ಮೈಸೂರು:ಅರಮನೆ ನಗರಿ ಮೈಸೂರಿನ ವಸ್ತುಪ್ರದರ್ಶನ ಆವರಣದಲ್ಲಿ ನಟ ಡಾಲಿ ಧನಂಜಯ ಹಾಗೂ ಧನ್ಯತಾ ಅವರ ಮದುವೆ ಕಾರ್ಯಕ್ರಮಗಳು ಇಂದು ನಡೆಯುತ್ತಿದ್ದು, ನಾಳೆಯೂ ನಡೆಯಲಿದೆ.
ಧನಂಜಯ ಹಾಗೂ ಧನ್ಯತಾ ಮದುವೆ ಶಾಸ್ತ್ರ (ETV Bharat) ಇಂದು ವೇದಿಕೆಯಲ್ಲಿ ಚಪ್ಪರ ದಿನದ ಅರಿಶಿನ ಶಾಸ್ತ್ರ ಸಾಂಪ್ರದಾಯಿಕವಾಗಿ ನೆರವೇರಿತು. ಕುಟುಂಬಸ್ಥರು, ಸಂಬಂಧಿಕರು ಹಾಗೂ ಸ್ನೇಹಿತರು ಸಿನಿಮಾ ರಂಗದ ಕಲಾವಿದರು ಭಾಗವಹಿಸಿದರು. ಹಾಗೇ ಸಂಜೆ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ.
ಧನಂಜಯ ಹಾಗೂ ಧನ್ಯತಾ ಮದುವೆ ಶಾಸ್ತ್ರ (ETV Bharat) ಈ ಕಾರ್ಯಕ್ರಮಕ್ಕೂ ನಟ-ನಟಿಯರು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ. ಇವರ ಜತೆ ಅಭಿಮಾನಿಗಳು ಸೇರಿದಂತೆ ಹಲವರು ಆಗಮಿಸಲಿದ್ದಾರೆ. ಅಭಿಮಾನಿಗಳಿಗೂ ಊಟದ ವ್ಯವಸ್ಥೆ ಇರಲಿದೆ. ಜತೆಗೆ ಗಣ್ಯರಿಗೆ ವಿಶೇಷ ದ್ವಾರವಿದ್ದು, ಸಂಪೂರ್ಣ ವ್ಯವಸ್ಥೆ ಮಾಡಲಾಗಿದೆ.
ಇದನ್ನೂ ಓದಿ:ಹುಟ್ಟೂರಿನ ಮನೆಯಲ್ಲಿ ನಟ ಡಾಲಿ ಧನಂಜಯ್ ಸಾಂಪ್ರದಾಯಿಕ ಮದುವೆ ಶಾಸ್ತ್ರ