು. 2ನೇ ದಿನ 2.9 ಕೋಟಿ ರೂ., 3ನೇ ದಿನ 3.2 ಕೋಟಿ ರೂ., 4ನೇ ದಿನ 2.85 ಕೋಟಿ ರೂ., 5ನೇ ದಿನ 0.97 ಕೋಟಿ ರೂ., 6ನೇ ದಿನ 0.83 ಕೋಟಿ ರೂ., 7ನೇ ದಿನ 0.63 ಕೋಟಿ ರೂ., 8ನೇ ದಿನ 0.48 ಕೋಟಿ ರೂಪಾಯಿ ಸೇರಿ ಒಟ್ಟು 14.41 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.