ಕರ್ನಾಟಕ

karnataka

ETV Bharat / entertainment

ನಂಜುಂಡೇಶ್ವರ ದೇಗುಲದಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ವಿಶೇಷ ಪೂಜೆ, ಧ್ಯಾನ - Shilpa Shetty - SHILPA SHETTY

ಬಾಲಿವುಡ್​ ನಟಿ ಶಿಲ್ಪಾ ಶೆಟ್ಟಿ ಮಂಗಳವಾರ ನಂಜನಗೂಡಿನ ಶ್ರೀ ನಂಜುಂಡೇಶ್ವರ ದೇವರ ದರ್ಶನ ಪಡೆದರು.

ಶಿಲ್ಪಾ ಶೆಟ್ಟಿ  ಶ್ರೀನಂಜುಂಡೇಶ್ವರ ದರ್ಶನ
ಶ್ರೀ ನಂಜುಂಡೇಶ್ವರ ದೇಗುಲದಲ್ಲಿ ಶಿಲ್ಪಾ ಶೆಟ್ಟಿ (ETV Bharat)

By ETV Bharat Karnataka Team

Published : May 29, 2024, 10:43 AM IST

ನಂಜುಂಡೇಶ್ವರ ದೇಗುಲದಲ್ಲಿ ಶಿಲ್ಪಾ ಶೆಟ್ಟಿ (ETV Bharat)

ಮೈಸೂರು:ನಂಜನಗೂಡಿನ ಶ್ರೀ ನಂಜುಂಡೇಶ್ವರನ ಸನ್ನಿಧಾನಕ್ಕೆ ಬಾಲಿವುಡ್​​ ನಟಿ ಶಿಲ್ಪಾ ಶೆಟ್ಟಿ ಮಂಗಳವಾರ ಭೇಟಿ ನೀಡಿ, ದರ್ಶನ ಪಡೆದರು. ದೇವಸ್ಥಾನದ ಆವರಣದಲ್ಲಿ‌ ಅರ್ಧ ಗಂಟೆಗೂ ಹೆಚ್ಚು ಸಮಯ ಕಳೆದ ನಟಿ, ಕೆಲ ಹೊತ್ತು ಧ್ಯಾನ ಮಾಡಿದರು.

ಶಿಲ್ಪಾ ಶೆಟ್ಟಿ ದೇವಾಲಯಕ್ಕೆ ಬಂದಿರುವ ವಿಷಯ ತಿಳಿದು ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಗಳು ಮುಂದಾದರು. ಆದರೆ ಭದ್ರತಾ ಸಿಬ್ಬಂದಿ ಅವಕಾಶ ನೀಡಲಿಲ್ಲ. ದೇವಾಲಯದಿಂದ ತೆರಳುವ ಮುನ್ನ ನಟಿ, ಪೊಲೀಸರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡರು.

ಶ್ರೀ ನಂಜುಂಡೇಶ್ವರ ದೇಗುಲದಲ್ಲಿ ನಟಿ ಶಿಲ್ಪಾ ಶೆಟ್ಟಿ (ETV Bharat)

ಏಪ್ರಿಲ್​ ಕೊನೆಯಲ್ಲಿ ಶಿಲ್ಪಾ ಶೆಟ್ಟಿ ಮಂಗಳೂರಿಗೆ ಆಗಮಿಸಿದ್ದರು. ಆ ಸಂದರ್ಭದಲ್ಲಿ ಶಿಬರೂರಿನ ಶ್ರೀ ಕೊಡಮಣಿತ್ತಾಯ ಕ್ಷೇತ್ರದಲ್ಲಿ ಬ್ರಹ್ಮಕುಂಭಾಭಿಷೇಕ, ನಾಗಮಂಡಲ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇದಾದ ಬಳಿಕ ಮಂಗಳೂರಿನಲ್ಲಿ ದೈವಕೋಲದಲ್ಲಿ ಮಕ್ಕಳೊಂದಿಗೆ ಸಾಂಪ್ರದಾಯಿಕ ಉಡುಗೆಯಲ್ಲಿ ಪಾಲ್ಗೊಂಡಿದ್ದರು.

ಇದನ್ನೂ ಓದಿ:ತಡರಾತ್ರಿ ಲಂಬೋರ್ಗಿನಿಯಲ್ಲಿ ಲಾಂಗ್​ ಡ್ರೈವ್ ಹೊರಟ ನಟಿ ಶ್ರದ್ದಾ ಕಪೂರ್ - Shraddha Kapoor

ABOUT THE AUTHOR

...view details