ಕರ್ನಾಟಕ

karnataka

ETV Bharat / entertainment

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ: 'ಕೆಜಿಎಫ್ ​2' ಅತ್ಯುತ್ತಮ ಕನ್ನಡ ಸಿನಿಮಾ - NATIONAL FILM AWARD TO KGF 2

2022ನೇ ಸಾಲಿನ 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಪೈಕಿ 'ಕೆಜಿಎಫ್ ​2' ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಗೆದ್ದಿದೆ. ನವದೆಹಲಿಯ ವಿಜ್ಞಾನ ಭವನದಲ್ಲಿಂದು ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಶಸ್ತಿ ಪ್ರದಾನ ಮಾಡಿದ್ದಾರೆ.

KGF 2 won Best kannada film National Film Awards
'ಕೆಜಿಎಫ್ ​2'ಗೆ 'ಅತ್ಯುತ್ತಮ ಕನ್ನಡ ಸಿನಿಮಾ' ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ (ETV Bharat)

By ETV Bharat Entertainment Team

Published : Oct 8, 2024, 4:57 PM IST

ಕನ್ನಡ ಚಿತ್ರರಂಗದ ಕೀರ್ತಿ ಹೆಚ್ಚಿಸಿರುವ 'ಕೆಜಿಎಫ್ ​2' ಅತ್ಯುತ್ತಮ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯುತ್ತಿದ್ದು, 'ಕೆಜಿಎಫ್ ​2' ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ನಿರ್ಮಾಪಕ ವಿಜಯ್​ ಕಿರಗಂದೂರ್ ಪತ್ನಿ ಶೈಲಜಾ ವಿಜಯ್ ಪ್ರತಿಷ್ಟಿತ ಪ್ರಶಸ್ತಿ ಸ್ವೀಕರಿಸಿದರು. ​

ಕನ್ನಡದ 3 ಚಿತ್ರಗಳು 6 ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನವಾಗಿವೆ. ಅದರಂತೆ, ನಿರೀಕ್ಷೆಗೂ ಮೀರಿ ಅಭೂತಪೂರ್ವ ಯಶಸ್ಸು ಕಂಡಿರುವ 'ಕೆಜಿಎಫ್ ​2' ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

'ಕೆಜಿಎಫ್​​ 2':ಚಂದನವನದ ಕೀರ್ತಿ ಹೆಚ್ಚಿಸಿದ ಹಿರಿಮೆ 'ಕೆಜಿಎಫ್​​ 2'ಗೆ ಸಲ್ಲುತ್ತದೆ. ರಾಕಿಂಗ್​ ಸ್ಟಾರ್ ಯಶ್​​​ ಅವರ ಅಮೋಘ ಅಭಿನಯ ಪ್ರೇಕ್ಷಕರು, ಅಭಿಮಾನಿಗಳು ಮಾತ್ರವಲ್ಲದೇ ಭಾರತೀಯ ಚಿತ್ರರಂಗದ ಗಣ್ಯಾತಿಗಣ್ಯರನ್ನು ಸೆಳೆದಿತ್ತು. ಕನ್ನಡದ ಗಡಿ ದಾಟಿ, ದೇಶ-ವಿದೇಶಗಳಲ್ಲಿ ಸದ್ದು ಮಾಡಿದ ಸಿನಿಮಾವಿದು. 2022ರ ಏಪ್ರಿಲ್​​ 14ರಂದು ತೆರೆಕಂಡ ಸಿನಿಮಾ ಬ್ಲಾಕ್​ಬಸ್ಟರ್ ಹಿಟ್​​​​ ಆಗಿತ್ತು. ಪ್ರಶಾಂತ್​ ನೀಲ್​​ ನಿರ್ದೇಶನಾ ಶೈಲಿಗೆ ಬಹುಪರಾಕ್​​ ಕೇಳಿಬಂದಿತ್ತು. ಹೊಂಬಾಳೆ ಫಿಲ್ಮ್ಸ್​ನ ವಿಜಯ್​ ಕಿರಗಂದೂರ್​​ ಸಾರಥ್ಯದಲ್ಲಿ ನಿರ್ಮಾಣಗೊಂಡ ಚಿತ್ರ ಹಲವು ದಾಖಲೆಗಳನ್ನು ಬರೆದಿತ್ತು. 100 ಕೋಟಿ ರೂ ಬಜೆಟ್​ನ ಈ ಚಿತ್ರ ಸಾವಿರಾರು ಕೋಟಿ ರೂ ಸಂಗ್ರಹಿಸುವಲ್ಲಿ ಯಶಸ್ವಿಯಾಗಿತ್ತು. ಶ್ರೀನಿಧಿ ಶೆಟ್ಟಿ, ಬಾಲಿವುಡ್​ ಸೂಪರ್​ ಸ್ಟಾರ್​ಗಳಾದ ರವೀನಾ ಟಂಡನ್​​, ಸಂಜಯ್​​​ ದತ್​​ ಪ್ರಮುಖ ಪಾತ್ರಗಳಲ್ಲಿ ಅಬ್ಬರಿಸಿದ್ದರು.

ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಆಗಸ್ಟ್ 16ರಂದು ಘೋಷಿಸಿತ್ತು. ಈ ಬಗ್ಗೆ ಸಂತಸ ವ್ಯಕ್ತಪಡಿಸಿದ್ದ ಸಿನಿಮಾದ ನಾಯಕ ನಟ ರಾಕಿಂಗ್​ ಸ್ಟಾರ್​ ಯಶ್​, 'ಎಲ್ಲ ರಾಷ್ಟ್ರ ಪ್ರಶಸ್ತಿ ವಿಜೇತರಿಗೆ ಅಭಿನಂದನೆಗಳು. ನಮ್ಮ ರಿಷಬ್​ ಶೆಟ್ಟಿ, ವಿಜಯ್​ ಕಿರಗಂದೂರು, ಪ್ರಶಾಂತ್​ ನೀಲ್​​​ ಮತ್ತು ಸಂಪೂರ್ಣ ಹೊಂಬಾಳೆ ಫಿಲ್ಮ್ಸ್ ಟೀಮ್​ಗೆ ಹೃತ್ಪೂರ್ವಕ ಶುಭಾಶಯ. ಕಾಂತಾರ, ಕೆಜಿಎಫ್ 2 ಚಿತ್ರಗಳಿಗೆ ಇದು ಅರ್ಹ ಮನ್ನಣೆ. ಕನ್ನಡ ಚಿತ್ರರಂಗ ಇನ್ನೂ ದಾಖಲೆ ಬರೆಯಲಿದೆ. ನಿಜಕ್ಕೂ ಸ್ಯಾಂಡಲ್​ವುಡ್​​ ರಾಷ್ಟ್ರಮಟ್ಟದಲ್ಲಿ ಮಿಂಚಿದ ಕ್ಷಣವಿದು' ಎಂದು ಸೋಷಿಯಲ್​ ಮೀಡಿಯಾ ಪೋಸ್ಟ್ ಮೂಲಕ ತಿಳಿಸಿದ್ದರು.

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತ ಸಿನಿಮಾಗಳ ಪಟ್ಟಿ:

  • ಅತ್ಯುತ್ತಮ ಆ್ಯಕ್ಷನ್​​ ಡೈರೆಕ್ಷನ್​​: ಕೆಜಿಎಫ್​ 2.
  • ಅತ್ಯುತ್ತಮ ಕನ್ನಡ ಸಿನಿಮಾ: ಕೆಜಿಎಫ್​ 2.
  • ಚೊಚ್ಚಲ ಚಿತ್ರದಲ್ಲಿ ಅತ್ಯುತ್ತಮ ನಿರ್ದೇಶಕ: ಮಧ್ಯಂತರ ಕಿರುಚಿತ್ರ ಡೈರೆಕ್ಟರ್​​ ದಿನೇಶ್ ಶೆಣೈ.
  • ಅತ್ಯುತ್ತಮ ಸಂಕಲನ: ಮಧ್ಯಂತರ ಕಿರುಚಿತ್ರ.
  • ಅತ್ಯುತ್ತಮ ನಟ: ರಿಷಬ್ ಶೆಟ್ಟಿ (ಕಾಂತಾರ ಸಿನಿಮಾ).
  • ಅತ್ಯುತ್ತಮ ಸಂಪೂರ್ಣ ಮನರಂಜನಾ ಸಿನಿಮಾ: ಕಾಂತಾರ.

ABOUT THE AUTHOR

...view details