ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ ಸಚಿವಾಲಯದಲ್ಲಿರುವ 32 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇನ್ನು ಮೂರು ದಿನ ಅವಕಾಶವಿದೆ. ಖಾಲಿ ಇರುವ ವಾಹನ ಚಾಲಕರು ಮತ್ತು ಗ್ರೂಪ್ ಡಿ ಹುದ್ದೆಗಳಿಗೆ ಆಸಕ್ತರು ಏಪ್ರಿಲ್ 5ರೊಳಗೆ ಅರ್ಜಿ ಸಲ್ಲಿಸಬೇಕಿದೆ.
ಹುದ್ದೆಗಳ ವಿವರ: ವಾಹನ ಚಾಲಕರು- 3, ಗ್ರೂಪ್ ಡಿ- 29.
ವಿದ್ಯಾರ್ಹತೆ: ವಾಹನ ಚಾಲಕರ ಹುದ್ದೆಗೆ ಎಸ್ಎಸ್ಎಲ್ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು. ಮೋಟಾರು ಕಾರು ಅಥವಾ ಭಾರೀ ವಾಹನ ಚಾಲನೆಯ ಅಧಿಕೃತ ಚಾಲನ ಪರವಾನಗಿ ಮತ್ತು ಮೂರು ವರ್ಷದ ಅನುಭವದ ಪ್ರಮಾಣ ಪತ್ರ ಹೊಂದಿರಬೇಕು. ಪ್ರಥಮ ಚಿಕಿತ್ಸೆಯ ಪ್ರಮಾಣ ಪತ್ರ ಇರಬೇಕು.
ಗ್ರೂಪ್ ಡಿ:ಎಸ್ಎಸ್ಎಲ್ಸಿ ಅಥವಾ ತತ್ಸಮಾನ ವಿದ್ಯಾರ್ಹತೆ
ವಯೋಮಿತಿ: ಕನಿಷ್ಠ 18, ಗರಿಷ್ಠ 35 ವರ್ಷ. ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಪ.ಜಾ, ಪ.ಪಂ ಮತ್ತು ಪ್ರವರ್ಗ 1 ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ.
ವೇತನ: ವಾಹನ ಚಾಲಕ ಹುದ್ದೆ-21,400-42,000 ರೂ ಮಾಸಿಕ. ಗ್ರೂಪ್ ಡಿ 17,000-28,950 ರೂ ಮಾಸಿಕ.
ಅರ್ಜಿ ಸಲ್ಲಿಕೆ: ಸರ್ಕಾರಿ ಪುಸ್ತಕ ಮಳಿಗೆಯಿಂದ ನಮೂನೆ -1ರ ದ್ವಿಪ್ರತಿ ಪಡೆದು, ಅಗತ್ಯ ದಾಖಲೆಯೊಂದಿಗೆ ಈ ಕೆಳಗಿನ ವಿಳಾಸಕ್ಕೆ ಖುದ್ದು ತಲುಪಿಸಬಹುದು.
ಕಾರ್ಯದರ್ಶಿ, ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯ, ಅಂಚೆ ಪೆಟ್ಟಿಗೆ ಸಂಖ್ಯೆ 5079. ಮೊದಲನೇ ಮಹಡಿ, ವಿಧಾನಸೌಧ, ಬೆಂಗಳೂರು- 560001.
ಅರ್ಜಿ ಶುಲ್ಕ: ಸಾಮಾನ್ಯ ಅಭ್ಯರ್ಥಿಗಳಿಗೆ 600, ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 300, ಮಾಜಿ ಸೈನಿಕ ಅಭ್ಯರ್ಥಿಗಳಿಗೆ 50 ರೂ, ಪ.ಜಾ, ಪ.ಪಂ, ಪ್ರವರ್ಗ 1 ಹಾಗೂ ವಿಶೇಷಚೇತನ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
ಅಭ್ಯರ್ಥಿಗಳನ್ನು ಚಾಲನಾ ಸಾಮರ್ಥ್ಯ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಈ ಕುರಿತ ಅಧಿಕೃತ ಅಧಿಸೂಚನೆಗೆ kla.kar.nic.in ಭೇಟಿ ನೀಡಿ.
384 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳು:ಕೆಪಿಎಸ್ಸಿಯಿಂದ ಅಧಿಸೂಚನೆ ಹೊರಡಿಸಲಾದ ಗೆಜೆಟೆಡ್ ಪ್ರೊಬೇಷನರಿ ಗ್ರೂಪ್ ಎ ವೃಂದದ 159 ಹುದ್ದೆಗಳು ಮತ್ತು ಗ್ರೂಪ್ ಬಿ ವೃಂದದ 225 ಹುದ್ದೆಗಳು ಸೇರಿ ಒಟ್ಟು 384 ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಕಡೆಯ ದಿನ ಏಪ್ರಿಲ್ 4.
ವಯೋಮಿತಿ: ಕನಿಷ್ಠ 21 ವರ್ಷ. ಸಾಮಾನ್ಯ ವರ್ಗದವರಿಗೆ ಗರಿಷ್ಠ 38 ವರ್ಷ. ಹಿಂದುಳಿದ ವರ್ಗದವರಿಗೆ ಗರಿಷ್ಠ 41 ವರ್ಷ. ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಪ್ರವರ್ಗ-1 ಅಭ್ಯರ್ಥಿಗಳಿಗೆ 43 ವರ್ಷ.
ವಿದ್ಯಾರ್ಹತೆ: ಯಾವುದೇ ಪದವಿ.
ಅರ್ಜಿ ಶುಲ್ಕ: ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 600 ರೂ, ಇತರೆ ಹಿಂದುಳಿದ ಎಲ್ಲ ವರ್ಗದ ಅಭ್ಯರ್ಥಿಗಳಿಗೆ 300 ರೂ, ಮಾಜಿ ಸೈನಿಕ ಅಭ್ಯರ್ಥಿಗಳಿಗೆ 50 ರೂ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಅರ್ಜಿ ಶುಲ್ಕದ ಜೊತೆಗೆ ಎಲ್ಲಾ ಅಭ್ಯರ್ಥಿಗಳು ಪ್ರೋಸೆಸಿಂಗ್ ಚಾರ್ಜ್ 35 ರೂ ಪಾವತಿಸಬೇಕು.
ಇದನ್ನೂ ಓದಿ: ದೇಶಾದ್ಯಂತ ನೇಮಕಾತಿಯಲ್ಲಿ ಶೇ 3ರಷ್ಟು ಹೆಚ್ಚಳ; ವೈಟ್-ಕಾಲರ್ ಗಿಗ್ ಉದ್ಯೋಗದಲ್ಲಿ 184ರಷ್ಟು ಏರಿಕೆ