ಕರ್ನಾಟಕ

karnataka

ETV Bharat / education-and-career

ದೆಹಲಿ ಪೊಲೀಸ್​​ ಮತ್ತು ಸಿಎಪಿಎಫ್​ನಲ್ಲಿ SI ಹುದ್ದೆಗೆ ಎಸ್​ಎಸ್​ಸಿ ಅಧಿಸೂಚನೆ

ದೆಹಲಿ ಪೊಲೀಸ್​ ಮತ್ತು ಕೇಂದ್ರ ಶಸ್ತ್ರಾಸ್ತ್ರ ಪೊಲೀಸ್​ ಪಡೆಗಳಲ್ಲಿನ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

SSC Recruitment for Sub inspector post
SSC Recruitment for Sub inspector post

By ETV Bharat Karnataka Team

Published : Mar 5, 2024, 3:50 PM IST

ಬೆಂಗಳೂರು: ಸಿಬ್ಬಂದಿ ನೇಮಕಾತಿ ಆಯೋಗದಿಂದ (ಎಸ್​ಎಸ್​ಸಿ) ದೆಹಲಿ ಪೊಲೀಸ್​ ಮತ್ತು ಕೇಂದ್ರ ಶಸ್ತ್ರಾಸ್ತ್ರ ಪೊಲೀಸ್​ ಪಡೆಗೆ (ಸಿಎಪಿಎಫ್​​) ಸಬ್​ ಇನ್ಸ್​ಪೆಕ್ಟರ್​ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಒಟ್ಟು 4,197 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಮಹಿಳಾ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಅಧಿಸೂಚನೆ

ಹುದ್ದೆ ವಿವರ:ಎಸ್​ಎಸ್​ಸಿ ಹುದ್ದೆಗಳ ಮಾಹಿತಿ ಹೀಗಿದೆ.

  • ದೆಹಲಿ ಪೊಲೀಸ್ ಎಸ್​ ಐ ಹುದ್ದೆ​ ಪುರಷರು - 125
  • ದೆಹಲಿ ಪೊಲೀಸ್​ ಎಸ್​ಐ ಹುದ್ದೆ ಮಹಿಳಾ - 61
  • ಸಿಎಪಿಎಫ್ - 892
  • ಸಿಐಎಸ್​ಎಫ್​​ - 160
  • ಸಿಆರ್​​ಪಿಎಫ್​​ - 1172
  • ಐಟಿಬಿಪಿ - 278
  • ಎಸ್​ಎಸ್​ಬಿ - 62

ವಿದ್ಯಾರ್ಹತೆ:ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪದವಿ ಪೂರ್ಣಗೊಳಿಸಿರಬೇಕು.

ವೇತನ: 35,400 – 1,12,400 ರೂ ಮಾಸಿಕ

ವಯೋಮಿತಿ: ಅಭ್ಯರ್ಥಿಗಳು ಕನಿಷ್ಠ 20 ವರ್ಷದಿಂದ ಗರಿಷ್ಠ ವಯೋಮಿತಿ 25 ವರ್ಷ. ಒಬಿಸಿ ಅಭ್ಯರ್ಥಿಗಳಿಗೆ 3ವರ್ಷ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.

ಅರ್ಜಿ ಸಲ್ಲಿಕೆ: ಈ ಹುದ್ದೆಗೆ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಸಾಮಾನ್ಯ, ಒಬಿಸಿ, ಇಡಬ್ಲ್ಯೂಎಸ್​ ಅಭ್ಯರ್ಥಿಗಳಿಗೆ 100 ರೂ ಅರ್ಜಿ ಶುಲ್ಕ ನಿಗದಿ ಪಡಿಸಲಾಗಿದ್ದು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.

ಆಯ್ಕೆ ಪ್ರಕ್ರಿಯೆ: ಈ ಹುದ್ದೆಗಳಿಗೆ ಲಿಖಿತ ಪರೀಕ್ಷೆ, ದೈಹಿಕ ಸಾಮರ್ಥ್ಯ ಪರೀಕ್ಷೆ, ದಾಖಲಾತಿ ಪರಿಶೀಲನೆ, ವೈದ್ಯಕೀಯ ತಪಾಸಣೆ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು. ಈ ಹುದ್ದೆಗೆ ಅಭ್ಯರ್ಥಿಗಳು ಮಾರ್ಚ್​ 4 ರಿಂದ ಅರ್ಜಿ ಸಲ್ಲಿಕೆ ಮಾಡಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಮಾರ್ಚ್​ 28 ಆಗಿದೆ.

ಈ ಹುದ್ದೆ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು ssc.nic.in ಇಲ್ಲಿಗೆ ಭೇಟಿ ನೀಡಬಹುದು.

ಬಿಇಎಲ್​ನಲ್ಲಿ ಉದ್ಯೋಗ:ಭಾರತ್​ ಎಲೆಕ್ಟ್ರಾನಿಕ್ಸ್​​ ಲಿಮಿಟೆಡ್​ನಲ್ಲಿ 24 ಹಿರಿಯ ಸಹಾಯಕ ಇಂಜಿನಿಯರ್​ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ವಿಶಾಖಪಟ್ಟಣಂ, ಕಾರವಾರ, ಕೊಚ್ಚಿ, ಗುವಾಹಟಿ ಕಚೇರಿಗೆ ನೇಮಕಾತಿ ನಡೆಯಲಿದೆ. ಡಿಪ್ಲೊಮಾ ಪದವೀಧರರು ಅರ್ಜಿ ಸಲ್ಲಿಸಬಹುದು. ಗರಿಷ್ಠ 50 ವರ್ಷ ವಯೋಮಿತಿ ಹೊಂದಿರುವವರು ಅರ್ಜಿ ಹಾಕಬಹುದು. ಅಭ್ಯರ್ಥಿಗಳು ಬಿಇಎಲ್​ ವೆಬ್​ಸೈಟ್​ನಲ್ಲಿ ಸಿಗುವ ನಿಗದಿತ ಅರ್ಜಿ ತುಂಬಿ, ಈ ಕೆಳಗಿನ ವಿಳಾಸಕ್ಕೆ ಸಲ್ಲಿಸಬೇಕಿದೆ. ಅಸಿಸ್ಟೆಂಟ್​ ಮ್ಯಾನೇಜರ್​​, ಎಚ್​ಆರ್​​, ಭಾರತ್​ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್​​, ಮಿಲಿಟರಿ ಕಮ್ಯೂನಿಕೇಷನ್​ ಮತ್ತು ಎನ್​ಡಬ್ಲ್ಯೂಸಿಎಸ್​ - ಎಸ್​ಬಿಯು, ಜಾಲಹಳ್ಳಿ ಪೋಸ್ಟ್​, ಬೆಂಗಳೂರು-560013.

ಈ ಹುದ್ದೆಗೆ ಅರ್ಜಿ ಸಲ್ಲಿಸಲು ಕಡೇಯ ದಿನ ಮಾರ್ಚ್​​ 20. ಹೆಚ್ಚಿನ ಮಾಹಿತಿಗೆ bel-india.inಇಲ್ಲಿಗೆ ಭೇಟಿ ನೀಡಿ.

ಇದನ್ನೂ ಓದಿ: ಕರ್ನಾಟಕ ವಿಧಾನ ಪರಿಷತ್ ಸಚಿವಾಲಯದಲ್ಲಿ ಚಾಲಕ​​, ಗ್ರೂಪ್​ ಡಿ ಹುದ್ದೆಗೆ ಅರ್ಜಿ ಆಹ್ವಾನ

ABOUT THE AUTHOR

...view details