ಬೆಂಗಳೂರು: ಕರ್ನಾಟಕದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಸಮಾಲೋಚಕರು, ಕೋ- ಆರ್ಡಿನೇಟರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ವಿಶ್ವ ಬ್ಯಾಂಕ್ ನಿಧಿಯ ಕರ್ನಾಟಕ ಸುಸ್ಥಿರ ಗ್ರಾಮೀಣ ನೀರು ಪೂರೈಕೆ ಕಾರ್ಯಕ್ರಮಕ್ಕಾಗಿ ಈ ಹುದ್ದೆಗಳ ಭರ್ತಿ ನಡೆಸಲಾಗುವುದು. ಒಂದು ವರ್ಷದ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಈ ನೇಮಕಾತಿ ನಡೆಯಲಿದೆ.
ಉದ್ಯೋಗ ವಿವರ: ಒಟ್ಟು 47 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಹುದ್ದೆ ವಿವರ ಹೀಗಿದೆ.
- ಪ್ರೊಕ್ಯೂರ್ಮೆಂಟ್ ಕನ್ಸಲ್ಟಂಟ್ - 9
- ಮಾನಿಟರಿಂಗ್ ಅಂಡ್ ಎವಲ್ಯೂಷನ್ ಕನ್ಸಲ್ಟಂಟ್ - 10
- ಎನ್ವರ್ಮೆಂಟಲ್ ಕನ್ಸಲ್ಟಂಟ್ - 10
- ಸೋಷಿಯಲ್ ಡೆವಲ್ಮೆಂಟ್ ಕನ್ಸಲ್ಟಂಟ್ - 7
- ಫೈನಾನ್ಸ್ ಕನ್ಸಲ್ಟಂಟ್ - 11
ರಾಜ್ಯ ವಿವಿಧ ಜಿಲ್ಲೆಗಳಲ್ಲಿ ಈ ಹುದ್ದೆಗಳ ನೇಮಕಾತಿ ನಡೆಯಲಿದೆ. ಅಧಿಸೂಚನೆಯಲ್ಲಿ ಉಲ್ಲೇಖಿಸಿದ ಜಿಲ್ಲೆಗಳಲ್ಲಿ ಉದ್ಯೋಗ ನಿರ್ವಹಣೆ ಆಯ್ಕೆಗೆ 3 ಜಿಲ್ಲೆಗಳನ್ನು ಆಯ್ಕೆ ಮಾಡಬಹುದಾಗಿದೆ.
ವಿದ್ಯಾರ್ಹತೆ: ಅಭ್ಯರ್ಥಿಗಳು ಸಂಬಂಧಿಸಿದ ಕ್ಷೇತ್ರದಲ್ಲಿ ಅಧಿಸೂಚನೆಯಲ್ಲಿ ತಿಳಿಸಿರುವಂತೆ ಪದವಿಯನ್ನು ಹೊಂದಿರಬೇಕಿದೆ. ಜೊತೆಗೆ ಸಂಬಂಧಿಸಿದ ಕ್ಷೇತ್ರದಲ್ಲಿ 2 ವರ್ಷ ಹುದ್ದೆ ನಿರ್ವಹಿಸಿರುವ ಅನುಭವ ಹೊಂದಿರಬೇಕು.
ವೇತನ: ಈ ಹುದ್ದೆಗೆ ಮಾಸಿಕ ₹ 50,000 ದಿಂದ 75,000 ವರೆಗೆ ವೇತನ ನಿಗದಿಸಲಾಗಿದೆ.
ವಯೋಮಿತಿ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 45 ವರ್ಷ ವಯೋಮಿತಿ ಮೀರಿರಬಾರದು.