ಕರ್ನಾಟಕ

karnataka

ETV Bharat / education-and-career

ರಾಣಿ ಚನ್ನಮ್ಮ ವಿವಿ: ತಾತ್ಕಾಲಿಕ ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಬೆಳಗಾವಿಯ ರಾಣಿ ಚನ್ನಮ್ಮ ವಿ.ವಿ.ಯಲ್ಲಿರುವ ತಾತ್ಕಾಲಿಕ ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ವಾಕ್​ ಇನ್​ ಇಂಟರ್​ವ್ಯೂ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

By ETV Bharat Karnataka Team

Published : 5 hours ago

Temporary Guest Faculty jobs in Rani Channamma University
ಉದ್ಯೋಗ ಮಾಹಿತಿ (ETV Bharat)

ಬೆಂಗಳೂರು: ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ತಾತ್ಕಾಲಿಕ ಅತಿಥಿ ಉಪನ್ಯಾಸಕರ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ವಿ.ವಿ.ಯ ವಿವಿಧ ಸ್ನಾತಕೋತ್ತರ ಅಧ್ಯಯನ ವಿಭಾಗಗಳಲ್ಲಿ ನೇಮಕಾತಿ ನಡೆಯಲಿದೆ.

ಹುದ್ದೆಗಳು: ಒಟ್ಟು 51 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

ಯಾವ ವಿಭಾಗದಲ್ಲಿ ಎಷ್ಟು ಹುದ್ದೆಗಳಿವೆ?

  • ಕನ್ನಡ - 4
  • ಅರ್ಥಶಾಸ್ತ್ರ - 2
  • ವಾಣಿಜ್ಯ - 4
  • ಎಂಎಸ್​ಡಬ್ಲ್ಯೂ - 2
  • ಇಂಗ್ಲಿಷ್​​ - 3
  • ಕ್ರಿಮಿನಾಲಜಿ ಮತ್ತು ಫಾರೆನ್ಸಿಕ್​ ಸೈನ್ಸ್​ - 1
  • ಕಂಪ್ಯೂಟರ್​​ ಸೈನ್ಸ್​​ - 8
  • ಶಿಕ್ಷಣ - 1
  • ಇತಿಹಾಸ - 3
  • ರಸಾಯನಶಾಸ್ತ್ರ - 1
  • ಭೌತಶಾಸ್ತ್ರ - 3
  • ಪ್ರಾಣಿಶಾಸ್ತ್ರ - 5
  • ಸಸ್ಯಶಾಸ್ತ್ರ - 5
  • ಪತ್ರಿಕೋದ್ಯಮ - 3
  • ಭೂಗೋಳಶಾಸ್ತ್ರ - 1
  • ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ - 2
  • ಗಣಿತಶಾಸ್ತ್ರ - 3

ವಿದ್ಯಾರ್ಹತೆ: ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು.

ನೇಮಕಾತಿ ಅವಧಿ: 10 ತಿಂಗಳು.

ಅಧಿಸೂಚನೆ (ರಾಣಿ ಚನ್ನಮ್ಮ ವಿವಿ ವೆಬ್​ಸೈಟ್​​)

ಅರ್ಜಿ ಸಲ್ಲಿಕೆ:ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ಹಾಜರಾಗುವ ಮೊದಲು ವಿ.ವಿ.ಯ ಅಧಿಕೃತ ಜಾಲತಾಣದಲ್ಲಿನ ಗೂಗಲ್​ ಶೀಟ್​ ಲಿಂಕ್​ ಮೂಲಕ ಅರ್ಜಿ ಭರ್ತಿ ಮಾಡಬೇಕು. ಅರ್ಜಿ ಹಾಗೂ ಮೂಲ ದಾಖಲೆಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕು. ಮೌಖಿಕ ಸಂದರ್ಶನದ ದಿನಾಂಕ ಮತ್ತು ಸಮಯವನ್ನು ವಿಶ್ವವಿದ್ಯಾಲಯದ ಜಾಲತಾಣದಲ್ಲಿ ಮುಂಬರುವ ದಿನಗಳಲ್ಲಿ ಪ್ರಕಟಿಸಲಾಗುತ್ತದೆ.

ಅಕ್ಟೋಬರ್​ 14ರಿಂದ ಗೂಗಲ್​ ಶೀಟ್​ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕಡೇಯ ದಿನಾಂಕ ಅಕ್ಟೋಬರ್​ 30. ಈ ಕುರಿತು ಹೆಚ್ಚಿನ ಮಾಹಿತಿಗೆ rcub.ac.inಇಲ್ಲಿಗೆ ಭೇಟಿ ನೀಡಿ.

ಇದನ್ನೂ ಓದಿ:PUC ಆದವರಿಗೆ ರೈಲ್ವೆಯಲ್ಲಿ ಭರ್ಜರಿ ಉದ್ಯೋಗಾವಕಾಶ: ಮೊದಲ ತಿಂಗಳಿಂದಲೇ 40 ಸಾವಿರ ಸಂಬಳ, ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ ಯಾವಾಗ?

ABOUT THE AUTHOR

...view details