ಬೆಂಗಳೂರು: ಭಾರತದ ಸರ್ವೋಚ್ಛ ನ್ಯಾಯಾಲಯದಲ್ಲಿ ಖಾಲಿ ಇರುವ 107 ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಸೀನಿಯರ್ ಅಸಿಸ್ಟೆಂಟ್ ಮತ್ತು ಅಸಿಸ್ಟಂಟ್ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಗಳ ವಿವರ: ಒಟ್ಟು ಹುದ್ದೆಗಳು- 107
- ಕೋರ್ಟ್ ಮಾಸ್ಟರ್ (ಶಾರ್ಟ್ ಹ್ಯಾಂಡ್- ಗ್ರೂಪ್-ಎ ಗೆಜೆಟೆಡ್ ಹುದ್ದೆಗಳು) - 31
ಗ್ರೂಪ್- ನಾನ್ ಗೆಜೆಟೆಡ್ ಹುದ್ದೆಗಳು:
- ಸೀನಿಯರ್ ಪರ್ಸನಲ್ ಅಸಿಸ್ಟೆಂಟ್ - 33
- ಪರ್ಸನಲ್ ಅಸಿಸ್ಟೆಂಟ್ - 43
ವಿದ್ಯಾರ್ಹತೆ:
ಕೋರ್ಟ್ ಮಾಸ್ಟರ್(ಶಾರ್ಟ್ ಹ್ಯಾಂಡ್):ಪದವಿ ವಿದ್ಯಾರ್ಹತೆ. ಇಂಗ್ಲಿಷ್ ಶಾರ್ಟ್ಹ್ಯಾಂಡ್ ಗೊತ್ತಿರಬೇಕು. ಕಂಪ್ಯೂಟರ್ ಜ್ಞಾನ ಹಾಗೂ ಈಗಾಗಲೇ ಖಾಸಗಿ/ಸರ್ಕಾರಿ ವಲಯದಲ್ಲಿ ಪಿಎ ಆಗಿ ಐದು ವರ್ಷ ಹುದ್ದೆ ನಿರ್ವಹಿಸಿದ ಅನುಭವ ಹೊಂದಿರಬೇಕು.